ದಿಬ್ಬಣ ಹೋಗೋ ರಸ್ತೆಯಲ್ಲಿ ಲೈಟೇ ಇಲ್ಲ, ಮದ್ವೆ ಕ್ಯಾನ್ಸಲ್‌ ಮಾಡ್ಕೊಂಡು ಹೊರಟೇ ಹೋದ ವರ!

By Vinutha PerlaFirst Published May 14, 2023, 12:13 PM IST
Highlights

ಹಿಂದಿನ ಕಾಲದಲ್ಲೆಲ್ಲಾ ಜಾತಕದೋಷ, ಕುಜದೋಷ ಇದ್ರೆ ಮದುವೆ ಕ್ಯಾನ್ಸಲ್ ಆಗಿಬಿಡುತ್ತಿತ್ತು. ಆದ್ರೆ ಇವತ್ತಿನ ಕಾಲದಲ್ಲೋ ಮದುವೆ ಕ್ಯಾನ್ಸಲ್ ಆಗಲು ದೊಡ್ಡ ಕಾರಣಗಳೇ ಬೇಕಿಲ್ಲ. ಸಣ್ಣಪುಟ್ಟ ಕಾರಣಕ್ಕೂ ಮದ್ವೆ ಕ್ಯಾನ್ಸಲ್ ಆಗುತ್ತದೆ. ಅಲಹಾಬಾದ್‌ನಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ಹಾಗೆಯೇ ಆಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮದುವೆ ಅನ್ನೋದು ಒಂದು ಪವಿತ್ರವಾದ ಸಂಬಂಧ. ಹೀಗಾಗಿ ಗುರು-ಹಿರಿಯರು ಎಲ್ಲರೂ ನೋಡಿ ಪರಸ್ಪರ ಒಪ್ಪಿಗೆ ಸೂಚಿಸಿ ಒಳ್ಳೆಯ ಮುಹೂರ್ತ ನೋಡಿ ಮದುವೆ ಮಾಡಿಸುತ್ತಾರೆ. ಜೋಡಿ ನೂರ್ಕಾಲ ಸುಖವಾಗಿರಲಿ ಎಂದು ಹಾರೈಸುತ್ತಾರೆ. ಆದ್ರೆ ಈ ಕಾಲದಲ್ಲಿ ಎಲ್ಲಾ ವಸ್ತುಗಳ ವ್ಯಾಲಿಡಿಟಿ ಕಮ್ಮಿಯಾಗಿರೋ ಹಾಗೆಯೇ ಮದುವೆಯ ವ್ಯಾಲಿಡಿಟಿಯೂ ಕಡಿಮೆಯಾಗಿದೆ. ಮದುವೆಯಾಗಿ ತಿಂಗಳಾಗೋ ಒಳಗೇ ಡೈವೋರ್ಸ್‌ಗೆ ಅಪ್ಲೈ ಮಾಡುವ ದಂಪತಿಯಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ನಂತರವೂ ಮದುವೆ ಕ್ಯಾನ್ಸಲ್ ಮಾಡಿಕೊಳ್ಳುವುದು ಅತಿ ಸಾಮಾನ್ಯವಾಗಿದೆ. ಅಷ್ಟೇ ಯಾಕೆ, ಮದುವೆ ಮಂಟಪದಲ್ಲಿ ತಾಳಿ ಕಟ್ಟಿದ ನಂತರವೂ ಮದುವೆ ಮುರಿದು ಬೀಳುತ್ತದೆ.

ಆರ್ಕೆಸ್ಟ್ರಾ ಕಲಾವಿದರು ತಡವಾಗಿ ಬಂದಿದ್ದರಿಂದ ವಾಗ್ವಾದ
ಹಾಗೆಯೇ ಇಲ್ಲೊಬ್ಬ ವರ, ಮದುವೆ ದಿಬ್ಬಣ (Wedding Procession) ಹೋಗೋ ರಸ್ತೆಯಲ್ಲಿ ಲೈಟೇ ಇಲ್ಲ ಎಂದು ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾನೆ. ಡಿಜೆ ಮತ್ತು ರೋಡ್ ಲೈಟ್ ವಿಚಾರದಲ್ಲಿ ವಧುವಿನ (Bride) ಕುಟುಂಬದವರೊಂದಿಗೆ ವಾದ ವಿವಾದದ ಹಿನ್ನೆಲೆಯಲ್ಲಿ ವರನೊಬ್ಬ ತನ್ನ ಮದುವೆಯ ಮೆರವಣಿಗೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೋದ ಘಟನೆ ಅಲಹಾಬಾದ್‌ನ ಬರಹುಲಾ ಗ್ರಾಮದಲ್ಲಿ ವರದಿಯಾಗಿದೆ. 

ವರನ ಕುಟುಂಬ ಕಡಿಮೆ ಚಿನ್ನಾಭರಣ ಕೊಟ್ಟಿದ್ದಕ್ಕೆ ಮದ್ವೆ ಕ್ಯಾನ್ಸಲ್ ಮಾಡಿದ ವಧು!

ವರದಿಯ ಪ್ರಕಾರ, ಮಿಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಲಿಯಾ ಮೂಲದ ವರನಿಗೆ ಬುಧವಾರ (ಮೇ 10) ಬರಹುಲಾದಿಂದ ವಧುವನ್ನು ಮದುವೆಯಾಗಲು ನಿರ್ಧರಿಸಲಾಗಿತ್ತು. ವರದಿಯ ಪ್ರಕಾರ, ದಿಬ್ಬಣ ಜನರೊಂದಿಗೆ ಆಗಮಿಸಿತು ಮತ್ತು ವಧುವಿನ ಕಡೆಯವರು ಸಂಪ್ರದಾಯದ ಪ್ರಕಾರ ಶಾಸ್ತ್ರಗಳನ್ನು ಮಾಡಿದರು. ನಂತರ ವಿವಾಹದ ಮೆರವಣಿಗೆಯು ಪ್ರಾರಂಭವಾಯಿತು. ಆದರೆ, ಆರ್ಕೆಸ್ಟ್ರಾ ಕಲಾವಿದರು ತಡವಾಗಿ ಬಂದಿದ್ದರಿಂದ ವರ ಮತ್ತು ವಧುವಿನ ಕಡೆಯವರ ನಡುವೆ ವಾಗ್ವಾದ (Quarrel) ನಡೆಯಿತು.

ಮದುವೆ ದಿಬ್ಬಣದಿಂದ ಹೊರಟು ಹೋದ ವರ
ಸ್ಪಲ್ಪ ಹೊತ್ತಿನಲ್ಲೇ, ಮೆರವಣಿಗೆಯಲ್ಲಿ ಬಂದ ಕೆಲವು ಜನರು ಮತ್ತು ವಧುವಿನ ಕುಟುಂಬದವರು ವಾಗ್ವಾದಕ್ಕಿಳಿದರು. ಪರಸ್ಪರ ಘರ್ಷಣೆಯೊಂದಿಗೆ ವಾದವನ್ನು ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ವರ, ದಿಬ್ಬಣ ಬರೋ ದಾರಿಯಲ್ಲಿ ಲೈಟ್ಸ್ ಇರಲ್ಲಿಲ್ಲ ಎಂದು ಜಗಳಕ್ಕಿಳಿದನು. ಜಗಳದ ಸಮಯದಲ್ಲಿ, ವರನ ಜೊತೆ ಕೆಲವು ಮಂದಿ ದಿಬ್ಬಣವನ್ನು ಬಿಟ್ಟು ಹೊರಟು ಹೋದರು. ನಂತರ ಗ್ರಾಮಸ್ಥರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೆ, ವರ ಅದಾಗಲೇ ಹೊರಟು ಹೋಗಿದ್ದು, ಹಿರಿಯರ ಮಧ್ಯಪ್ರವೇಶದ ನಡುವೆಯೂ ಮದುವೆಗೆ ಬಂದಿರಲಿಲ್ಲ.

ಬ್ಯಾಂಡ್‌ ದುಡ್ಡು ನಾವ್ ಕೊಡಲ್ಲಪ್ಪಾ, ಮದುವೆಯೇ ಕ್ಯಾನ್ಸಲ್‌ ಮಾಡಿ ಹೊರಟ ಮದುಮಗ !

ಘಟನೆಯ ನಂತರ, ವಧುವಿನ ಕುಟುಂಬವು ವಿವಾಹವನ್ನು ಶಾಸ್ತ್ರೋಕ್ತವಾಗಿ ಮಾಡಲು ಪೊಲೀಸರನ್ನು ಸಂಪರ್ಕಿಸಿತು. ವರನಿಗೆ ವರದಕ್ಷಿಣೆ ಹಾಗೂ ಬೈಕ್ ನೀಡಲು ಜಮೀನನ್ನು ಅಡಮಾನವಿಟ್ಟಿರುವುದಾಗಿ ವಧುವಿನ ಸಹೋದರ ತಿಳಿಸಿದ್ದಾರೆ. ಆದರೆ, ಅವರು ಮದುವೆಯನ್ನು ಮಧ್ಯದಲ್ಲಿಯೇ ಕೈ ಬಿಟ್ಟರು ಎಂಬುದಾಗಿ ತಿಳಿಸಿದರು. ನಂತರ ವರನ ಕೂಡ ಪೊಲೀಸ್ ಠಾಣೆಗೆ ಬಂದು ತನ್ನ ಮಗ ವಧುವನ್ನು ಮದುವೆಯಾಗುವುದಾಗಿ ಭರವಸೆ ನೀಡಿದರು.

ಶೀಟ್ ಹಾಕಿದ ಗಂಡನ ಮನೆ, ಪ್ರೈವೇಸಿನೆ ಇಲ್ಲ, ಮದುವೆ ಕ್ಯಾನ್ಸಲ್ ಮಾಡ್ಕೊಂಡ ವಧು!
ಕೇರಳದಲ್ಲಿ ವಧು (Bride) ವರನ ಶೀಟ್ ಹಾಕಿದ ಮನೆಯನ್ನು ನೋಡಿ ಮದುವೆ (Marriage)ಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ. ತ್ರಿಶ್ಯೂರ್‌ ಜಿಲ್ಲೆಯ ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದೆ. ದಿನಗೂಲಿ ಕಾರ್ಮಿಕನಾಗಿರುವ ವರ (Groom) ಐದು ಸೆಂಟ್ಸ್ ಭೂಮಿಯಲ್ಲಿ ಶೀಟ್‌ ಹೊದಿಸಿದ ಮನೆಯನ್ನು ಹೊಂದಿದ್ದಾನೆ. ಈ ಮನೆಯಲ್ಲಿ ನನಗೆ ಕನಿಷ್ಠ ಪ್ರಮಾಣದ ಖಾಸಗಿತನವೂ (Privacy) ಇರುವುದಿಲ್ಲ ಎಂದು ವಧು ದೂರಿದ್ದಾಳೆ. ನಾನು ಈ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತೇನೆ ಎಂದು ಹಠ ಮಾಡಿದ್ದಾಳೆ. 

ಇದರಿಂದಾಗಿ ಎರಡೂ ಗುಂಪುಗಳ ಮಧ್ಯೆ ಜಗಳ ನಡೆಯಿತು. ವಧುವಿನ ಮನೆಯವರು ಮತ್ತು ವರನ ಕುಟುಂಬದವರು ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದರು. ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ ಎಂದು ತಿಳಿದ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿದರು.. ಪೊಲೀಸರು ಆಗಮಿಸಿದಾಗ ವಧು ವರನ ಮನೆಗೆ ಹೋಗಲು ನಿರಾಕರಿಸಿದಳು. ನಂತರ ವಧು-ವರರಿಬ್ಬರೂ ಮದುವೆಯನ್ನು ರದ್ದುಗೊಳಿಸಿದರು.

click me!