ಮೀ ಟೂ ಬಳಿಕ ಮಹಿಳೆಯರೊಂದಿಗೆ ಮಾತಾಡಲೂ ಪುರುಷರಿಗೆ ಭಯ!

By Web Desk  |  First Published May 26, 2019, 5:42 PM IST

ಮೀ ಟೂ ಆಂದೋಲನದ ಬಳಿಕ ಮಹಿಳೆಯರ ಜೊತೆ ಮಾತನಾಡಲು ಪುರುಷರಿಗೆ ಭಯವಂತೆ! ಆಫೀಸ್‌ಗಳನ್ನು ಮಹಿಳೆಯರ ವ್ಯವಹರಿಸಲು ಪುರುಷರು ಭಯಪಡ್ತಾರಂತೆ!


ಕಳೆದ ವರ್ಷ ಸಿನಿಮಾ, ಮಾಧ್ಯಮ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಸ್ತ್ರೀಯರು ಸ್ವತಃ ತಮಗಾದ ಕೆಟ್ಟ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮೀ ಟೂ ಆಂದೋಲನವನ್ನು ಆರಂಭಿಸಿದ್ದರು.

ಜಾಗತಿಕವಾಗಿ ಆರಂಭಗೊಂಡ ಈ ಆಂದೋಲನ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸದ್ದು ಮಾಡಿತ್ತು. ಆದರೆ ಈ ಮೀಟೂ ಆಂದೋಲನದ ನಂತರದಲ್ಲಿ ಅನೇಕ ಪುರುಷರು ಮಹಿಳೆಯರ ಬಳಿ ಮಾತನಾಡಲೂ ಮುಜುಗರ
ಪಡುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

Latest Videos

undefined

ಲೀನ್.ಆರ್ಗ್ ನಡೆಸಿದ ಸಮೀಕ್ಷೆಯಲ್ಲಿ ಶೇ. 60 ಕ್ಕಿಂತಲೂ ಹೆಚ್ಚಿನ ಪುರುಷರು ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯೊಂದಿಗೆ ಸಂವಾದ ನಡೆಸುವ ವೇಳೆ ತಮಗೆ ಇರಿಸುಮುರುಸು, ಮುಜುಗರ ಉಂಟಾಗುತ್ತದೆ
ಎಂದು ಹೇಳಿಕೊಂಡಿದ್ದಾರೆ. ಕಂಪನಿಗಳ ಸಭೆಗಳಲ್ಲಿ ಮಹಿಳೆಯರೊಂದಿಗೆ ಮಾತನಾಡುವಾಗ ನರ್ವಸ್ ಆಗುವುದಾಗಿಯೂ ಹೇಳಿಕೊಂಡಿದ್ದಾರೆ. ಗಮನಿಸಬೇಕಾದ ಅಂಶ ಎಂದರೆ ಈ ಸಂಖ್ಯೆ 2018 ರಲ್ಲಿ ಶೇ.32 ರಷ್ಟಿತ್ತು. ಈ ಬಗ್ಗೆ
ಪ್ರತಿಕ್ರಿಯೆ ನೀಡಿರುವ ಲೀನ್.ಆರ್ಗ್ ಸಂಸ್ಥಾಪಕ ಶ್ರೇಲಿ ಸ್ಯಾಂಡ್‌ಬರ್ಗ್, ‘ಅಮೆರಿಕದ ಶೇ. 60 ಮ್ಯಾನೇಜರ್‌ಗಳು ಮಹಿಳೆಯರೊಂದಿಗೆ ನೇರಾ ನೇರ ಸಂವಾದ ಮಾಡುವಾಗ ಭಯ ಉಂಟಾಗುವುದಾಗಿ ಹೇಳಿಕೊಂಡಿದ್ದಾರೆ. 

ಅಲ್ಲದೆ ಮಹಿಳಾ ಸಹೋದ್ಯೋಗಿಗಳೊಂದಿಗೆ ಪ್ರಯಾಣಿಸಲು, ಊಟ ಮಾಡಲೂ ಹಿಂದುಮುಂದು ನೋಡುತ್ತಾರಂತೆ’ ಎಂದಿದ್ದಾರೆ. ಆದರೆ ಸಮೀಕ್ಷೆಗೆ ಒಳಪಡಿಸಿದವರಲ್ಲಿ ಹೆಚ್ಚಿನವರು ಸಾಮೂಹಿಕವಾಗಿ ಪ್ರಯಾಣಿಸಲು ಅಥವಾ
ಊಟ ಮಾಡಲು ಅಷ್ಟೇನೂ ಮುಜುಗರ ಇಲ್ಲ ಎಂದು ಹೇಳಿದ್ದಾರಂತೆ.

 

click me!