ಕರಿಬೇವಿನ ಎಲೆ ಕಾಡಿನಷ್ಟು ದಟ್ಟವಾಗಿ ಬೆಳೆಸೋದು ಹೇಗೆ? ಎಲ್ಲರ ಮನೆಯಲ್ಲಿರೋ ಈ 2 ಪದಾರ್ಥ ಸಾಕಂತೆ

Published : Jun 26, 2026, 12:17 PM IST
Curry leaf plant care

ಸಾರಾಂಶ

Gardening Tips: ಕರಿಬೇವು ಗಿಡ ಮನೆಯ ಕುಂಡದಲ್ಲಿ ಸರಿಯಾಗಿ ಬೆಳೆಯುತ್ತಿಲ್ಲ ಎಂಬ ಚಿಂತೆ ನಿಮಗಿದೆಯೇ? ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಅಥವಾ ಗಿಡ ಸೊರಗುತ್ತಿದ್ದರೆ ಇನ್ನು ಚಿಂತೆ ಬಿಡಿ. ಮನೆಯಲ್ಲಿ ಸಿಗೊ ಕೇವಲ ಎರಡು ಪದಾರ್ಥ ಬಳಸಿ ಕರಿಬೇವು ಗಿಡವನ್ನ ಕಾಡಿನಂತೆ ದಟ್ಟವಾಗಿ ಬೆಳೆಸ್ಬೋದು.  

Curry leaf plant care: ಭಾರತೀಯ ಅಡುಗೆಮನೆಯಲ್ಲಿ ಕರಿಬೇವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಒಗ್ಗರಣೆ ಇರಲಿ, ಸಾಂಬಾರ್ ಅಥವಾ ಪೋಹಾ ಹೀಗೆ ಯಾವುದೇ ತಿಂಡಿಗೆ ಕರಿಬೇವು ಇಲ್ಲದಿದ್ದರೆ ಅದರ ರುಚಿಯೇ ಅಪೂರ್ಣ. ಆದರೆ ಮನೆಯ ಕುಂಡದಲ್ಲಿ ಬೆಳೆಸಿದ ಕರಿಬೇವು ಗಿಡ ಹೆಚ್ಚಾಗಿ ಒಣಗುವುದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಅಥವಾ ಗಿಡ ಎತ್ತರಕ್ಕೆ ಬೆಳೆಯದೆ ಕುಂಠಿತವಾಗುವುದು ಸಾಮಾನ್ಯ ದೂರು. ನೀವು ಕೂಡ ಇಂತಹ ಸಮಸ್ಯೆಯಿಂದ ಬೇಸತ್ತಿದ್ದರೆ, ಇನ್ನು ಚಿಂತೆ ಬಿಡಿ.

ಓರ್ವ ಗಾರ್ಡನಿಂಗ್ ಎಕ್ಸ್‌ಪರ್ಟ್ಸ್ ಕರಿಬೇವು ಗಿಡವನ್ನು ವೇಗವಾಗಿ ಮತ್ತು ಹಸಿರಾಗಿ ಬೆಳೆಸಲು ಒಂದು ಅದ್ಭುತವಾದ ಮನೆಮದ್ದನ್ನ ತಿಳಿಸಿದ್ದಾರೆ. ಇದಕ್ಕೆ ನೀವು ಮಾರುಕಟ್ಟೆಯಿಂದ ದುಬಾರಿ ಗೊಬ್ಬರ ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿ ಸಿಗುವ ಎರಡು ಉಚಿತ ಪದಾರ್ಥಗಳಿಂದಲೇ ಗಿಡಕ್ಕೆ 'ಬೂಸ್ಟರ್ ಟಾನಿಕ್' ಸಿದ್ಧಪಡಿಸಬಹುದು.

ಗಿಡಕ್ಕೆ ಬೇಕಾಗುವ ಆ ಎರಡು ಉಚಿತ ಪದಾರ್ಥಗಳು

ಬಳಸಿದ ಚಹಾ ಪುಡಿ (Used Tea Leaves): ಚಹಾ ಮಾಡಿದ ನಂತರ ಉಳಿಯುವ ಪುಡಿಯನ್ನು ಎಸೆಯಬೇಡಿ. ಅದರಲ್ಲಿರುವ ಹಾಲು ಮತ್ತು ಸಕ್ಕರೆಯ ಅಂಶ ಹೋಗುವವರೆಗೆ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಇದರಲ್ಲಿ ಸಾರಜನಕ (Nitrogen) ಸಮೃದ್ಧವಾಗಿದ್ದು, ಎಲೆಗಳು ಹಸಿರಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಕಟ್ಟಿಗೆಯ ಬೂದಿ (Wood Ash): ಒಲೆ ಅಥವಾ ಹವನದ ನಂತರ ಉಳಿಯುವ ಕಟ್ಟಿಗೆಯ ಬೂದಿ ಗಿಡಕ್ಕೆ ಸಂಜೀವಿನಿ ಇದ್ದಂತೆ. ಇದರಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳಿದ್ದು, ಬೇರುಗಳನ್ನು ಬಲಪಡಿಸುತ್ತದೆ ಮತ್ತು ಗಿಡಕ್ಕೆ ಕೀಟಬಾಧೆ ತಗುಲದಂತೆ ನೋಡಿಕೊಳ್ಳುತ್ತದೆ.

ಲಿಕ್ವಿಡ್ ಗೊಬ್ಬರ ತಯಾರಿಸುವ ವಿಧಾನ

ಹಂತ 1: ಒಂದು ಪ್ಲಾಸ್ಟಿಕ್ ಡಬ್ಬಿ ಅಥವಾ ಬಕೆಟ್‌ನಲ್ಲಿ ಒಂದು ಲೀಟರ್ ಶುದ್ಧ ನೀರನ್ನು ತೆಗೆದುಕೊಳ್ಳಿ.
ಹಂತ 2: ಈ ನೀರಿಗೆ 3 ದೊಡ್ಡ ಚಮಚ ಒಣಗಿಸಿದ ಚಹಾ ಪುಡಿ ಮತ್ತು 1 ದೊಡ್ಡ ಚಮಚ ಕಟ್ಟಿಗೆಯ ಬೂದಿಯನ್ನು ಹಾಕಿ ಚೆನ್ನಾಗಿ ಕಲಕಿ.
ಹಂತ 3: ಈ ಮಿಶ್ರಣವನ್ನು ಒಂದು ಬಟ್ಟೆಯಿಂದ ಮುಚ್ಚಿ ಎರಡು ದಿನಗಳ ಕಾಲ ನೆರಳಿನಲ್ಲಿ ಇಡಿ. ನೇರ ಸೂರ್ಯನ ಬೆಳಕು ಬೀಳದ ಜಾಗದಲ್ಲಿಡುವುದು ಮುಖ್ಯ. ಈ ಎರಡು ದಿನಗಳಲ್ಲಿ ಚಹಾ ಪುಡಿ ಮತ್ತು ಬೂದಿಯಲ್ಲಿರುವ ಎಲ್ಲಾ ಪೋಷಕಾಂಶಗಳು ನೀರಿನಲ್ಲಿ ಬೆರೆತು ಅತ್ಯಂತ ಶಕ್ತಿಯುತವಾದ ಗೊಬ್ಬರ ತಯಾರಾಗುತ್ತದೆ.

ಬಳಸುವ ಸರಿಯಾದ ಕ್ರಮ

*ಎರಡು ದಿನಗಳ ನಂತರ ಈ ಮಿಶ್ರಣವನ್ನು ಸೋಸಿಕೊಳ್ಳಿ. ಗಮನಿಸಿ, ಈ ತಯಾರಾದ ದ್ರಾವಣ ಬಹಳ ಸಾಂದ್ರವಾಗಿರುತ್ತದೆ, ಆದ್ದರಿಂದ ಇದನ್ನು ನೇರವಾಗಿ ಗಿಡಕ್ಕೆ ಹಾಕಬೇಡಿ. ಈ ಒಂದು ಲೋಟ ದ್ರಾವಣಕ್ಕೆ 5 ಲೋಟ ಸಾಧಾರಣ ನೀರನ್ನು ಬೆರೆಸಿ ತೆಳುಗೊಳಿಸಿ.
*ಈ ಗೊಬ್ಬರವನ್ನು ಹಾಕುವ ಮೊದಲು ಕರಿಬೇವು ಗಿಡದ ಬುಡದ ಮಣ್ಣನ್ನು ಒಂದು ಕುರ್ಪಿಯಿಂದ (Trowel) ಹಗುರವಾಗಿ ಸಡಿಲಗೊಳಿಸಿ (ಗುದ್ದಲಿ ಮಾಡಿ). ನಂತರ ಸಿದ್ಧಪಡಿಸಿದ ಮಿಶ್ರಣವನ್ನು ಗಿಡದ ಬೇರುಗಳಿಗೆ ಹಾಕಿ.

ನೆನಪಿನಲ್ಲಿಡಬೇಕಾದ ಅಂಶಗಳು

ಮಾಲಿಗಳ ಪ್ರಕಾರ, ಈ ಮನೆಮದ್ದನ್ನು ತಿಂಗಳಿಗೊಮ್ಮೆ ಮಾತ್ರ ಬಳಸಬೇಕು. ಅತಿಯಾಗಿ ಬಳಸುವುದರಿಂದ ಮಣ್ಣಿನ ಗುಣಮಟ್ಟ ಬದಲಾಗಬಹುದು. ನಿಯಮಿತವಾಗಿ ಈ ವಿಧಾನ ಪಾಲಿಸುವುದರಿಂದ ಗಿಡದಲ್ಲಿ ಹೊಸ ಚಿಗುರುಗಳು ಬರುತ್ತವೆ, ಎಲೆಗಳು ದೊಡ್ಡದಾಗಿ ಮತ್ತು ಕಡು ಹಸಿರು ಬಣ್ಣದಿಂದ ಕಂಗೊಳಿಸುತ್ತವೆ. ನಿಮ್ಮ ಮನೆಯ ಕರಿಬೇವು ಗಿಡ ಕೂಡ ಕೆಲವೇ ದಿನಗಳಲ್ಲಿ ಕಾಡಿನಂತೆ ದಟ್ಟವಾಗಿ ಬೆಳೆಯುತ್ತದೆ.

ಇಲ್ಲಿದೆ ನೋಡಿ ವಿಡಿಯೋ 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹುಡುಗಿಯರ ಕೈಗೆ ರಾಯಲ್ ಲುಕ್ ನೀಡೋ 5 ಸ್ಟೈಲಿಶ್ ಗೋಲ್ಡನ್ ಬ್ರೇಸ್ಲೆಟ್ ಕಾಂಬೋಸ್!
ಕೇವಲ ಒಂದು ಟವೆಲ್ ಸುಳಿವಿನಿಂದ ಅತ್ಯಾ**ರಿಯನ್ನು ಕಂಡುಹಿಡಿದ 'ಮೇರಿ'ಗೆ 10 ಸಾವಿರ ಬಹುಮಾನ