ಅಂದು ಜೀವಂತ ಸಮಾಧಿ, ಇಂದು ಭೀಕರ ಹತ್ಯೆ! ಕೇತನ್ ಕೊಲೆ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂತು ಲೋಹಗಢ ಕೋಟೆ ರಹಸ್ಯ

Published : Jun 25, 2026, 12:06 PM IST
Ketan Agarwal case

ಸಾರಾಂಶ

Lohagad Fort murder: ಲೋಹಗಢ ಕೋಟೆಗೆ ಚಾರಣಕ್ಕೆ ಹೋದ ಕೇತನ್ ಅಗರ್ವಾಲ್ ಮತ್ತು ಸಿಯಾ ಅವರ ಪ್ರೇಮಕಥೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಪ್ರಿಯಕರನನ್ನೇ ಬೆಟ್ಟದ ಮೇಲಿಂದ ನೂಕಿ ಕೊಂದ ಸಿಯಾಳ ಕೃತ್ಯಕ್ಕೆ ಈ ಕೋಟೆ ಮೌನ ಸಾಕ್ಷಿಯಾಗಿದೆ. ಅಂದು ಕೋಟೆಯ ರಕ್ಷಣೆಗಾಗಿ ಮನುಷ್ಯರನ್ನು ಜೀವಂತ ಸಮಾಧಿ ಮಾಡಲಾಗುತ್ತಿದ್ದ ಜಾಗದಲ್ಲೇ ಇಂದು ಕೇತನ್ ಪ್ರಾಣ ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕೋಟೆಯ ಅಸಲಿ ಮಿಸ್ಟರಿ ಏನು? 

ಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಲಾದಲ್ಲಿರುವ ಪ್ರಸಿದ್ಧ 'ಲೋಹಗಢ ' ಕೋಟೆ (Lohagad Fort) ಈಗ ಸುದ್ದಿಯಲ್ಲಿದೆ. ಆದರೆ ಈ ಬಾರಿ ಅದು ಪ್ರವಾಸಿ ತಾಣವಾಗಿ ಅಲ್ಲ, ಬದಲಾಗಿ ಅಲ್ಲಿ ನಡೆದ ಒಂದು ಭೀಕರ ಕೊ*ಲೆಯಿಂದಾಗಿ ಸಂಚಲನ ಮೂಡಿಸಿದೆ. 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal case) ಅವರನ್ನು ಅವರ ಭಾವಿ ಪತ್ನಿ ಸಿಯಾ ಎಂಬಾಕೆ ಕೋಟೆಯ ಎತ್ತರದಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯ ಬೆನ್ನಲ್ಲೇ, ಈ ಕೋಟೆಯ 2000 ವರ್ಷಗಳ ಹಳೆಯ ನಿಗೂಢ ಇತಿಹಾಸ ಮತ್ತು ಅಲ್ಲಿನ ಭಯಾನಕ ಲೋಕಕಥೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

2000 ವರ್ಷಗಳಷ್ಟು ಹಳೆಯ ಲೋಹಗಢ ಕೋಟೆಯ ಇತಿಹಾಸ

'ಲೋಹಗಢ ' ಎಂದರೆ 'ಕಬ್ಬಿಣದ ಕೋಟೆ'. ಇದರ ಇತಿಹಾಸ ಸುಮಾರು 2000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಶಾತವಾಹನರ ಕಾಲದಲ್ಲಿ ಈ ಕೋಟೆಯ ಅಡಿಪಾಯ ಹಾಕಲಾಗಿತ್ತು. ನಂತರದ ಶತಮಾನಗಳಲ್ಲಿ ನಿಝಾಮ್‌ಶಾಹಿ, ಬಿಜಾಪುರ ಸುಲ್ತಾನರು, ಮೊಘಲರು ಮತ್ತು ಮರಾಠರು ಈ ಕೋಟೆಯನ್ನು ಆಳಿದ್ದಾರೆ. ಪಶ್ಚಿಮ ಘಟ್ಟದ ವ್ಯಾಪಾರ ಮಾರ್ಗಗಳ ಮೇಲೆ ನಿಗಾ ಇಡಲು ಈ ಕೋಟೆ ಆಯಕಟ್ಟಿನ ಸ್ಥಳವಾಗಿತ್ತು. 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿರುವ ಈ ಕೋಟೆ ಹತ್ತಲು ಇಂದಿಗೂ ಸಾಹಸವೇ ಸರಿ.

ಗಣೇಶ ದರ್ವಾಜಾ ಮತ್ತು ಜೀವಂತ ಸಮಾಧಿಯ ರಹಸ್ಯ

'ಲೋಹಗಢ ' ಕೋಟೆಯ ಅತ್ಯಂತ ಭಯಾನಕ ಕಥೆ ಇಲ್ಲಿನ 'ಗಣೇಶ ದರ್ವಾಜಾ' (Ganesh Darwaza) ದೊಂದಿಗೆ ಬೆಸೆದುಕೊಂಡಿದೆ. ಸ್ಥಳೀಯ ಪುರಾಣಗಳ ಪ್ರಕಾರ, ಈ ಬೃಹತ್ ದ್ವಾರದ ಅಡಿಪಾಯವನ್ನು ಭದ್ರಪಡಿಸಲು ಮತ್ತು ಕೋಟೆಯ ಮೇಲಿದ್ದ ಶಾಪವನ್ನು ವಿಮೋಚನೆಗೊಳಿಸಲು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಜೀವಂತವಾಗಿ ಸಮಾಧಿ ಮಾಡಲಾಗಿತ್ತು ಎಂದು ಹೇಳಲಾಗುತ್ತದೆ. ದ್ವಾರದ ಗೋಡೆಯ ಅಡಿಯಲ್ಲಿ ಇಂದಿಗೂ ಅವರ ಆತ್ಮಗಳು ಅಲೆಯುತ್ತಿವೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಆದರೆ ಇದಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲದಿದ್ದರೂ, ಗೈಡ್‌ಗಳು ಇಂದಿಗೂ ಈ ಕಥೆಯನ್ನು ಪ್ರವಾಸಿಗರಿಗೆ ವಿವರಿಸುತ್ತಾರೆ.

ಸಾವಲೆ ಕುಟುಂಬದ ಬಲಿ ಮತ್ತು ನಿಗೂಢ ಧ್ವನಿಗಳು

ಇನ್ನೊಂದು ಕಥೆಯ ಪ್ರಕಾರ, ಕೋಟೆಯ ರಕ್ಷಣೆಗಾಗಿ ಸಾವಲೆ ಕುಟುಂಬದ ವ್ಯಕ್ತಿಯೊಬ್ಬರು ಪ್ರಾಣತ್ಯಾಗ ಮಾಡಿದ್ದರು ಎನ್ನಲಾಗುತ್ತದೆ. ಈ ಕೋಟೆಯಲ್ಲಿ ಸೂರ್ಯಾಸ್ತದ ನಂತರ ವಿಚಿತ್ರ ಶಬ್ದಗಳು ಕೇಳಿಬರುತ್ತವೆ ಎಂಬುದು ಟ್ರೆಕ್ಕರ್‌ಗಳ ವಾದ. ರಾತ್ರಿಯ ಸಮಯದಲ್ಲಿ ಯಾರು ಇಲ್ಲದಿದ್ದರೂ ಸಿಳ್ಳೆ ಹೊಡೆದಂತೆ, ಯಾರೋ ಓಡಿದಂತೆ ಅಥವಾ ಪಿಸುಮಾತಿನ ಶಬ್ದಗಳು ಕೇಳಿಬರುತ್ತವೆ ಎಂದು ಅನೇಕರು ಹೇಳಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಮಂಜು ಮುಸುಕಿದಾಗ ಈ ಕೋಟೆ ಮತ್ತಷ್ಟು ಭಯಾನಕವಾಗಿ ಕಾಣುತ್ತದೆ.

ಕಣ್ಮರೆಯಾಗುವ 'ನಿಗೂಢ ಕಾವಲುಗಾರ'

ಲೋಹಗಢ ಕೋಟೆಯ ಬಗ್ಗೆ ಇರುವ ಮತ್ತೊಂದು ರೋಚಕ ಕಥೆಯೆಂದರೆ 'ನಿಗೂಢ ಕಾವಲುಗಾರ'. ಕೆಲವು ಪ್ರವಾಸಿಗರು ದೂರದಿಂದ ಕೋಟೆಯ ಗೋಡೆಯ ಮೇಲೆ ಕಾವಲುಗಾರನಂತಹ ಆಕೃತಿಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಹತ್ತಿರ ಹೋದಂತೆ ಆ ಆಕೃತಿ ಇದ್ದಕ್ಕಿದ್ದಂತೆ ಮಾಯವಾಗುತ್ತದೆಯಂತೆ. ಇತ್ತೀಚೆಗೆ ನಡೆದ ಕೇತನ್ ಅಗರ್ವಾಲ್ ಹತ್ಯೆಯು ಈ ಕೋಟೆಯ ಭಯಾನಕತೆಗೆ ಮತ್ತೊಂದು ಕರಾಳ ಅಧ್ಯಾಯವನ್ನು ಸೇರಿಸಿದೆ. 300 ಮೆಟ್ಟಿಲುಗಳ ಮೇಲೆ ಪ್ರೇಮಿಯೊಂದಿಗೆ ಬಂದ ಕೇತನ್ ಅಲ್ಲಿಂದ ಕೆಳಕ್ಕೆ ಬಿದ್ದು ಹೆಣವಾಗಿದ್ದು ವಿಧಿಯ ಆಟವೋ ಅಥವಾ ಕೋಟೆಯ ನಿಗೂಢತೆಯೋ (Pune horror stories) ಎಂಬ ಪ್ರಶ್ನೆ ಎದ್ದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇತ್ತ ಪತಿಯನ್ನು ಕೊಂದು, ಅತ್ತ ಸಿಂಗಪುರಕ್ಕೆ ಹಾರಿದ Brahmagantu Serial ಸೌಂದರ್ಯ
ಬಾಬಾ ವಂಗಾ ಪ್ರಕಾರ 2026ರ ಉಳಿದ 4 ತಿಂಗಳು ಈ 4 ರಾಶಿಗೆ ಅದ್ಭುತ, ಸಂತೋಷ, ಸಮೃದ್ಧಿ ಮತ್ತು ಹಣ