
ಬೆಂಗಳೂರು: ಸಿನಿಮಾ ತಾರೆಯರು ಎಂದರೆ ಕೇವಲ ನಟನೆಯಿಂದ ಮಾತ್ರವಲ್ಲ. ವಿಶಿಷ್ಟ ಫ್ಯಾಷನ್, ಕಾಸ್ಟ್ಯೂಮ್ ಮತ್ತು ಸ್ಟೈಲ್‌ನಿಂದಲೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಅದರಲ್ಲೂ ಸ್ಟಾರ್ ನಟರು ಕೈಗೆ ಕಟ್ಟುವ ದುಬಾರಿ ವಾಚ್‌ಗಳು ಅವರ ಐಷಾರಾಮಿ ಜೀವನಶೈಲಿ ಮತ್ತು ಅಭಿರುಚಿಗೆ ಕನ್ನಡಿ ಹಿಡಿಯುತ್ತವೆ. ಬಾಲಿವುಡ್ ಹಾಗೂ ಹಾಲಿವುಡ್ ನಟರಿಗೆ ಕಮ್ಮಿ ಇಲ್ಲದಂತೆ ನಮ್ಮ ಸ್ಯಾಂಡಲ್‌ವುಡ್ ಸ್ಟಾರ್ ನಟರ ಬಳಿಯೂ ದುಬಾರಿ ಹಾಗೂ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಕಲೆಕ್ಷನ್‌ಗಳಿವೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೆಲವು ಫೋಟೋ ಹಾಗೂ ವಿಡಿಯೋಗಳನ್ನ ಗಮನಿಸಿ ಹೇಳೋದಾದರೆ.. ರಾಕಿಂಗ್ ಸ್ಟಾರ್ ಯಶ್ ಮುಂಚೂಣಿಯಲ್ಲಿದ್ದಾರೆ! ಯಶ್ ಬಳಿ ಪಾಟೆಕ್ ಫಿಲಿಪ್), ರೋಲೆಕ್ಸ್, ಹಬ್ಲೋಟ್ ಮತ್ತು ಆಡೆಮಾರ್ಸ್ ಪಿಗುಯೆಟ್ ನಂತಹ ವಿಶ್ವದ ಟಾಪ್ ಬ್ರ್ಯಾಂಡ್‌ಗಳ ವಾಚ್‌ಗಳಿವೆ. ಇವುಗಳ ಮೌಲ್ಯ ಸುಮಾರು 3.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.
ಇನ್ನು ತಮ್ಮ ವಿಭಿನ್ನ ಸ್ಟೈಲ್‌ಗೆ ಹೆಸರುವಾಸಿ ಆಗಿರುವ ಕಿಚ್ಚ ಸುದೀಪ್ ಧರಿಸುವ 'ರಿಚರ್ಡ್ ಮಿಲ್ಲೆ' ವಾಚ್ ಬೆಲೆ ಸುಮಾರು ₹1.5 ಕೋಟಿ ಎಂದು ವರದಿಯಾಗಿದೆ. ಹಾಗೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಹಬ್ಲೋಟ್ ಬಿಗ್ ಬ್ಯಾಂಗ್ ಯುನಿಕೋ' ವಾಚ್ ಧರಿಸಿದ್ದು, ಇದರ ಅಂದಾಜು ಬೆಲೆ ₹34 ಲಕ್ಷ ಆಗಿದೆ. ಸ್ಟೈಲ್ ಎಂಬುದು ಕೇವಲ ಕೋಟಿಗಟ್ಟಲೆ ಬೆಲೆಯ ವಾಚ್‌ಗಳಿಂದಷ್ಟೇ ಬರುವುದಿಲ್ಲ ಅಂತಾ ಅಜಯ್ ರಾವ್ ಹೇಳ್ತಿದ್ದಾರೆ. ಅವರು ಸುಮಾರು ₹18,525 ಬೆಲೆಯ ಆಕರ್ಷಕ 'ಮಾಸೆರಾಟಿ' ಮೆನ್ಸ್ ವಾಚ್ ಧರಿಸಿ ಕ್ಲಾಸಿಕ್ ಲುಕ್‌ನಲ್ಲಿ ಮಿಂಚುತ್ತಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ವಾಚ್ ಕಥೆ ತುಂಬಾ ಭಾವನಾತ್ಮಕವಾಗಿದೆ. ಅವರು 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ತಮ್ಮ ತಂದೆಯ 30 ವರ್ಷಕ್ಕೂ ಹೆಚ್ಚು ಹಳೆಯದಾದ ಚಿನ್ನದ ಬಣ್ಣದ ವಾಚ್ ಬಳಸಿದ್ದರು. ಬೆಲೆಗಿಂತ ತಂದೆಯ ನೆನಪುಗಳು ಬಹಳ ಮುಖ್ಯ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಆಗಿದೆ. ರೋಲೆಕ್ಸ್, ರಿಚರ್ಡ್ ಮಿಲ್ಲೆಯಂತಹ ಜಾಗತಿಕ ಟಾಪ್ ಬ್ರ್ಯಾಂಡ್‌ಗಳಿಂದ ಹಿಡಿದು ಹೃದಯಕ್ಕೆ ಹತ್ತಿರವಾದ ಭಾವನಾತ್ಮಕ ನೆನಪಿನ ವಾಚ್‌ಗಳವರೆಗೆ ಕನ್ನಡ ಸ್ಟಾರ್‌ಗಳ ವಾಚ್ ಕಲೆಕ್ಷನ್ ನಿಜಕ್ಕೂ ಅದ್ಭುತ.
ವಾಚ್ ಎಂದರೆ ಕೇವಲ ಸಮಯ ತೋರಿಸುವ ಸಾಧನವಷ್ಟೇ ಅಲ್ಲ. ಅದು ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಅಭಿರುಚಿ ಮತ್ತು ಭಾವನೆಗಳ ಪ್ರತೀಕವೂ ಹೌದು. ಯಶ್, ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ಕೈಯಲ್ಲಿರುವ ಕೋಟಿ ಹಾಗೂ ಲಕ್ಷಾಂತರ ಬೆಲೆಯ ವಾಚ್‌ಗಳು ಅವರ ಸ್ಟಾರ್‌ಗಿರಿಯ ಗತ್ತು ಮತ್ತು ಐಷಾರಾಮಿ ಜೀವನಶೈಲಿಯನ್ನು ಪ್ರತಿಬಿಂಬಿಸಿದರೆ, ಅಜಯ್ ರಾವ್ ಅವರ ವಾಚ್ ಕಡಿಮೆ ಬೆಲೆಯಲ್ಲೂ ಸ್ಟೈಲಿಶ್ ಆಗಿ ಕಾಣಿಸಬಹುದು ಎಂಬುದನ್ನು ತೋರಿಸುತ್ತದೆ.
ರಕ್ಷಿತ್ ಶೆಟ್ಟಿ ಧರಿಸಿದ ತಂದೆಯ ಹಳೆಯ ವಾಚ್, ಕೋಟಿ ಬೆಲೆಯ ವಸ್ತುಗಳಿಗಿಂತಲೂ ಪ್ರೀತಿ ಮತ್ತು ನೆನಪುಗಳ ಮೌಲ್ಯವೇ ದೊಡ್ಡದು ಎಂಬ ಸುಂದರ ಸಂದೇಶವನ್ನು ನೀಡುತ್ತದೆ. ಒಟ್ಟಾರೆಯಾಗಿ.. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಕೈಯಲ್ಲಿರುವ ಈ ವಾಚ್‌ಗಳು ಕೇವಲ ಸಮಯವನ್ನಷ್ಟೇ ಅಲ್ಲ, ಅವರ ಜೀವನಶೈಲಿ ಮತ್ತು ಭಾವನಾತ್ಮಕ ಬದುಕಿನ ಸುಂದರ ಕಥೆಯನ್ನೂ ಹೇಳುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.