
ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು, ಹೆಚ್ಚೆಚ್ಚು ನೀರು ಕುಡಿಯೋದ್ರಿಂದ ಹೈಡ್ರೇಶನ್ ಲೆವೆಲ್ ಚೆನ್ನಾಗಿರುತ್ತೆ. ಅಂತೆಲ್ಲ ಅಂದ್ಕೊಳ್ತೀವಿ. ಆದ್ರೆ ಅತಿಯಾದ ನೀರಿನ ಸೇವನೆ ಒಳ್ಳೆಯದಲ್ಲ. ಜೊತೆಗೆ ಕೆಲವೊಂದು ಸಂದರ್ಭಗಳಲ್ಲಿ ನೀರು ಕುಡಿಯಬಾರದು.
ಓಡಿ ಬಂದು ನೀರು ಕುಡೀಬೇಡಿ.
ಹಲವು ಮಂದಿ ಅಥ್ಲೆಟ್‌ಗಳು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಸ್ಪರ್ಧೆಗಳಿರುವಾಗ, ನಿತ್ಯದ ಅಭ್ಯಾಸದ ಸಂದರ್ಭಗಳಲ್ಲಿ ಎಷ್ಟೇ ಗೈಡೆನ್ಸ್ ಇದ್ದರೂ ಕೆಲವೊಮ್ಮೆ ಅತಿಯಾದ ದಾಹವನ್ನು ತಣಿಸಲು ಅವರು ಓಡಿ
ಏದುಸಿರು ಬಿಡುತ್ತಿರುವಾಗಲೇ ಗುಟುಕು ನೀರು ಕುಡಿಯುತ್ತಾರೆ. ಇದರಿಂದ ಬಹಳ ಸಮಸ್ಯೆಯಾಗಬಹುದು. ಅಥ್ಲೆಟ್ ಅಂತಲ್ಲ, ಸಾಮಾನ್ಯರೂ ಸಹ ಓಡಿ ಏದುಸಿರು ಬರುತ್ತಿರುವಾಗ,
ಮೆಟ್ಟಿಲು ಹತ್ತಿಳಿಯುವ ಸಂದರ್ಭ ನೀರು ಕುಡಿಯಬೇಡಿ. ನಿಮ್ಮ ಏದುಸಿರು ತಹಬಂದಿಗೆ ಬಂದ ಬಳಿಕ ನೀರು ಕುಡಿಯಿರಿ.
ದಾಹ ಇಂಗಿದ ಮೇಲೂ ನೀರು ಕುಡಿಯೋದು ಒಳ್ಳೆಯದಲ್ಲ
ಬಾಯಾರಿಕೆ ನಿಂತ ಮೇಲೂ ಆರೋಗ್ಯದ ಕಾರಣಕ್ಕೆ ನೀರು ಕುಡಿಯುವವರು ಕೆಲವರಿದ್ದಾರೆ. ಇದರಿಂದ ದೇಹದಲ್ಲಿರುವ ಸಹಜ ಉಪ್ಪಿನಂಶ ದುರ್ಬಲವಾಗುತ್ತೆ. ದೇಹದಲ್ಲಿರುವ ಸೋಡಿಯಂ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿ ಹೈಪೊನೇಟ್ರೀಮಿಯಾಗೆ ತುತ್ತಾಗಬಹುದು. ಇದರಿಂದ ವಾಕರಿಕೆ, ವಾಂತಿ, ಆರೋಗ್ಯ ತೀರಾ ಹದಗೆಟ್ಟು ಸಾವೂ ಸಂಭವಿಸಬಹುದು. ಆದರೆ ಹೀಗಾಗುವುದು ಅತೀ ವಿರಳ.
ಪಚನಕ್ರಿಯೆ ಸರಾಗವಿದ್ದೂ ಹೆಚ್ಚೆಚ್ಚು ನೀರು ಕುಡಿಯಬೇಡಿ
ಮಲಬದ್ದತೆಯಂಥ ಸಮಸ್ಯೆಗಳಿಲ್ಲದೇ ಪಚನಕ್ರಿಯೆ ಸರಾಗವಾಗಿದ್ದರೆ ನೀವು ಸೇವಿಸುತ್ತಿರುವ ನೀರು ಸಾಕಾಗುವಷ್ಟಿದೆ ಅಂತರ್ಥ. ಆಮೇಲೂ ನೀರು ಕುಡಿಯೋದು ಬೇಡ. ಮೂತ್ರ ನೀರಿನಂತೆ
ವರ್ಣರಹಿತವಾಗಿದ್ದರೆ ನೀವು ತೆಗೆದುಕೊಳ್ಳುತ್ತಿರುವ ನೀರನ್ನು ಇನ್ನೊಂದು ಸ್ವಲ್ಪ ಕಡಿಮೆಮಾಡಬೇಕು. ನಸು ಹಳದಿ ಬಣ್ಣದಲ್ಲಿದ್ದರೆ ಸರಿಯಾಗಿದೆ ಅಂತರ್ಥ. ಹಳದಿ ಬಣ್ಣ ಹೆಚ್ಚಿದ್ದರೆ ನೀರಿನ ಸೇವನೆ ಹೆಚ್ಚು ಮಾಡಬೇಕು.
ಹೊಟ್ಟೆ ತುಂಬಿದ ಮೇಲೆ ಯಾಕೆ ನೀರು ಕುಡೀತೀರಿ?
ಊಟಕ್ಕಿಂತ ಮೊದಲು 1 ಗ್ಲಾಸ್ ನೀರು ಕುಡಿಯೋದು ಒಳ್ಳೆಯದು. ಆಹಾರ ಕಡಿಮೆ ಸಾಕಾಗುತ್ತೆ. ಅದೇ ಊಟಕ್ಕೆ ಮೊದಲು ಅಥವಾ ಊಟ ಮಾಡುವಾಗ ಅತಿಯಾಗಿ
ನೀರು ಕುಡಿಯೋದರಿಂದ ಆರೋಗ್ಯ ಹದಗೆಡುತ್ತದೆ.
ವರ್ಕೌಟ್ ಮಾಡಿದ ಕೂಡಲೇ ನೀರು ಬೇಡ
ಹೆಚ್ಚಿನವರು ವರ್ಕೌಟ್ ಮಾಡುವ ಮಧ್ಯದಲ್ಲಿ ಅಥವಾ ವರ್ಕೌಟ್ ನಿಲ್ಲಿಸಿದ ಕೂಡಲೇ ನೀರು ಕುಡಿಯುತ್ತಾರೆ. ತಜ್ಞರ ಪ್ರಕಾರ ವರ್ಕೌಟ್ ಮುಗಿಸಿದ ಸ್ವಲ್ಪ ಹೊತ್ತಿನ ಬಳಿಕ ನೀರಿನ ಬದಲು ಎಳನೀರು
ಕುಡಿಯೋದು ಒಳ್ಳೆಯದು. ವರ್ಕೌಟ್ ನಿಲ್ಲಿಸಿದ ಕೂಡಲೇ ನೀರು ಕುಡಿಯೋದು ಒಳ್ಳೆಯದಲ್ಲವಂತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.