
ನನಗೀಗ 44 ವರ್ಷ. ಮದುವೆಯಾದಾಗಿನಿಂದ ನನ್ನ ಗಂಡನೊಂದಿಗೆ ನಾನು ನೆಮ್ಮದಿ, ಸಂತೋಷದಿಂದ ಸಂಸಾರ ಮಾಡಿದ್ದೇ ಇಲ್ಲ. ಅಪ್ಪ ಅಮ್ಮ ಇಲ್ಲದ ನನಗೆ ಚಿಕ್ಕಪ್ಪ, ಅಕ್ಕ, ತಮ್ಮಂದಿರೇ ಆಸರೆ. ಆದರೆ ಅವರಿಗೂ ಬಡತನ, ಅವರದ್ದೇ ಸಮಸ್ಯೆ ಇರುವುದರಿಂದ ನನ್ನ ಕಷ್ಟಕ್ಕೆ ಯಾವುದೇ ಸ್ಪಂದನೆ ನೀಡುತ್ತಿಲ್ಲ.
ನನ್ನ ಗಂಡನಿಗೆ ಬೇರೆಯವರ ಜೊತೆ ಅಕ್ರಮ ಸಂಬಂಧ ಇದೆ ಎನ್ನುವುದು ನನಗೆ ಗೊತ್ತಾಗಿದೆ. ನನಗೆ ಮಕ್ಕಳಿಲ್ಲ. ಮುಂದೆ ಮಕ್ಕಳಾಗುತ್ತವೆ ಎಂದು ಡಾಕ್ಟರ್ ಹೇಳಿದ್ದರೂ ನನ್ನ ಗಂಡ ಇದನ್ನು ನಂಬಿಲ್ಲ. ನಾನೀಗ ಮತ್ತೊಂದು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ಆದರೆ ಹುಡುಗ ಸಿಕ್ಕುತ್ತಾನೆಯೇ? ಅವನು ನನ್ನನ್ನು ಒಪ್ಪುತ್ತಾನೆಯೇ? ನನಗೂ ಒಂದು ಸುಂದರ ಬಾಳು ಸಿಕ್ಕುವುದೇ ಎನ್ನುವುದೇ ಚಿಂತೆಯಾಗಿದೆ. ಏನು ಮಾಡುವುದೋ ತಿಳಿಯುತ್ತಿಲ್ಲ. ಏನಾದರೂ ಸಲಹೆ ಕೊಡಿ.
(ಸಾಂದರ್ಭಿಕ ಚಿತ್ರ)
ನಿಮ್ಮ ಸಲಹೆಗಳನ್ನು suvarnanewsindia@gmail.com ಕಳುಹಿಸಿ. ಸಲಹೆಗಳಿಗೆ ಸ್ವಾಗತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.