ಈ ನಟಿ ಸೌಂದರ್ಯ ಹೆಚ್ಚಾಗಲು ಎಳನೀರಿನಿಂದ ಮುಖ ತೊಳಿತಾಳಂತೆ!

Published : Jun 27, 2018, 04:42 PM IST
ಈ ನಟಿ ಸೌಂದರ್ಯ ಹೆಚ್ಚಾಗಲು ಎಳನೀರಿನಿಂದ ಮುಖ ತೊಳಿತಾಳಂತೆ!

ಸಾರಾಂಶ

ಎಳನೀರು ಕುಡಿದರೆ ತಂಪೆಂದು ಗೊತ್ತು. ಆದರೆ, ಅದೇ ನೀರಿನಿಂದ ಮುಖ ತೊಳೆದರೆ? ತ್ವಚೆಯ ಕಾಂತಿ ಹೆಚ್ಚಾಗಿ, ಸೌಂದರ್ಯ ಹೆಚ್ಚುತ್ತೆ ಎಂಬುದನ್ನು ತೋರಿಸಿದ್ದಾಳೆ ಈ ಬಾಲಿವುಡ್ ನಟಿ, ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸದರೂ ಫೇಮಸ್ ಆಗಿರೋ ಈ ನಟಿಯ ಬ್ಯೂಟಿ ಸೀಕ್ರೆಟ್ ಇನ್ನೇನು?

ಹೆಸರು: ಸೊನ್ನಾಲಿ ಸೇಗಲ್
ಸಲ್ಮಾನ್‌ಖಾನ್ ಜೊತೆಗೆ ಥಮ್ಸ್‌ಅಪ್ ಆ್ಯಡ್‌ನಲ್ಲಿ ನೀವು ಈ ಮಾದಕ ಚೆಲುವೆಯನ್ನು ನೋಡಿರಬಹುದು. ಅದು ಬಿಟ್ಟರೆ ‘ಪ್ಯಾರ್ ಕಾ ಪಂಚ್‌ನಾಮ್’ ಸಿನಿಮಾದಲ್ಲಿ ರಿಯಾ ಪಾತ್ರಧಾರಿ ಯಾಗಿ ಕಾಣಿಸಿಕೊಂಡಿದ್ಲು. 

ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳಲ್ಲಾದರೂ ಬ್ಯೂಟಿ ಕಾಂಟೆಸ್ಟ್‌ಗಳಲ್ಲಿ ಹೆಚ್ಚು ಕಾಣಿಸಿಕೊಂಡಾಕೆ. ಕೊಲ್ಕತ್ತಾದ ಈ ಬೆಡಗಿ ಮಿಸ್ ಇಂಡಿಯಾ ಆಗಿದ್ದವಳು. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಟಾಪ್‌ 12 ಹಂತದವರೆಗೂ ಸ್ಪರ್ಧಿಸಿದ ಚೆಲುವೆ. 

ಈಕೆಗೆ ಫಿಟ್‌ನೆಸ್ ಕ್ರೇಜ್ ಬಹಳ. ಖುಷಿ ಖುಷಿಯಾಗಿ ಮುದ್ದಿನ ನಾಯಿ ಜೊತೆಗೆ ಈಜು ಹೊಡೆಯೋ ಸೊನ್ನಾಲಿ ಫಿಟ್‌ನೆಸ್ ದಿನಚರಿ ಹೀಗಿದೆ.
- ಏಳೇಳುತ್ತಲೇ ಎಕ್ಸರ್‌ಸೈಸ್
- ಬೆಳಗ್ಗೆ ಕಣ್‌ಬಿಡುತ್ತಲೇ ಕಿಟಕಿಯಲ್ಲಿ ಇಣುಕುವ ಸೂರ್ಯನಿಗೊಂದು ಹಾಯ್! 
- ಹಾಸಿಗೆ ಬಿಟ್ಟೇಳುವ ಮೊದಲೇ ಸ್ಟ್ರೆಚಿಂಗ್ ಎಕ್ಸರ್‌ಸೈಸ್. ಕೈ ಕಾಲುಗಳನ್ನು ಆಚೀಚೆ ಮಡಚಿ ಸ್ಟ್ರೆಚ್ ಮಾಡಿ ನಾಲ್ಕೈದು ಬಗೆಯ ವ್ಯಾಯಾಮ ಮಾಡ್ತಾರೆ. ಸ್ಟ್ರೆಚ್ ಮೈಯ ಬಿಗುವನ್ನು ಸಡಿಲ ಮಾಡುತ್ತೆ, ಇನ್ನೂ ನಿದ್ದೆ ಮೂಡ್‌ನಲ್ಲಿರೋ ಮೈಯನ್ನು ಎಚ್ಚರಗೊಳಿಸುತ್ತೆ ಅನ್ನೋದು ಇವರ ನಂಬಿಕೆ.

- ಎಳನೀರಲ್ಲಿ ಏನ್ ಮಾಡ್ತಾರೆ ಗೊತ್ತಾ?
ಎಳನೀರನ್ನು ಕುಡಿಯೋದು ಗೊತ್ತು, ಆದರೆ ಸೇಗಲ್ ಇದರಲ್ಲಿ ಮುಖತೊಳೆಯುತ್ತಾರೆ. ಇದು ರಿಫ್ರೆಶಿಂಗ್, ಮುಖಕ್ಕೆ ಸಹಜ ಗ್ಲೋ ಕೊಡುತ್ತಂತೆ. ಪುರುಸೊತ್ತಿದ್ದರೆ ಎಳನೀರಲ್ಲಿ ಮುಲ್ತಾನಿಮಿಟ್ಟಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಕೊಳ್ತಾರಂತೆ. ಈ ನ್ಯಾಚುರಲ್ ಫೇಸ್‌ಪ್ಯಾಕ್ ಈ ಬ್ಯೂಟಿಯನ್ನು ಇನ್ನಷ್ಟು ಬ್ಯೂಟಿಫುಲ್ಲಾಗಿಸಿದೆ.

ಧ್ಯಾನಿಸುವ ಹೊತ್ತು
ಫ್ರೆಶ್‌ಆಗಿ ಬಂದ್ಮೇಲೆ ಧ್ಯಾನ. ಮನಸ್ಸು, ದೇಹವನ್ನು  ಹಗುರಾಗಿಸುವ ಮೆಡಿಟೇಶನ್‌ನ ಇನ್ನೂ ಕೆಲವು ಪ್ರಯೋಜನಗಳನ್ನೂ ಅವರು ಕಂಡುಕೊಂಡಿದ್ದಾರೆ. ಇದು ಪಾದದಿಂದ ಕಾರ್ಡ್‌ನಿಂದ ಮಿದುಳಿನವರೆಗೂ ಎನರ್ಜಿ ಸಪ್ಲೈ ಮಾಡುತ್ತೆ. ಫಿಟ್‌ನೆಸ್ ಜೊತೆಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿ ಇಡೀ ದಿನ ಲವಲವಿಕೆಯಿಂದ ಇರೋ ಹಾಗೆ ಮಾಡುತ್ತೆ.

ಎನರ್ಜಿ ಡ್ರಿಂಕ್ 
ಒಂದು ಕಪ್ ನೀರು, 1/2 ಕಪ್ ಡ್ರೈಫ್ರುಟ್ಸ್, 1 ಕಪ್
ಹಾಲು, 1 ಕಿವುಚಿದ ಬಾಳೆಹಣ್ಣು, 1/2 ಕಪ್ ಓಟ್ಸ್,
1/2 ಚಮಚ ಸಿನಾಮನ್ ಇಷ್ಟನ್ನೂ ಹಾಕಿ ರೆಡಿ ಮಾಡಿದ ಎನರ್ಜಿ ಡ್ರಿಂಕ್ ಕುಡೀತಾರೆ. ಇದರ ಪ್ರಯೋಜನ ಬಹಳ ಇವೆ. ದೇಹಕ್ಕೆ ಚೈತನ್ಯ, ಶಕ್ತಿ ಬರುತ್ತೆ, ಪಚನ ಕ್ರಿಯೆ ಸರಾಗ ಮಾಡುತ್ತೆ, ಕಿಡ್ನಿ ಚೆನ್ನಾಗಿ ವರ್ಕ್ ಮಾಡೋ ಹಾಗೆ ನೋಡ್ಕೊಳತ್ತೆ, ಈ ಪ್ರೀ ವರ್ಕೌಟ್ ಡ್ರಿಂಕ್‌ನ್ನು ಕುಡಿದರೆ ಇಡೀ ದಿನ ರೆಕ್ಕೆ ಕಟ್ಕೊಂಡು ಹಾರಾಡುವಷ್ಟು ಹಗುರಾಗಿ ಇರಬಹುದು ಅಂತಾರೆ ಸೇಗಲ್.

ನಾಯಿ ಜೊತೆ ಈಜು
ಎಕ್ಸರ್‌ಸೈಜ್ ಬೋರ್ ಆಗಬಾರ್ದು, ಖುಷಿ ಖುಷಿಯಾಗಿ ಎಕ್ಸರ್‌ಸೈಜ್ ಮಾಡ್ಬೇಕು, ಅದ್ರಲ್ಲೊಂದು ಫನ್ ಇರಬೇಕು ಅನ್ನೋದು ಇವರ ಥಿಯರಿ. ಮುದ್ದಿನ ನಾಯಿ ಜೊತೆಗೆ ಈಜು
ಹೊಡೆಯೋದು ಇವರಿಗೆ ಬಹಳ ಇಷ್ಟ. ಅರ್ಧ ಗಂಟೆ ಈಜೋದಿದೆ, ಹೃದಯದ ಆರೋಗ್ಯಕ್ಕೆ, ದೈಹಿಕ ಸಮತೋಲನಕ್ಕೆ, ಒತ್ತಡದಿಂದ ಹೊರಬರಲು ಈಜು ಬಹಳ ಒಳ್ಳೆಯದು.
ಕೊನೆಯಲ್ಲಿ ಬ್ರೆಡ್ ಆಮ್ಲೆಟ್ ಸ್ನಾನಗೀನ ಮುಗಿಸ್ಕೊಂಡು ಫ್ರೆಶ್ ಆದ್ರೆ ಆಮೇಲೆ ಬೆಳಗಿನ ಉಪಹಾರ. ಎರಡು ಮೊಟ್ಟೆ ಒಡೆದು ತವಾ ಮೇಲೆ ಹಾಕಿ, ಬ್ರೆಡ್ ಸ್ಲೈಸ್
ಜೊತೆಗೆ ತಿಂದರೆ ಬೆಳಗಿನ ಒಂದು ಅಧ್ಯಾಯ ಮುಗಿದ ಹಾಗೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!