ವಿನೆಗರ್‌ ಸೌಂದರ್ಯಕ್ಕೂ ಸೈ, ಕ್ಲೀನಿಗೂ ಜೈ....

By Web DeskFirst Published Apr 5, 2019, 3:23 PM IST
Highlights

ಕೆಲವು ಅಡುಗೆಗಳಿಗೆ ಬಳಸುವ ವಿನೆಗರ್‌ ಅನ್ನು ಸೌಂದರ್ಯ ಹೆಚ್ಚಿಸಿಕೊಳ್ಳಲೂ ಬಳಸಿಕೊಳ್ಳಬಹುದು. ಅದನ್ನು ಬಳಸೋದು ಹೇಗೆ? 

ಆಹಾರ ತಯಾರಿಕೆಯಲ್ಲಿ ಬಳಸುವ ವಿನೆಗರ್‌ನಿಂದ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಮನೆ ಕ್ಲೀನ್ ಮಾಡಲೂ ಬಳಸುತ್ತಾರೆ. ಇದನ್ನು ಬಳಸಿದರೆ ಮನೆ ಹೊಳೆಯುತ್ತದೆ, ಸೌಂದರ್ಯವೂ ವೃದ್ಧಿಸುತ್ತದೆ. ಬಳಸೋದು ಹೇಗೆ?

ಕಠಿಣ ಕಲೆ ನಿವಾರಣೆ: ಒಂದು ವೇಳೆ ಬಟ್ಟೆಯಲ್ಲಿ ಬೆವರಿನ ಕಲೆ ಇದ್ದರೆ, ಅದನ್ನು ವಾಷ್ ಮಾಡುವ ಮುನ್ನ ಕಲೆ ಇರುವ ಜಾಗದ ಮೇಲೆ ಸ್ವಲ್ಪ ವಿನೆಗರ್ ಸಿಂಪಡಿಸಿ. ನಂತರ ವಾಷ್ ಮಾಡಿ. ಇದರಿಂದ ಕಠಿಣ ಕಲೆಗಳೂ ತೊಲಗುತ್ತವೆ. 

ಹೂವು ಫ್ರೆಶ್ ಆಗಿರಲು: ಮನೆಯಲ್ಲಿನ ಹೂದಾನಿಯಲ್ಲಿರುವ ಹೂವು ಫ್ರೆಶ್ ಆಗಿರಲು ಹೂದಾನಿಯ ನೀರಿಗೆ ಒಂದು ಚಮಚ ವೈಟ್ ವಿನೆಗರ್ ಹಾಕಿ. 

ಮೊಟ್ಟೆ ಒಡೆಯುವುದ ತಡೆಯಲು: ಒಂದು ವೇಳೆ ಮೊಟ್ಟೆ ಬೇಯಿಸುವಾಗ ಅದಕ್ಕೆ ಒಂದು ಚಮಚ ವಿನೆಗರ್ ಹಾಕಿದರೆ ಮೊಟ್ಟೆ ಒಡೆಯುವುದಿಲ್ಲ. 

ಇರುವೆ ಓಡಿಸಲು: ಮನೆಯಲ್ಲಿ ಇರುವೆಗಳ ಕಾಟ ಹೆಚ್ಚಾದರೆ, ಅವನ್ನು ಓಡಿಸಲು ಕೋಣೆ ಮೂಲೆ ಮೂಲೆಯಲ್ಲಿ ವಿನೆಗರ್ ಹಾಕಿ. 

ಕೂದಲು ಹೊಳೆಯಲು: ಒಂದು ಮಗ್ ನೀರಿಗೆ ಅರ್ಧ ಚಮಚ ವಿನೆಗರ್ ಹಾಕಿ ಕೂದಲಿಗೆ ಹಾಕಿ. ಇದು ಕೂದಲು ಹೊಳೆಯುವಂತೆ ಮಾಡುವುದಲ್ಲದೇ, ಕೂದಲು ಘಮ ಘಮಿಸುತ್ತದೆ. 

click me!