
ಹಬ್ಬದಲ್ಲಿ ಮಾಡಿದ ಸಿಹಿತಿನಿಸು ಖಾಲಿಯಾಗಿದೆ. ಈಗ ಸಿಹಿತಿನಿಸು ತಿನ್ನುವ ಆಸೆಯಾಗಿದೆ ಏನು ಮಾಡುವುದು ಎಂಬ ಯೋಚನೆಯೇ ಹಾಗಾದರೆ ಇಲ್ಲಿದೆ ನೋಡಿ ಸಿಹಿಸಿಹಿಯಾದ ಡ್ರೈ ಫ್ರೂಟ್ಸ್ ಹಲ್ವ.
ಬೇಕಾಗುವ ಸಾಮಗ್ರಿಗಳು: ಬಾದಾಮಿ 1 ಕಪ್, 1/2 ಕಪ್ ಹಾಲು, ಕೇಸರಿ 4 ಎಸಳು, ಗೋಡಂಬಿ 1 ಕಪ್, ಸಕ್ಕರೆ 1 ಕಪ್, 1 ಟೀ ಚಮಚ ತುಪ್ಪ.
ಮಾಡುವ ವಿಧಾನ:
ಒಂದು ಕಪ್ ಬಾದಾಮಿ ಮತ್ತು ಗೋಡಂಬಿಯನ್ನು ಒಂದು ರಾತ್ರಿ ನೆನೆಸಿ, ನಂತರ ಬಾದಾಮಿ ಮೇಲಿನ ಸಿಪ್ಪೆ ತೆಗೆದು ಗೋಡಂಬಿ ಮತ್ತು ಬಾದಾಮಿಯನ್ನು ಪುಡಿ ಮಾಡಿ. ನಂತರ ಒಂದು ಬಾಣಲೆಗೆ ಹಾಲನ್ನು ಹಾಕಿ ಅದಕ್ಕೆ ಗೋಡಂಬಿ ಮತ್ತು ಬಾದಾಮಿಯ ಮಿಶ್ರಣವನ್ನು ಸೇರಿಸಿ. ಚಿನ್ನದ ಕಂದು ಬಣ್ಣ ಬರುವವರೆಗೆ ಅದನ್ನು ಕುದಿಸಿ. ನಂತರ ಅದಕ್ಕೆಸಕ್ಕರೆ ಸೇರಿಸಿ ಮತ್ತೆ ಕುದಿಸಿ. ನಂತರ ಅದಕ್ಕೆ ಕೇಸರಿ ಎಸಳು ಸೇರಿಸಿ. ಮಿಶ್ರಣವು ಸ್ವಲ್ಪ ಗಟ್ಟಿಯಾಗುತ್ತಿರುವಾಗ ಅದಕ್ಕೆ ತುಪ್ಪವನ್ನು ಸೇರಿಸಿ. ಮಿಶ್ರಣ ಬಾಣಲೆಯ ತಳ ಬಿಟ್ಟ ನಂತರ ಒಂದು ಪ್ಲೇಟ್ ನಲ್ಲಿ ಮಿಶ್ರಣವನ್ನು ಹರಡಿ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಸವಿಸಿವಿಯ ಸಿಹಿಯಾದ ಡ್ರೈ ಫ್ರೂಟ್ಸ್ ಹಲ್ವ ಸವಿಯಲು ಸಿದ್ದ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.