ನಿಮ್ಮ ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಹೋಗುವ ಪ್ಲಾನ್ ಇದ್ಯಾ? ಹಾಗಿದ್ರೆ ನಿಮ್ಮ ಡ್ರೆಸ್ಸಿಂಗ್, ಸ್ಟೈಲ್‌ನಲ್ಲಿ ಈ ತಪ್ಪು ಆಗದಂತೆ ನೋಡಿಕೊಳ್ಳಿ....
First impression is the best impression. ನೀವು ಮೊದಲ ಬಾರಿ ಪ್ರೇಮಿ ಜೊತೆ ಡೇಟಿಂಗ್‌ಗೆ ಹೋಗುವುದಾದರೆ ಅವಾಗ ಅವರ ಮುಂದೆ ತುಂಬಾನೇ ಚೆನ್ನಾಗಿ ಕಾಣಬೇಕು. ಅವರು ಇಂಪ್ರೆಸ್ ಆಗಬೇಕೆಂಬ ಅಸೆ ನಿಮಗೂ ಇರುತ್ತದೆ. ಹಾಗಾದರೆ ನೀವು ಧರಿಸುವ ಡ್ರೆಸ್ ಇಂಪ್ರೆಸಿವ್ ಆಗಿರಲಿ. ಆದರೆ ಅಪ್ಪಿ ತಪ್ಪಿಯೂ ನೀವು ಸ್ಟೈಲ್ ಮಾಡುವಾಗ ಇಂಥ ಮಿಸ್ಟೇಕ್ ಅವೈಯ್ಡ್ ಮಾಡಿ...
ಕಪ್ಪು ಬೇಡ: ಕ್ಲಬ್, ರೆಸ್ಟೋರೆಂಟ್‌ನಲ್ಲಿ ಮೊದಲೇ ಕತ್ತಲಿರುತ್ತದೆ. ಅದಕ್ಕೆ ಕಪ್ಪು ಬಣ್ಣದ ಡ್ರೆಸ್ ಧರಿಸಬೇಡಿ. ಏಕೆಂದರೆ ಎಲ್ಲಾ ಕತ್ತಲಿರುವಾಗ ನೀವು ಕಪ್ಪು ಧರಿಸಿದರೆ ತುಂಬಾ ಬೋರ್ ಆಗಿ ಕಾಣಿಸುವಿರಿ. ಆದುದರಿಂದ ಕಪ್ಪು ಬೇಡ.
ಸಂಬಂಧ ಹದಗೆಟ್ಟಿದೆ ಎಂದು ತಿಳಿಯುವುದು ಹೇಗೆ ?
ಲೇಯರಿಂಗ್ ಬೇಡ: ಹೆಚ್ಚಿನವರು ಲೇಯರಿಂಗ್ ಇಷ್ಟ ಪಡುತ್ತಾರೆ. ಹಾಗಂತ ನೀವು ಡೇಟಿಂಗ್ ಹೋಗುವಾಗ ಲೇಯರಿಂಗ್ ಮಾಡುವ ತಪ್ಪು ಮಾಡಬೇಡಿ. ಇದು ನಿಮ್ಮ ಎದುರಿಗಿರುವವರಿಗೆ ಪೂರ್ತಿ ಕ್ಲೋಸೆಟ್ ಧರಿಸಿದಂತೆ ಕಾಣಿಸುತ್ತದೆ. ಇದರ ಜೊತೆ ಚೈನ್, ಸೆಟ್ ಧರಿಸಿದರೆ ನಿಮ್ಮ ಮುಖದ ಮೇಲೆ ಅವರ ಗಮನ ಹರಿಯುವುದಕ್ಕಿಂತ ನಿಮ್ಮ ಡ್ರೆಸ್ ಕಡೆ ಹೋಗುತ್ತದೆ.
ಶಾರ್ಟ್ ಡ್ರೆಸ್: ನಿಮಗೆ ಇಂಥ ಡ್ರೆಸ್ ಆರಾಮ ಎನಿಸಬಹುದು. ಆದರೆ ಡೇಟಿಂಗ್ ವೇಳೆ ಇಂಥ ಡ್ರೆಸ್ ಬೇಡ. ಜೊತೆಗೆ ಹೆಚ್ಚು ಡಾರ್ಕ್ ಬಣ್ಣದ, ರೇಡಿಯಂ ಬಣ್ಣದ ಡ್ರೆಸ್ ಧರಿಸಬೇಡಿ. ಜೊತೆಗೆ ಹೆಚ್ಚು ದೊಡ್ಡದಾದ ಇಯರಿಂಗ್ ಕೂಡ ಧರಿಸಬೇಡಿ.
ಮೇಕಪ್: ಹೌದು ಮೇಕಪ್ ಕೂಡ ತುಂಬಾ ಮುಖ್ಯ. ಡಾರ್ಕ್ ಬಣ್ಣದ ಲಿಪ್ ಸ್ಟಿಕ್, ಓವರ್ ಎನಿಸುವ ಐ ಶಾಡೋ, ಶೇಡ್ಸ್ ಅವರಿಗೆ ಇಷ್ಟವಾಗೋದಿಲ್ಲ. ಹೆಚ್ಚಾಗಿ ಹುಡುಗರು ಇಷ್ಟ ಪಡೋದು ಕೆಂಪು ಬಣ್ಣ. ಆದುದರಿಂದ ಆ ಬಣ್ಣದ ಲಿಪ್‌ಸ್ಟಿಕ್ ಹಾಕಿದರೆ ಬೆಸ್ಟ್.