ರೂಪ್‌ಕುಂಡ್ ಎಂಬ ಅಸ್ಥಿಪಂಜರದ ಸರೋವರದ ಸೌಂದರ್ಯ...

By Web DeskFirst Published May 9, 2019, 3:54 PM IST
Highlights

ಹಿಮಾಲಯ ಎಂದರೆ ಹಲವಾರು ಕೌತುಕಗಳಿಂದ ಕೂಡಿದ ತಾಣ. ಅವುಗಳಲ್ಲಿ ಒಂದು ರೂಪ್‌ಕುಂಡ್. ಇಲ್ಲಿನ ಕೆರೆ ಆಳದಲ್ಲಿ ಅಸ್ಥಿಪಂಜರವಿದೆ. ಇದು ಇಲ್ಲಿ ಹೇಗೆ ಬಂತು ಅನ್ನೋ ಸ್ವಾರಸ್ಯಕರ ಸಂಗತಿ ತಿಳಿಯಲು ಮುಂದೆ ಓದಿ... 

ಅಸ್ಥಿಪಂಜರದ ಸರೋವರದ ಬಗ್ಗೆ ನೀವು ಕೇಳಿದ್ದೀರಾ? ಹೌದು ರೂಪ್‌ಕುಂಡ್ ಸರೋವರ ಅಸ್ಥಿಪಂಜರಗಳಿಂದಲೇ ಜನಪ್ರಿಯತೆ ಪಡೆದಿದೆ. ರೂಪ್ ಎಂದರೆ ಸುಂದರ, ಸುಂದರವಾದ ಸರೋವರ ಎಂದರ್ಥ. ಈ ಸರೋವರ ಕೇವಲ ಸುಂದರ ಮಾತ್ರ ಅಲ್ಲ,  ಭಯಾನಕವಾಗಿಯೂ ಇದೆ. 

ಉತ್ತರಾಂಚಲ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನ ಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ 7000 ಮೀ. ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಸರೋವರ ರೂಪ್‌ಕುಂಡ್. ಇದು ಜನರ ಪ್ರಮುಖ ಟ್ರೆಕಿಂಗ್ ತಾಣವೂ ಆಗಿದೆ. 

ದೃಷ್ಟಿ ದೋಷ ಸಮಸ್ಯೆ ಬಗೆ ಹರಿಸೋ ನೈನಾದೇವಿ

ವರ್ಷದ 11 ತಿಂಗಳು ಹೆಪ್ಪುಗಟ್ಟಿರುವ ಈ ಸರೋವರ ಕರಗಿದಾಗ ಕಾಣುವುದು ಹಲವು ಶತಮಾನಗಳಷ್ಟು ಹಳೆಯದಾದ ನೂರಾರು ಮಾನವರ ಹಾಗೂ ಕುದುರೆಗಳ ಅಸ್ಥಿಪಂಜರಗಳು . 5029 ಮೀ.ಗಳಷ್ಟು ಎತ್ತರದಲ್ಲಿ ಜನ ಜೀವನವೇ ಇಲ್ಲದ ಪ್ರದೇಶದಲ್ಲಿ ಇಷ್ಟೊಂದು ಅಸ್ಥಿಪಂಜರಗಳು ಬಂದದ್ದಾದರೂ ಹೇಗೆ? ಎನ್ನುವ ಪ್ರಶ್ನೆ ಅನಾದಿ ಕಾಲದಿಂದಲೂ ಜನರಲ್ಲಿ ಗೊಂದಲ ಮೂಡಿಸಿಕೊಂಡು ಬಂದಿವೆ. ಅದಕ್ಕಾಗಿ ಹಲವಾರು ಜನರು ಹಲವಾರು ರೀತಿಯ ಕಥೆಗಳೂ ಇವೆ...

ಕಥೆ ಹೇಳುವಂತೆ...

ಸ್ಥಳೀಯ ಜನರು ಹೇಳುವ ಪ್ರಕಾರ ಹಿಮಾಲಯದ ಪುಣ್ಯಭೂಮಿಯಲ್ಲಿ ಮೋಜು ಮಾಡುತ್ತಿದ್ದ ರಾಜನ ಪರಿವಾರ ನಂದಾ ದೇವಿಯ ಕೋಪಕ್ಕೆ ಗುರಿಯಾಗಿ ಹಿಮಪಾತದಲ್ಲಿ ನಶಿಸಿ ಹೋಯಿತಂತೆ. ಇನ್ನೊಂದು ಕಥೆ ಪ್ರಕಾರ ಯುದ್ಧ ಮಾಡಿ ಹಿಂದಿರುಗುತ್ತಿದ್ದ ಕಾಶ್ಮೀರದ ರಾಜ ಮತ್ತು ಅವನ ಸೇನೆ ದಾರಿ ತಪ್ಪಿ ರೂಪ್‌ಕುಂಡ್ ಬಳಿ ಹಿಮಪಾತಕ್ಕೆ ಸಿಕ್ಕಿ ನಶಿಸಿ ಹೋಯಿತಂತೆ.  ಈ ಆಸ್ಥಿಪಂಜರಗಳು 500-800 ವರ್ಷ ಹಳೆಯದಿರಬಹುದು, ಎಂದು ಅಂದಾಜಿಸಲಾಗಿದೆ. 

click me!