ಸ್ಮಾರ್ಟ್ ಟಿವಿ ಕ್ಲೀನ್ ಮಾಡುವುದು ಸರಳವಾದ ಕೆಲಸವಾದರೂ, ಕೆಲವು ಸಣ್ಣ ತಪ್ಪುಗಳು ದುಬಾರಿಯಾಗಬಹುದು. ಈ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಟಿವಿಯನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ರಿಪೇರಿ ವೆಚ್ಚವನ್ನು ತಪ್ಪಿಸಿ.
ಮನೆಯಲ್ಲಿನ ಸ್ಮಾರ್ಟ್ ಟಿವಿ ಕ್ಲೀನ್ ಮಾಡೋದು ತುಂಬಾ ಸರಳವಾದ ಕೆಲಸ. ಆದರೆ ಕೆಲವೊಮ್ಮೆ ಕ್ಲೀನಿಂಗ್ ಸಂದರ್ಭದಲ್ಲಿ ಮಾಡುವ ಸಣ್ಣ ತಪ್ಪುಗಳು ನಿಮ್ಮ ಜೇಬಿನಲ್ಲಿರುವ ಹಣ ಖಾಲಿ ಮಾಡಬಹುದು. ಸರಳ ಕೆಲಸವಾದ್ರೂ ತುಂಬಾ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸ್ವಚ್ಛತೆ ವೇಳೆ ಮಾಡುವ ಚಿಕ್ಕ ತಪ್ಪುಗಳಿಂದ ಸ್ಮಾರ್ಟ್ ಟಿವಿ ರಿಪೇರಿಗೆ ಹಣ ಖರ್ಚು ವ್ಯಯಿಸಬೇಕಾಗುತ್ತದೆ. ಸ್ಮಾರ್ಟ್ ಟಿವಿ ಕ್ಲೀನ್ ಮಾಡುವ ವಿಧಾನ ನಿಮಗೆ ಗೊತ್ತಿಲ್ಲ ಅಂದ್ರೆ ನಾವು ಅದನ್ನು ಹೇಳಿಕೊಡುತ್ತವೆ. ಸ್ಮಾರ್ಟ್ ಟಿವಿ ಕ್ಲೀನ್ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ. ಇದರಿಂದ ನಿಮ್ಮ ಸ್ಮಾರ್ಟ್ ಟಿವಿ ಸೇಫ್ ಆಗಿರುತ್ತದೆ.
Smart TV ಕ್ಲೀನಿಂಗ್ ವೇಳೆ ಈ ತಪ್ಪುಗಳನ್ನು ಮಾಡಬೇಡಿ
*ಸ್ಮಾರ್ಟ್ ಟಿವಿ ಕ್ಲೀನ್ ಮಾಡುವ ಸಂದರ್ಭದಲ್ಲಿ ಸ್ಕ್ರೀನ್‌ಗೆ ನೀರು ಸಿಂಪಡಿಸಬಾರದು. ಇದರಿಂದ ಟಿವಿ ಹಾನಿಗೊಳಗಾಗುವ ಸಾಧ್ಯತೆ ಇರುತ್ತವೆ. ಯಾವುದೇ ವಿದ್ಯುತ್ ಉಪಕರಣಗಳನ್ನು ನೀರಿನಿಂದ ತೊಳೆಯಬಾರದು.
*ಸ್ಮಾರ್ಟ್ ಟಿವಿ ಹಿಂಭಾಗದಲ್ಲಿ ಧೂಳು ಸೇರಿಕೊಂಡಿರುತ್ತದೆ. ಈ ಧೂಳು ತೆಗೆಯಲು ಹಾರ್ಡ್ ಬ್ರಷ್ ಬಳಕೆ ಮಾಡಬಾರದು. ಸ್ಮಾರ್ಟ್ ಟಿವಿಯಂತಹ ವಸ್ತುಗಳನ್ನು ಕ್ಲೀನ್ ಮಾಡಲು ಮಾರುಕಟ್ಟೆಯಲ್ಲಿ ಮೃದು ಬ್ರಷ್‌ಗಳು ಸಿಗುತ್ತವೆ. ಹಾರ್ಡ್ ಬ್ರಷ್ ನಿಮ್ಮ ಟಿವಿ ಸ್ಕ್ರೀನ್ ಹಾಳು ಮಾಡುವ ಸಾಧ್ಯತೆ ಇರುತ್ತದೆ.
*ಸ್ಮಾರ್ಟ್ ಟಿವಿ ಸ್ವಚ್ಛಗೊಳಿಸಲು ಟವೆಲ್ ಅಥವಾ ಅಡುಗೆಮನೆಯಲ್ಲಿ ಬಳಸಲಾಗುವ ಬಟ್ಟೆಯನ್ನು ಬಳಸಬಾರದು. ಯಾವುದ್ಯಾವುದೋ ಬಟ್ಟೆ ಬಳಸಿದ್ರೆ ಸ್ಕ್ರೀನ್ ಮೇಲೆ ಗೆರೆಗಳು ಕಾಣಿಸಕೊಳ್ಳುತ್ತವೆ. ಇದರಿಂದ ಸ್ಮಾರ್ಟ್ ಟಿವಿ ವೀಕ್ಷಣೆಗೆ ಅಡಚಣೆಯುಂಟಾಗುತ್ತದೆ.
*ಯಾವುದೇ ಕೆಮಿಕಲ್ ಗಳನ್ನು ಸ್ಮಾರ್ಟ್ ಟಿವಿ ಕ್ಲೀನ್ ಮಾಡಲು ಬಳಸಬಾರದು. ಕೆಲ ಕೆಮಿಕಲ್‌ಗಳು ಸ್ಮಾರ್ಟ್ ಟಿವಿಯ ಸ್ಕ್ರೀನ್ ಗ್ಲಾಸ್‌ಗೆ ಹಾನಿಯುಂಟು ಮಾಡುತ್ತದೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಗ್ಲಾಸ್ ಸ್ವಚ್ಛಗೊಳಿಸಲು ಕೆಲ ಉತ್ಪನ್ನಗಳು ಲಭ್ಯವಾಗುತ್ತವೆ.
ಇದನ್ನೂ ಓದಿ: ದೀಪಾವಳಿ ಮನೆ ಕ್ಲೀನ್: ಸ್ಲೈಡ್ ಡೋರ್ ಸ್ವಚ್ಛಗೊಳಿಸಲು ಇಲ್ಲಿವೆ ಟಿಪ್ಸ್
ಸ್ಮಾರ್ಟ್ ಟಿವಿ ಕ್ಲೀನ್ ಮಾಡೋದು ಹೇಗೆ?
*ಕ್ಲೀನ್ ಮಾಡುವ ಮುನ್ನ ಸ್ಮಾರ್ಟ್ ಟಿವಿ ಪವರ್ ಬಟನ್ ಆಫ್ ಮಾಡಬೇಕು. ಪ್ಲಗ್ ತೆಗೆದು ಕ್ಲೀನಿಂಗ್ ಕೆಲಸಗಳನ್ನು ಮಾಡಬೇಕಾಗುತ್ತದೆ. ಇಲ್ಲವಾದ್ರೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಇರುತ್ತದೆ.
*ಕ್ಲೀನಿಂಗ್ ಮಾಡುವಾಗ ಮೃದುವಾದ ಬಟ್ಟೆ ಮತ್ತು ಬ್ರಷ್ ಬಳಸಬೇಕು. ಬಟ್ಟೆಯನ್ನು ನೀರಿನಲ್ಲಿ ಅದ್ದಿ ನಂತರ ಅದನ್ನು ಹಿಂಡಿ ಬಳಸಬೇಕು. ತೇವಾಂಶವುಳ್ಳ ಬಟ್ಟೆ ಬಳಸಿ ಸ್ಮಾರ್ಟ್ ಟಿವಿ ಕ್ಲೀನ್ ಮಾಡಿ.
*ಕ್ಲೀನಿಂಗ್ ಸಂದರ್ಭದಲ್ಲಿ ಸ್ಮಾರ್ಟ್ ಟಿವಿ ಮೇಲೆ ಹೆಚ್ಚು ಭಾರ ಹಾಕಬೇಡಿ. ನಿಧಾನವಾಗಿ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸಬೇಕು. ಧೂಳು ತೆಗೆಯಲು blowers ಬಳಸೋದು ಉತ್ತಮ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡುವಾಗ ಎಚ್ಚರ, 4 ಲಕ್ಷ ರೂ ಕಳೆದುಕೊಂಡ ಮಹಿಳೆ!