Woman

ಸ್ಲೈಡಿಂಗ್ ಡೋರ್ ಕ್ಲೀನ್ ಮಾಡೋದು ಹೇಗೆ?

ಸಂದಿಯಲ್ಲಿ ಹಾಗೆಯೇ ಕಸ ಉಳಿದುಕೊಳ್ಳುವ ಸ್ಲೈಡಿಂಗ್ ಡೋರ್ ಕ್ಲೀನ್ ಮಾಡಲು ಇಲ್ಲಿವೆ ಕೆಲವು ಟಿಪ್ಸ್. 

ಬೆಸ್ಟ್ ಐಡಿಯಾ

ಇಂದಿನ ಮನೆಗಳಲ್ಲಿ ಸ್ಲೈಡಿಂಗ್ ಕಿಟಕಿಗಳಿರುತ್ತವೆ. ಅದರ ಮೂಲೆಗಳಲ್ಲಿ ಧೂಳು ಮಣ್ಣು ಸಂಗ್ರಹವಾಗುತ್ತದೆ. ಇದನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಅದಕ್ಕೆ ಇಲ್ಲಿವೆ ಈಸಿ ವೇ.

ಹೇರ್ ಡ್ರೈಯರ್ ಬಳಸಿ

ಸ್ಲೈಡಿಂಗ್ ವಿಂಡೋ ಮೂಲೆಗಳಿಂದ ಧೂಳನ್ನು ತೆಗೆದು ಹಾಕಲು ಹೇರ್ ಡ್ರೈಯರ್ ಬಳಸಬಹುದು. ಫುಲ್ ಸ್ಟೀಡಲ್ಲಿ ಚಲಾಯಿಸಿ. ಧೂಳಿನ ಕಣಗಳು ಸುಲಭವಾಗಿ ಹೊರ ಬಂದು ಬಿಡುತ್ತದೆ. 

ವ್ಯಾಕ್ಯೂಮ್ ಕ್ಲೀನರ್

ವ್ಯಾಕ್ಯೂಮ್ ಕ್ಲೀನರ್ ಇದ್ದರೆ, ಅದಕ್ಕೆ ತೆಳುವಾದ ಟ್ಯೂಬ್ ಹಾಕಿ. ಸ್ಲೈಡಿಂಗ್ ವಿಂಡೋ ಫ್ರೇಮ್ ಮತ್ತು ಟ್ರ್ಯಾಕ್‌ನಿಂದ ಧೂಳನ್ನು ತೆಗೆಯಬಹುದು.

ಟೂತ್‌ಬ್ರಷ್

ಹಳೆಯ ಟೂತ್‌ಬ್ರಷ್ ಬಳಸಿ ಸ್ಲೈಡಿಂಗ್ ವಿಂಡೋದ ಟ್ರ್ಯಾಕ್‌ನಲ್ಲಿ ಸಂಗ್ರಹವಾದ ಧೂಳು ಮಣ್ಣನ್ನು ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಬಹುದು.

ಸಾಬೂನಿನ ನೀರು ಬಳಸಿ

ಸ್ವಲ್ಪ ನೀರಿನಲ್ಲಿ ಲಿಕ್ವಿಡ್ ಡಿಟರ್ಜೆಂಟ್ ಅನ್ನು ಕರಗಿಸಿ ದ್ರಾವಣ ತಯಾರಿಸಿ. ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಂಜ್ ಸಹಾಯದಿಂದ ಕಿಟಕಿ ಪ್ಯಾನಲ್‌ ಮತ್ತು ಟ್ರ್ಯಾಕ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ವಿನೆಗರ್ ಮತ್ತು ನೀರಿನ ದ್ರಾವಣ

ಸ್ಲೈಡಿಂಗ್ ಕಿಟಕಿ ಮೇಲೆ ಹಠಮಾರಿ ಕಲೆಗಳಿದ್ದರೆ, ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಸ್ಪ್ರೇ ಮಾಡಿ, ಒರೆಸೆ. ಗ್ಲಾಸು ಫಳ ಫಳ ಅಂತ ಹೊಳೆಯುತ್ತೆ ನೋಡಿ.

ಮಿರರ್ ಕ್ಲೀನರ್

ಸ್ಲೈಡಿಂಗ್ ವಿಂಡೋದಲ್ಲಿ ಗಾಜಿದ್ದರೆ ಲಿಕ್ವಿಡ್ ಡಿಟರ್ಜೆಂಟ್‌ನಿಂದ ಸ್ವಚ್ಛಗೊಳಿಸುವ ಬದಲು ಮಿರರ್ ಕ್ಲೀನರ್ ಬಳಸಿ ಮೈಕ್ರೋಫೈಬರ್‌ನಿಂದ ಒರೆಸಬಹುದು.

Find Next One