ಅಮೆರಿಕ ಆರೋಗ್ಯ ಸಂಸ್ಥೆಯ ಸಂಶೋಧಕರ ಅಧ್ಯಯನ| ವೈಜ್ಞಾನಿಕ ಪರೀಕ್ಷೆಗಿಂತ ಶ್ವಾನ ಪರೀಕ್ಷೆ ಅಗ್ಗ, ಸುಲಭ
ನ್ಯೂಯಾರ್ಕ್[ಏ.12]: ಶ್ವಾನಗಳು ತಮ್ಮ ಅತ್ಯಂತ ಸೂಕ್ಷ್ಮ ವಾಸನಾ ಗ್ರಹಿಕೆ ಸಾಮರ್ಥ್ಯವನ್ನು ಬಳಸಿಕೊಂಡು ಕ್ಯಾನ್ಸರ್ ಇರುವ ರಕ್ತದ ಮಾದರಿಗಳನ್ನು ಶೇ.97ರಷ್ಟುಕರಾರುವಕ್ಕಾಗಿ ಗುರುತಿಸಬಲ್ಲವು ಎಂಬ ಸಂಗತಿ ಅಧ್ಯಯನವೊಂದರಿಂದ ಬಹಿರಂಗಗೊಂಡಿದೆ. ಇದರಿಂದಾಗಿ ಯಾವುದೇ ಖರ್ಚಿಲ್ಲದೇ ಮತ್ತು ಸುದೀರ್ಘ ವೈದ್ಯಕೀಯ ತಪಾಸಣೆ ಇಲ್ಲದೇ ಮಾರಣಾಂತಿಕ ಕಾಯಿಲೆಯನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ.
ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ
undefined
ಶ್ವಾನಗಳು ಮಾನವರಿಗಿಂತ 1000 ಪಟ್ಟು ಕರಾರುವಕ್ಕಾಗಿ ವಾಸನೆಯನ್ನು ಗ್ರಹಿಸಬಲ್ಲವು. ಹೀಗಾಗಿ ಮಾನವ ಗ್ರಹಿಕೆಗೆ ಬಾರದೇ ಇರುವ ಸಂಗತಿಗಳನ್ನು ಶ್ವಾನಗಳು ಪತ್ತೆ ಮಾಡಬಲ್ಲವು ಎಂದು ಅಮೆರಿಕ ಮೂಲದ ಆರೋಗ್ಯ ಸೇವಾ ಸಂಸ್ಥೆ ಬಯೋಸೆಂಟ್‌ಡಿಎಕ್ಸ್‌ನ ಸಂಶೋಧಕರು ಹೇಳಿದ್ದಾರೆ.
ಸಂಶೋಧನೆ ನಡೆದಿದ್ದು ಹೇಗೆ?:
ಸಾಮಾನ್ಯ ರಕ್ತ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನ ಅಂಶಗಳಿರುವ ರಕ್ತದ ಮಾದರಿಗಳನ್ನು ಬೇರ್ಪಡಿಸಲು ನಾಲ್ಕು ಬೇಟೆ ನಾಯಿಗಳನ್ನು ಸಂಶೋಧಕರು ಪರೀಕ್ಷೆಗೆ ಒಳಪಡಿಸಿದ್ದರು. ಈ ಪೈಕಿ ಒಂದನ್ನು ಹೊರತುಪಡಿಸಿ ಉಳಿದ ಮೂರು ನಾಯಿಗಳು ಕ್ಯಾನ್ಸರ್ ಇರುವ ರಕ್ತದ ಮಾದರಿಯನ್ನು ಶೇ.96.7ರಷ್ಟುಖಚಿತವಾಗಿ ಮತ್ತು ಸಾಮಾನ್ಯ ರಕ್ತದ ಮಾದರಿಯನ್ನು ಶೇ.97.5ರಷ್ಟುಕರಾರುವಕ್ಕಾಗಿ ಗುರುತಿಸಿವೆ.
ಅಲ್ಸರ್ ಅಥವಾ ಕ್ಯಾನ್ಸರ್? ಈ ಪುಟ್ಟ ಮಾತ್ರೆಯಿಂದ ತಿಳಿದುಕೊಳ್ಳಬಹುದು
ಕ್ಯಾನ್ಸರ್ ಗುಣಪಡಿಸಲು ಇದುವರೆಗೂ ಯಾವುದೇ ಔಷಧಿ ಇಲ್ಲದೇ ಇದ್ದರೂ, ಆರಂಭದಲ್ಲೇ ರೋಗ ಪತ್ತೆಹಚ್ಚುವುದರಿಂದ ಬದುಕಿ ಉಳಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಕ್ಯಾನ್ಸರ್ ಪತ್ತೆಹಚ್ಚುವ ಅತ್ಯಂತ ಸಂವೇದನಾಶೀಲ ಪರೀಕ್ಷೆಯಿಂದ ಸಾವಿರಾರು ಜೀವಗಳನ್ನು ರಕ್ಷಿಸಬಹುದು ಮತ್ತು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುತ್ತಿರುವ ವಿಧಾನವೇ ಬದಲಾಗಲಿದೆ ಎಂದು ಎಂದು ಈ ಸಂಶೋಧನೆಯ ಮುಖ್ಯಸ್ಥ ಜುನಿಕ್ವಿರಾ ಹೇಳಿದ್ದಾರೆ.