ಆ್ಯಸಿಡಿಟಿ ಇದ್ದರೆ ಈ ಆಹಾರಕ್ಕೆ ಹೇಳಿ ಗುಡ್ ಬೈ...

By Web DeskFirst Published Apr 11, 2019, 4:36 PM IST
Highlights

ವಯಸ್ಸಿನ ಭೇದವಿಲ್ಲದೇ ಕಾಡೋ ರೋಗ ಆ್ಯಸಿಡಿಟಿ. ಬೇಡದ್ದನ್ನು ತಿಂದರೆ ಈ ಸಮಸ್ಯೆಯನ್ನು ಅನುಭವಿಸುವುದು ಅನಿವಾರ್ಯ. ಹೇಳುವಂಥ ದೊಡ್ಡ ಅನಾರೋಗ್ಯವಲ್ಲದೇ ಹೋದರೂ, ಸಿಕ್ಕಾಪಟ್ಟೆ ಕಾಡೋ ಈ ರೋಗ ತಡೆಯಲು ಕೆಲವು ಆಹಾರಗಳಿಗೆ ಗುಡ್ ಬೈ ಹೇಳಲೇಬೇಕು...

ವಯಸ್ಸಾಗುತ್ತಿದ್ದಂತೆ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಎಲ್ಲರಲ್ಲಿಯೂ ಅದರಲ್ಲಿ ಮಹಿಳೆಯರನ್ನು ಆ್ಯಸಿಡಿಟಿ ಕಾಡುತ್ತದೆ. ಪ್ರತಿದಿನ ನಾವು ಸೇವಿಸುವ ಆಹಾರದಿಂದಲೂ ಆ್ಯಸಿಡಿಟಿ ಕಾಡುತ್ತದೆ. ಡ್ರಿಂಕ್ಸ್ ಮಾಡುವುದು, ಸಿಗರೇಟ್ ಸೇವನೆ, ಫ್ಯಾಟ್ ತುಂಬಿದ ಆಹಾರ ಸೇವನೆ, ಕೆಫೆನ್, ಸೋಡಾ ಮೊದಲಾದ ಆಹಾರ ಸೇವಿಸಿದರೆ ಅಪಾಯ. ಅದಕ್ಕೆ ಔಷಧಗಳಿಗಿಂತ, ಕೆಲವು ಆಹಾರ ಪದ್ಧತಿ ಬೆಳೆಯಿಸಿಕೊಂಡರೆ ಪರಿಹಾರ ಗ್ಯಾರಂಟಿ...

ಆ್ಯಕ್ಟಿವ್ ಲೈಫ್ ಸ್ಟೈಲ್: ಪ್ರತಿ ದಿನವೂ ಆ್ಯಕ್ಟಿವ್ ಆಗಿದ್ದರೆ ಆ್ಯಸಿಡಿಟಿಯನ್ನು ಕಡಿಮೆ ಮಾಡಬಹುದು. ಮುಂಜಾನೆ ವಾಕ್, ಎಕ್ಸರ್‌ಸೈಜ್, ಸಣ್ಣ ಪುಟ್ಟ ಫಿಜಿಕಲ್ ಆ್ಯಕ್ಟಿವಿಟಿ ಮಾಡಿದರೆ ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. 

ಫ್ರೈಡ್ ಆಹಾರ ಬೇಡ: ಕಾಯಿಸಿದ, ಮಸಾಲೆ ಹೊಂದಿರುವ ಅಥವಾ ಹೆಚ್ಚು ಉಪ್ಪು ಇರುವ ಆಹಾರಗಳನ್ನು, ಉಪ್ಪಿನಕಾಯಿ ಮತ್ತಿತರ ಆಹಾರಗಳನ್ನು ಸೇವಿಸಬೇಡಿ. ಮಸಾಲೆ ಪದಾರ್ಥ ಸೇವಿಸಿದರೆ ಬೇಗ ಜೀರ್ಣವಾಗುವುದಿಲ್ಲ. ಇದು ಆ್ಯಸಿಡಿಟಿಯನ್ನು ಹೆಚ್ಚಿಸುತ್ತದೆ.

ಈ ಆಹಾರ ನೀಡುತ್ತದೆ ಅರಾಮ: ಆ್ಯಸಿಡಿಟಿ ಇರುವವರು ಸೋರೆಕಾಯಿ, ಗೋಧಿ, ಸೌತೆಕಾಯಿ, ಪಡವಲಕಾಯಿ, ಬಾಳೆ ಹಣ್ಣು ಸೇವಿಸಿದರೆ ತುಸು ಮಟ್ಟಿನ ನಿರಾಳತೆ ನಿಮ್ಮದಾಗುತ್ತದೆ. 

ಪಲ್ಯದಂಗೆ ಉಪ್ಪಿನಕಾಯಿ ತಿಂದ್ರೆ ಆ್ಯಸಿಡಿಟಿ ಗ್ಯಾರಂಟಿ

ಬೆಳಗ್ಗಿನ ಆಹಾರ ಸ್ಕಿಪ್ ಮಾಡಬೇಡಿ: ಹೆಚ್ಚಾಗಿ ಮಹಿಳೆಯರು ಮುಂಜಾನೆ ಮನೆಗೆಲಸ ಹಾಗೂ ಇತರೆ ಒತ್ತಡದಿಂದ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುತ್ತಾರೆ. ಇದರಿಂದ ಆ್ಯಸಿಡಿಟಿ ಇನ್ನಷ್ಟು ಹೆಚ್ಚುತ್ತದೆ. ಆದುದರಿಂದ ಯಾವತ್ತೂ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಬೇಡಿ. 

ಯೋಗ: ಆ್ಯಸಿಡಿಟಿಯಿಂದ ಮುಕ್ತರಾಗಲು ಮಿತಿ ಮೀರಿದ ಆಹಾರ ಸೇವಿಸಬೇಡಿ. ಜೊತೆಗೆ ಯೋಗ ಮಾಡುವುದ ಮರೆಯಬೇಡಿ. 

click me!