ಈ ಚಾರ್ಟ್ ಫಾಲೋ ಮಾಡಿದ್ರೆ ನಾಳೆ ನೀವೂ ಹೀರೋಯಿನ್ ಆಗ್ಬಹುದು!

By Suvarna NewsFirst Published Jan 15, 2020, 6:06 PM IST
Highlights

ಬಹಳ ಸರಳವಾಗಿ ಯಾರು ಬೇಕಿದ್ರೂ ಫಾಲೋ ಮಾಡಬಹುದಾದ ಹೆಲ್ದೀ ಚಾರ್ಟ್ ಇದು. ನಿಮ್ಮ ದೇಹ ಮಾತ್ರ ಅಲ್ಲ, ಮನಸ್ಸನ್ನೂ ಖುಷಿ ಖುಷಿಯಾಗಿಡೋ ಸೀಕ್ರೆಟ್ ಗಳೆಲ್ಲ ಇದರಲ್ಲಿವೆ.

ಶ್ರದ್ಧಾ ಶ್ರೀನಾಥ್ ಕಳೆದ ವರ್ಷ ಇನ್ ಸ್ಟಾದಲ್ಲಿ ಒಂದು ಪೋಸ್ಟ್ ಹಾಕ್ಕೊಂಡಿದ್ರು. ಅದರಲ್ಲಿ ಗುಂಡ ಗುಂಡಗೆ ಡುಮ್ಮಿ ಥರಾ ಇರೋ ಶ್ರದ್ಧಾ ಅವರ ಹಳೆಯ ಫೋಟೋವನ್ನು ಅಟ್ಯಾಚ್ ಆಗಿದ್ದು. ಆ ಫೋಟೋ ಬಗ್ಗೆ ವಿವಿರಿಸುತ್ತಾ ಶ್ರದ್ಧಾ ಹೇಳುತ್ತಿದ್ದರು, "ನಾನು ಒಂದು ಕಾಲದಲ್ಲಿ ಇಷ್ಟು ದಪ್ಪಗಿದ್ದೆದ್ದೆ. ಸಿಕ್ಕಿದ್ದೆಲ್ಲ ತಿನ್ನುತ್ತಿದೆ, ಯಾವತ್ತೂ ಒಮ್ಮೆ ಬೇಗ ಎದ್ದ ದಿನ ಎಕ್ಸರ್ ಸೈಸ್ ಮಾಡ್ತೀನಿ ಅಂತ ಹೊರಡ್ತಿದ್ದೆ. ಶಾಪ್ ನಲ್ಲಿ ಎಕ್ಸ್ ಎಲ್ ಸೈಜ್ ನ ಲಿಮಿಟೆಡ್ ಡ್ರೆಸ್ ಗಳಲ್ಲೇ ಒಂದನ್ನು ಆರಿಸಿಕೊಳ್ತಿದ್ದೆ. ಇಂಥಾ ಟೈಮ್ ನಲ್ಲಿ ಒಮ್ಮೆ ನನ್ನ ಫೋಟೋ ನೋಡಿ ನಂಗೇ ಬೇಜಾರಾಯ್ತು, ನಾನು ಬದಲಾಗ್ಬೇಕು ಅನ್ನೋದನ್ನು ಚಾಲೆಂಜಿಂಗ್ ಆಗಿ ತಗೊಂಡೆ. ನಾನಿವತ್ತು ಇಷ್ಟು ಫಿಟ್ ಆಗಿದ್ರೆ, ಸಿನಿಮಾ ಹೀರೋಯಿನ್ ಆಗಿದ್ರೆ ಅದಕ್ಕೆಲ್ಲ ಕಾರಣ,

ಅನಾರೋಗ್ಯಕ್ಕೆ ಸ್ಥೂಲಕಾಯ ಬಂದಿದ್ರೂ ಸರಿ, ಸೋಮಾರಿತನಕ್ಕೆ, ತಿನ್ನೋ ಅತಿ ಆಸೆಗೆ ಬೊಜ್ಜು ತುಂಬಿಸಿಕೊಂಡಿದ್ರೂ ಸೈ ಅಥವಾ ನೀವು ಸದ್ಯಕ್ಕೀಗ ಫಿಟ್ ಆಗಿದ್ದು ಇದನ್ನೇ ಲೈಫ್ ಲಾಂಗ್ ಮುಂದುವರಿಸಬೇಕು ಅಂದ್ಕೊಂಡಿದ್ರೂ ಸರೀನೇ, ಈ ಚಾಟ್‌ ನಿಮ್ಮ ಸಹಾಯಕ್ಕೆ ಬರುತ್ತೆ, ಬಹಳ ಸರಳವಾಗಿ ಯಾರು ಬೇಕಿದ್ರೂ ಫಾಲೋ ಮಾಡಬಹುದಾದ ಹೆಲ್ದೀ ಚಾರ್ಟ್ ಇದು. ನಿಮ್ಮ ದೇಹ ಮಾತ್ರ ಅಲ್ಲ, ಮನಸ್ಸನ್ನೂ ಖುಷಿ ಖುಷಿಯಾಗಿಡೋ ಸೀಕ್ರೆಟ್ ಗಳೆಲ್ಲ ಇದರಲ್ಲಿವೆ.

ವರ್ಷವಿಡೀ ನಿಮ್ಮ ಮೈ ಮನಸ್ಸನ್ನು ಖುಷಿಯಾಗಿ, ಹೆಲ್ದಿಯಾಗಿ ಇಡಬಲ್ಲ ಟಿಪ್ಸ್ ಗಳು ಹೀಗಿವೆ -

- ನಾಳೆ ಬೆಳಗ್ಗೆ ಅಲರಾಂ ಇಟ್ಟು, ಬೇಗ ಏಳೋಣ, ಯಾವ ಕಾರಣಕ್ಕೂ ಅಲರಾಂ ಸ್ನೂಜ್ ಮೋಡ್‌ಗೆ ಹೋಗದಿರಲಿ. ಒಂದು ದಿನಕ್ಕೆ ಇಷ್ಟು ಸಾಕು.

- ಮರುದಿನ ಬೆಳಗ್ಗೆ ಬೇಗ ಏಳೋದರ ಜೊತೆಗೆ ಒಂದು ದೊಡ್ಡ ಲೋಟದಲ್ಲಿ ಬಿಸಿನೀರನ್ನು ನಿಂಬೆ ರಸದೊಂದಿಗೆ ಕುಡಿಯಿರಿ, ಕಷ್ಟವಾದರೆ ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ.

- ಮೂರನೇ ದಿನ, ಮೇಲೆ ಹೇಳಿದ ಎರಡು ಟಿಪ್ಸ್ ಫಾಲೋ ಮಾಡೋದರ ಜೊತೆಗೆ ಅರ್ಧ ಗಂಟೆ ನಮಗೆ ತಿಳಿದ ಎಕ್ಸರ್ ಸೈಸ್ ಮಾಡೋಣ.

- ನಾಲ್ಕನೇ ದಿನ ಇಷ್ಟನ್ನು ಮಾಡಿ ಮನೆಯಲ್ಲೇ ಉಪಹಾರ ಸೇವಿಸಿ ಕೆಲಸಕ್ಕೆ ಹೋಗೋದನ್ನು ರೂಢಿಸಿಕೊಳ್ಳಬೇಕು.

- ದಿನಕ್ಕೆ ಎರಡು ಯಾವುದೇ ಸೀಸನಲ್ ಹಣ್ಣನ್ನು ತಿನ್ನೋದು ಐದನೇ ದಿನದ ರೆಸೊಲ್ಯೂಶನ್ ಆಗಲಿ.

- ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡೇ ಮಾಡ್ತೀನಿ, ಅದಕ್ಕೆ ತಕ್ಕ ಹಾಗೆ ಕೆಲಸಗಳನ್ನು ವಿಂಗಡಿಸುತ್ತೇನೆ ಅನ್ನೋದು ಆರನೇ ದಿನದ ಮಾಡಲೇ ಬೇಕಾದ ಕೆಲಸ.

- ಊಟದ ಜೊತೆಗೆ ಒಂದು ಬೌಲ್ ತುಂಬ ಹಸಿ ತರಕಾರಿ ತಿಂದೇ ತಿನ್ನುತ್ತೀನಿ ಅನ್ನೋದು ಏಳನೇ ದಿನ ಮಾಡಬೇಕಾದ್ದು.

- ಮರುದಿನ ಇವತ್ತು ಕರಿದ ತಿಂಡಿಗಳಿಗೆ ಗುಡ್ ಬೈ ಹೇಳ್ತೀನಿ ಅನ್ನಿ.

- ಬೆಳಗ್ಗೆ ಅಥವಾ ಸಂಜೆ ಸೂರ್ಯನ ಬಿಸಿಲಿಗೆ ಮೈ ಒಡ್ಡುತ್ತೇನೆ ಅನ್ನೋದು ಒಂಬತ್ತನೇ ದಿನ ಪಾಲಿಸಬೇಕಾದ್ದು.

- ನಿದ್ದೆ ಮಾಡೋದಕ್ಕಿಂತ ಎರಡು ಗಂಟೆ ಮೊದಲು ಊಟ ಮಾಡ್ತೀನಿ ಅನ್ನೋದು ಹತ್ತನೇ ದಿನ ರೆಸೊಲ್ಯೂಶನ್ ಆಗಲಿ.

ಇಲ್ಲಿ ಹನ್ನೊಂದರಿಂದ ಮೂವತ್ತನೇ ದಿನದವರೆಗೆ ಟು ಡು ಲೀಸ್ಟ್ ಲೀಸ್ಟ್ ಇಲ್ಲಿದೆ. ಅದೇ ಥರ ಅಭ್ಯಾಸ ರೂಢಿಸಿಕೊಳ್ಳಿ.

11ನೇ ದಿನ - ಇವತ್ತಿಂದ ಬರೀ ಒಂದು ಕಪ್ ಟೀ ಅಥವಾ ಕಾಫಿ ಮಾತ್ರ ಕುಡಿಯೋದು.

12ನೇ ದಿನ - ಪ್ಯಾಕೇಟ್ ಫುಡ್, ಚಿಪ್ಸ್, ಬಿಸ್ಕೆಟ್ ಇವತ್ತಿಂದ ತಿನ್ನಲ್ಲ.

13ನೇ ದಿನ - ನನ್ನ ಊಟ, ತಿಂಡಿಯ ಮಧ್ಯೆ ನಟ್ಸ್, ಡ್ರೈ ಫ್ರುಟ್ಸ್ ತಿಂತೀನಿ.

14ನೇ ದಿನ - ಕರೆಕ್ಟಾದ ಟೈಮ್ ಗೆ ಊಟ, ತಿಂಡಿ ಮಾಡ್ತೀನಿ.

15ನೇ ದಿನ - ಸಂಜೆ ನಂತರ ಕೆಫಿನ್ ಇರುವ ಯಾವುದನ್ನೂ ತಿನ್ನಲ್ಲ, ಕುಡಿಯಲ್ಲ.

16ನೇ ದಿನ - ದಿನಕ್ಕೆ ೩ ಲೀಟರ್ ನೀರು ಕುಡಿಯುತ್ತೇನೆ, ಹೆಚ್ಚೆಚ್ಚು ದ್ರವಾಹಾರ ತಿನ್ನುತ್ತೇನೆ.

17ನೇ ದಿನ - ನನಗೇನಾದರೂ ಬೇಸರವಾದ್ರೆ ಮನಸ್ಸಲ್ಲಿ ಇಟ್ಟುಕೊಳ್ಳದೇ ಆಪ್ತರಲ್ಲಿ ಹೇಳುತ್ತೇನೆ.

18ನೇ ದಿನ - ಇವತ್ತಿಂದ ಬಿಳಿ ಸಕ್ಕರೆ ಹಾಕಿರೋ ಏನನ್ನೂ ತಿನ್ನಲ್ಲ.

19ನೇ ದಿನ - ನನ್ನ ಊಟದ ಅರ್ಧ ಭಾಗ ತರಕಾರಿಯೇ ಇರುತ್ತೆ.

20ನೇ ದಿನ - ಇವತ್ತಿಂದ ಯಾವ ಕಾರಣಕ್ಕೂ ಎಲಿವೇಟರ್ ಬಳಸದೇ ಮೆಟ್ಟಿಲು ಹತ್ತಿ ಇಳಿಯುತ್ತೇನೆ.

21ನೇ ದಿನ - ಇವತ್ತು ಒಂದು ಹೊಸ ಬಗೆಯ ತರಕಾರಿ ತಿನ್ನುತ್ತೇನೆ.

22ನೇ ದಿನ - ದಿನಕ್ಕೆ ಯಾವುದಾದರೂ ಒಂದು ಬಗೆಯ ಸೊಪ್ಪು ತಿಂದೇ ತಿನ್ನುತ್ತೇನೆ.

23ನೇ ದಿನ - ಮಲಗೋ ಟೈಮ್ ನಲ್ಲಿ ಗ್ಯಾಜೆಟ್ಸ್ ನೋಡಲ್ಲ.

24ನೇ ದಿನ - ಮನೆ ಊಟವನ್ನೇ ಮಾಡುತ್ತೇನೆ. ತೀರಾ ಅನಿವಾರ್ಯ ಇದ್ದಾಗ ಮಾತ್ರ ಹೊರಗಿನ ಫುಡ್‌ ಸೇವಿಸ್ತೀನಿ.

25ನೇ ದಿನ - ಪ್ಯಾಕೇಟ್ ನಲ್ಲಿರುವ ಜ್ಯೂಸ್ ಕುಡಿಯಲ್ಲ. ಹಣ್ಣಿನ ಜ್ಯೂಸ್, ಎಳನೀರು ಕುಡೀತೀನಿ.

26ನೇ ದಿನ - ಚೆನ್ನಾಗಿ ಎಕ್ಸರ್ ಸೈಸ್ ಮಾಡೋ ಮೂಲಕ ಸಿಟ್ಟನ್ನು ಹದ್ದುಬಸ್ತಿನಲ್ಲಿ ಇಡುತ್ತೇನೆ.

27ನೇ ದಿನ - ಪಾರ್ಟಿ, ಪ್ರೋಗ್ರಾಂಗಳಲ್ಲಿ ರಾತ್ರಿ ಊಟದ ಜೊತೆಗೆ ಸ್ವೀಟ್ಸ್ ಇದ್ದರೆ ತಿನ್ನಲ್ಲ.

28ನೇ ದಿನ - ಹೊಟ್ಟೆ ತುಂಬಿತು ಅಂತ ಗೊತ್ತಾದ ಮೇಲೂ ತಿನ್ನಲ್ಲ.

29ನೇ ದಿನ - ಇವತ್ತಿಂದ ಮನೆಯವರ, ಫ್ರೆಂಡ್ ಜೊತೆಗೆ ವಾಕಿಂಗ್ ಮಾಡ್ತೀನಿ.

30ನೇ ದಿನ - ಆಹಾರ ಪದಾರ್ಥ ಖರೀದಿಸುವ ಮೊದಲು ಅದರಲ್ಲಿರುವ ಪೌಷ್ಟಿಕಾಂಶ ಎಷ್ಟು ಅಂತ ನೋಡ್ಕೊಂಡೇ ಖರೀದಿ ಮಾಡ್ತೀನಿ.

ಇದನ್ನು ಫಾಲೋ ಮಾಡಿ. ಆಮೇಲೆ ಈ ೩೦ ರಲ್ಲಿ ನಿಮಗೆಷ್ಟು ಮಾಕ್ಸ್F ಬಂತು ಅಂತ ನೋಡ್ಕೊಳ್ಳಿ. ೩೦ರಲ್ಲಿ ೩೦ ಮಾರ್ಕ್ ತೆಗೆಯಲು ಪ್ರಯತ್ನಿಸಿ. ಆಲ್ ದಿ ಬೆಸ್ಟ್.

ಟಿಸಿಎಸ್ ಉದ್ಯೋಗಿಗಳಿಗೆ ನೀಡಿದ ಹೆಲ್ತ್ ಚಾರ್ಟ್ ಎಂಬ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ...

click me!