ಸಮುದ್ರ, ನದಿ ತೀರದಲ್ಲಿರುವ ಮ್ಯಾಂಗ್ರೋವ್ ಕಾಡುಗಳ ಬಗ್ಗೆ ನಿಮಗೆ ಗೊತ್ತಾ, ಇವುಗಳ ರಕ್ಷಣೆ ಎಷ್ಟು ಮುಖ್ಯ?

Published : Jul 18, 2025, 01:24 PM ISTUpdated : Jul 18, 2025, 01:27 PM IST
forest

ಸಾರಾಂಶ

ಸಮುದ್ರದ ರಕ್ಷಣೆಗೆ ರಕ್ಷಾ ಕವಚಾ ಅಂದ್ರೆ ಈ ಮ್ಯಾಂಗ್ರೋವ್ ಅರಣ್ಯ. ಹಾಗಾದ್ರೆ ಏನಿದು ಮ್ಯಾಂಗ್ರೋವ್ ಕಾಡುಗಳು ? ಇವು ಬೆಳೆಯುವುದು ಹೇಗೆ ? ಸಮುದ್ರ, ನದಿಗಳ ತೀರದಲ್ಲಿರುವ ಮ್ಯಾಂಗ್ರೋವ್ ಅರಣ್ಯದ ರಕ್ಷಣೆ ಎಷ್ಟು ಮುಖ್ಯ?.

-ಲೋಕನಾಥ ಹೂಗಾರ್
ಪ್ರಕೃತಿಯಲ್ಲಿ ಉಹಿಸಲಾಗದಷ್ಟು ವಿಸ್ಮಯಗಳು ಇರುತ್ತವೆ. ಅವುಗಳನ್ನ ಅನುಭವಿಸಬೇಕಷ್ಟೇ. ನಿಸರ್ಗ ದೇವತೆ ಮನುಷ್ಯರನ್ನು ಕಾಪಾಡುವುದಷ್ಟೆ ಅಲ್ಲದೆ ತನ್ನನ್ನು ತಾನೇ ರಕ್ಷಣೆ ಮಾಡಿಕೊಳ್ಳುತ್ತಾಳೆ. ಭೂಮಿಯ ಬಹುಪಾಲು ಭಾಗ ನೀರಿನಿಂದ ಅವೃತವಾಗಿದೆ. ಈ ಸಮುದ್ರದ ರಕ್ಷಣೆಗೆ ರಕ್ಷಾ ಕವಚಾ ಅಂದ್ರೆ ಈ ಮ್ಯಾಂಗ್ರೋವ್ ಅರಣ್ಯ. ಹಾಗಾದ್ರೆ ಏನಿದು ಮ್ಯಾಂಗ್ರೋವ್ ಕಾಡುಗಳು ? ಇವು ಬೆಳೆಯುವುದು ಹೇಗೆ ? ಸಮುದ್ರ, ನದಿಗಳ ತೀರದಲ್ಲಿರುವ ಮ್ಯಾಂಗ್ರೋವ್ ಅರಣ್ಯದ ರಕ್ಷಣೆ ಎಷ್ಟು ಮುಖ್ಯ?.

ಸಾಮನ್ಯವಾಗಿ ಈ ಮ್ಯಾಂಗ್ರೋವ್ ಕಾಡುಗಳನ್ನು ಎಲ್ಲರೂ ಗಮನಿಸಿರುತ್ತಾರೆ. ಸಮುದ್ರ, ನದಿ, ತೊರೆಗಳ ಬಳಿ ಬೆಳೆಯುವ ವಿಶಿಷ್ಟ ಮರಗಳು ಮತ್ತು ಸಸ್ಯಗಳೇ ಈ ಮ್ಯಾಂಗ್ರೋವ್ ಕಾಡು. ನದಿಗಳಿಂದ ಹರಿದು ಬರುವ ಸ್ವಚ್ಛ ನೀರು ಮತ್ತು ಸಮುದ್ರದಲ್ಲಿರುವ ಉಪ್ಪು ನೀರು ಮಿಶ್ರಣವಾಗುವ ಸ್ಥಳದಲ್ಲಿ ಸಾಮನ್ಯವಾಗಿ ಮಣ್ಣು ದಪ್ಪವಾಗಿರುತ್ತದೆ. ಇಂತಹ ಮಿಶ್ರಿತ ನೀರು ಮತ್ತು ಮಣ್ಣಿನಲ್ಲಿ ಬೆಳೆಯುಬಹುದಾದ ವಿಶೇಷ ಮರಗಳು ಈ ಮ್ಯಾಂಗ್ರೋವ್ ಮರಗಳು. ಈ ಮಣ್ಣಿನಲ್ಲಿ ಆಮ್ಲಜನಕ ಕಡಿಮೆ ಇರುತ್ತದೆ, ಇಲ್ಲಿ ಸಾಮನ್ಯ ಮರಗಳು ಬೆಳೆಯಲು ಸಾಧ್ಯವಿಲ್ಲ. ಆದರೆ ಈ ವಿಶೇಷ ಮರಗಳು ಉಬ್ಬಿದ ಬೇರುಗಳನ್ನು ಹೊಂದಿರುವದರಿಂದ ಅಮ್ಲಜನಕವನ್ನು ಗಾಳಿಯಿಂದ ನೇರವಾಗಿ ಪಡೆಯುತ್ತವೆ. ಇನ್ನೂ ಈ ಮ್ಯಾಂಗ್ರೋವ್ ಮರಗಳು ಒಂದು ರೀತಿಯ ಸ್ವಾವಲಂಬಿ ಜೀವಿಗಳು, ಇವುಗಳ ಬೀಜಗಳು ಮರದಲ್ಲೇ ಮೊಳಕೆ ಹೊಡೆಯುವುದರಿಂದ ಅವು ನಿಧಾನವಾಗಿ ನೀರಿನಲ್ಲಿ ತೇಲುತ್ತಾ ಹೋಗಿ, ಹೊಸ ಸ್ಥಳದಲ್ಲಿ ಬಿದ್ದು ಬೆಳೆಯಲು ಫ್ರಾರಂಭವಾಗುತ್ತವೆ. ಸಾಮನ್ಯವಾಗಿ ಸಮುದ್ರದ ಅಲೆಗಳು ಅಗ್ಗಾಗೆ ಇವುಗಳನ್ನು ಮುಚ್ಚುವುದರಿಂದ ಈ ಮರಗಳು ಕಡಲಿನ ಉಪ್ಪು ನೀರಿನೊಂದಿಗೆ ಹೊಂದಿಕೊಳ್ಳುತ್ತಾ ದೊಡ್ಡ ಪರಿಸರ ವವ್ಯಸ್ಥೆಯೆ ರೂಪುಗೊಳ್ಳುತ್ತದೆ.

ಸಮುದ್ರದ ದಡದಲ್ಲಿರುವ ಮ್ಯಾಂಗ್ರೋವ್ ಅರಣ್ಯ ಎಷ್ಟು ಮುಖ್ಯ ?
ಇತ್ತೀಚೆಗೆ ಕರ್ನಾಟಕದ ಕರಾವಳಿಯಲ್ಲಿ ಕಡಲ್ಕೊರೆತವನ್ನ ನಾವು ಅಗ್ಗಾಗೆ ನೋಡುತ್ತಾ ಇರುತ್ತೇವೆ. ಮ್ಯಾಂಗ್ರೋವ್ ಮರಗಳು ಇಂತಹ ಭೀಕರ ಕಡಲ ಅಲೆಗಳ ತೀವ್ರತೆಯನ್ನು ಕಡಿಮೆ ಮಾಡಿ ಸಮುದ್ರ ದಡದ ಹಾನಿಯನ್ನು ಕಡಿಮೆ ಮಾಡುತ್ತದೆ. ಈ ವಿಶೇಷ ಮರಗಳ ಬೇರು ವಿಶಾಲವಾಗಿ ಹಬ್ಬಿರುವುದರಿಂದ ಅಲೆಗಳು ದಡಕ್ಕೆ ಅಪ್ಪಳಿಸುವಾಗ ಅವುಗಳ ವೇಗವನ್ನು ಕಡಿಮೆಗೊಳಿಸಿ ಮರಗಳ ಮಧ್ಯೆ ಅಲೆಗಳ ಶಕ್ತಿಯನ್ನು ಕುಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಮರಗಳ ಬೇರು ಮಣ್ಣು ಹಿಡಿದಿಟ್ಟುಕೊಳ್ಳುವದರಿಂದ ಭೂಕುಸಿತದ ಆಪಾಯ ಕಡಿಮೆಯಾಗುತ್ತದೆ. ಇನ್ನೂ ಸಮುದ್ರದಲ್ಲಿ ಉಂಟಾಗುವ ಭಾರಿ ಸುನಾಮಿ, ಚಂಡಮಾರುತಗಳ ತೀವ್ರತೆಯನ್ನು ಶೇ. 70-90% ತಡೆಯಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಅಷ್ಟೇ ಅಲ್ಲದೇ ಈ ಮ್ಯಾಂಗ್ರೋವ್ ಮರಗಳು ಹಲವು ಜಲಚರಗಳಿಗೆ ಸೂರು ನೀಡಿದೆ. ಕಡಲಿನ ಬಹುಪಾಲು ಮೀನುಗಳು, ಚಿಪ್ಪುಗಳು ಸೇರಿದಂತೆ ಹಲವು ಸಣ್ಣ ಸಣ್ಣ ಜಲಚರಿಗಳಿಗೆ ಗೂಡು ಕಲ್ಪಿಸಿದೆ. ಈ ಮರಗಳು ಅಧಿಕ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಂಡು ಜಾಗತಿಕ ತಾಪಮಾನ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕರ್ನಾಟಕದ ಕರಾವಳಿಯಲ್ಲೂ ಇವೆ ಮ್ಯಾಂಗ್ರೋವ್ ಕಾಡುಗಳು!
ಕರ್ನಾಟಕದಲ್ಲೂ ನಾವು ಮ್ಯಾಂಗ್ರೋವ್ ಅರಣ್ಯಗಳನ್ನು ಕಾಣಬಹುದು. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮ್ಯಾಂಗ್ರೋವ್ ಕಾಡು ಹೊಂದಿದೆ. ಅಘನಾಶಿನಿ, ಶರಾವತಿ, ಗಂಗಾವಳಿ ಪಾತ್ರದಲ್ಲಿ ಈ ಮರಗಳು ವಿಸ್ತಾರವಾಗಿ ಕಾಣಸಿಗುತ್ತವೆ. ಉಡುಪಿಯಲ್ಲಿ ಸ್ವರ್ಣ, ಸೀತಾ, ಕೋಡಿ ನದಿ ತೀರದಲ್ಲಿ ಮ್ಯಾಂಗ್ರೋವ್ವ್ ಅರಣ್ಯ ಕಾಣಬಹುದು, ದಕ್ಷಿಣ ಕನ್ನಡದ ಪವಂಜೆ, ಮುಲಕಿ ಭಾಗದಲ್ಲೂ ಅಲ್ಪ ಪ್ರಮಾಣದ ಮ್ಯಾಂಗ್ರೋವ್ ಅರಣ್ಯ ಕಾಣಸಿಗುತ್ತದೆ.

ಒಟ್ಟಿನಲ್ಲಿ ಪ್ರಕೃತಿ ಮನುಷ್ಯರಿಗೆ ಹಲವಾರು ಕೊಡುಗೆಗಳನ್ನು ನೀಡಿದೆ. ಅಷ್ಟೇ ಅಲ್ಲದೆ ತನ್ನನೂ ತಾನೆ ರಕ್ಷಣೆ ಮಾಡಿಕೊಳ್ಳುತ್ತಿದೆ. ಈ ಮ್ಯಾಂಗ್ರೋವ್ ಕಾಡುಗಳು ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಮತೊಲನ ಕಾಪಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮ್ಯಾಂಗ್ರೋವ್ ರಕ್ಷಿಸಿ, ಕಡಲನ್ನು ಕಾಪಾಡುವುದು ಮನುಷ್ಯರ ಆದ್ಯ ಕರ್ತವ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ
Bella Hadid: 'ಕೆಲಸ ಬಿಟ್ಟಾಗ ನನ್ನನ್ನು ಕಸದಂತೆ ಕಂಡರು' - ನೋವು ತೋಡಿಕೊಂಡ ಸೂಪರ್‌ಮಾಡೆಲ್ ಯಾರು?