
ದಿನ ಬಳಕೆಯ ಬಟ್ಟೆಗಳು, ಮಕ್ಕಳ ಬಟ್ಟೆ, ಸಾಕ್ಸ್ ಇವನ್ನೆಲ್ಲ ವಾಷಿಂಗ್ ಮೆಶಿನ್‌ನಲ್ಲಿ ಒಗೆಯುವುದು ಎಲ್ಲರಿಗೂ ಗೊತ್ತು. ಆದರೆ, ವಾಷಿಂಗ್ ಮೆಶಿನ್‌ನಿಂದ ನೀವು ಇದಕ್ಕಿಂತಾ ಹೆಚ್ಚಿನ ಕೆಲಸ ತೆಗೆಸಬಹುದು. ಯಾವುದನ್ನೆಲ್ಲ ಮೆಶಿನ್ ವಾಶ್‌ಗೆ ಹಾಕಬಹುದು ನೋಡೋಣ ಬನ್ನಿ.
ಯೋಗ ಮ್ಯಾಟ್
ನಮ್ಮ ಮೈ ಬೆವರು ಹಾಗೂ ಕಾಲಿನ ಧೂಳು ಕುಳಿತು ಯೋಗ ಮ್ಯಾಟ್ ಬಹು ಬೇಗ ಕೊಳೆಯಾಗುತ್ತದೆ. ಆದರೆ, ಹೆಚ್ಚಿನವರಿಗೆ ಇದನ್ನು ವಾಷಿಂಗ್ ಮೆಶಿನ್‌ನಲ್ಲಿ ತೊಳೆಯಬಹುದೆಂದು ತಿಳಿದಿಲ್ಲ. ಒಂದಿಷ್ಟು ಟವಲ್‌ಗಳ ಜೊತೆ ಯೋಗ ಮ್ಯಾಟ್ ಹಾಕಿ ತಣ್ಣನೆಯ ನೀರನ್ನು ಬಳಸಿ ಜೆಂಟಲ್ ವಾಶ್‌ಗೆ ಹಾಕಿ.
ಹೆಲ್ತ್ ಇನ್ಶೂರೆನ್ಸ್ ಕೊಳ್ಳುವ ಮೊದಲು ನೆನಪಿಡಬೇಕಾದ 5 ಅಂಶಗಳು!
ಮೌಸ್ ಪ್ಯಾಡ್ಸ್
ಮೌಸ್ ಪ್ಯಾಡ್‌ಗಳಲ್ಲಿ ಬಹಳಷ್ಟು ಕೊಳೆ ಹಾಗೂ ಕ್ರಿಮಿಯಿರುತ್ತದೆ. ಆದರೆ, ಯಾರೂ ಅದನ್ನು ತೊಳೆಯುವ ಗೊಡವೆಗೆ ಹೋಗುವುದಿಲ್ಲ. ಆದರೆ ಅವನ್ನು ಆರಾಮಾಗಿ ಮೆಷಿನ್‌ಗೆ ಹಾಕಿ ಸ್ವಚ್ಛಗೊಳಿಸಬಹುದು.
ಕ್ರೀಡಾ ಸಲಕರಣೆಗಳು
ಕ್ರೀಡಾ ಸಾಮಗ್ರಿಗಳು ನಿಮ್ಮ ಬೆವರು ಹಾಗೂ ಮಣ್ಣುನ್ನು ಹೀರಿಕೊಂಡು ಬಹಳ ಕೊಳೆಯಾಗಿರುತ್ತವೆ. ಸುಮ್ಮನೆ ಬಟ್ಟೆಯಲ್ಲಿ ಒರೆಸಿದರೆ ಕ್ಲೀನ್ ಆಗುವುದಿಲ್ಲ. ಇವನ್ನು ಮೆಶ್ ಕವರ್ ಇಲ್ಲವೇ ತಲೆದಿಂಬಿನ ಕವರ್‌ನೊಳಗೆ ಹಾಕಿ ಮೆಶಿನ್‌ಗೆ ಹಾಕಿ. ಸ್ಲೋ ಸೈಕಲ್ ಮೋಡ್‌ಗೆ ಹಾಕಿ. ಸ್ವಲ್ಪ ಡಿಟರ್ಜೆಂಟ್ ಬಳಸಿ.
ಬಟ್ಟೆಯ ಬ್ಯಾಗ್‌ಗಳು
ಬಟ್ಟೆಯ ಬ್ಯಾಗ್‌ಗಳು ಅದರಲ್ಲೂ ಪ್ರತಿನಿತ್ಯ ದಿನಸಿ ತರುವ ಬ್ಯಾಗ್ ಬಹುಬೇಗ ಕೊಳೆಯಾಗುತ್ತದೆ. ಆದರೆ, ಹೆಚ್ಚಿನವರು ಅದನ್ನು ಕ್ಲೀನ್ ಮಾಡುವ ಗೊಡವೆಗೆ ಹೋಗುವುದಿಲ್ಲ. ಇವುಗಳನ್ನು ವಾಷಿಂಗ್ ಮೆಶಿನ್‌ನಲ್ಲಿ ಸುಲಭವಾಗಿ ಒಗೆಯಬಹುದು.
ಅಡುಗೆಮನೆಯ ಪರಿಕರಗಳು
ಗ್ಲೋವ್ಸ್, ರಬ್ಬರ್ ಚಾಪರ್ ಬೇಸ್, ಕೈ ಒರೆಸುವ ಬಟ್ಟೆ, ಸ್ಟೌವ್ ಸ್ವಚ್ಛಗೊಳಿಸುವ ಬಟ್ಟೆ ಮುಂತಾದವನ್ನು ವಾರಕ್ಕೊಮ್ಮೆಯಾದರೂ ವಾಷಿಂಗ್ ಮೆಶಿನ್‌ಗೆ ಹಾಕಿ ಸ್ವಚ್ಛಗೊಳಿಸಿ.
ಹೈಟಾಗಿ ಕಾಣಿಸಬೇಕೆಂದರೆ ಹಿಂಗಿರಲಿ ನಿಮ್ ಡ್ರೆಸ್!
ಸ್ನೀಕರ್ಸ್
ಸ್ನೀಕರ್‌ಗಳನ್ನು ಬಹಳಷ್ಟು ಜನ ಬೋರ್ ಹೊಡೆಸಿಕೊಂಡು ತೊಳೆಯುತ್ತಾರೆ. ಆದರೆ, ಅದನ್ನು ವಾಷಿಂಗ್ ಮೆಷಿನ್‌ಗೆ ಹಾಕಬಹುದೆಂಬ ಕಲ್ಪನೆ ಬಹುತೇಕರಿಗೆ ಇಲ್ಲ. ಕೆಲವು ಟವಲ್‌ಗಳ ಜೊತೆ ಸ್ನೀಕರ್ಸ್‌ನ್ನು ಮೆಷಿನ್‌ಗೆ ಹಾಕಿ ಡೆಲಿಕೇಟ್ ಮೋಡ್‌ನಲ್ಲಿ ವಾಶ್ ಮಾಡಬಹುದು.
ಟೊಪ್ಪಿ ಹಾಗೂ ಹೇರ್ ಬ್ಯಾಂಡ್‌ಗಳು
ಮೆಶ್ ಬ್ಯಾಗ್‌ನಲ್ಲಿ ನಿಮ್ಮ ಸ್ಪೋರ್ಟ್ಸ್ ಕ್ಯಾಪ್‌ಗಳು, ಬ್ಯಾಂಡ್‌ಗಳನ್ನು ಹಾಕಿ ಮೆಷಿನ್ ವಾಶ್ ಮಾಡಿ. ಬಿಸಿ ನೀರಿನ ಬಳಕೆ ಬೇಡ. ಇದರಿಂದ ನಿಮ್ಮ ಹೇರ್ ಬ್ಯಾಂಡ್‌ಗಳ ಎಲಾಸ್ಟಿಕ್ ಹೋಗಬಹುದು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.