
ವೃಷಭ ರಾಶಿಯವರಿಗಿಂದು ಖುಷಿ ಸುದ್ದಿ ದೊರಕಲಿದೆ : ಉಳಿದ ರಾಶಿ ಹೇಗಿದೆ..?
ಮೇಷ
ಗೊಂದಲ ಗಲಾಟೆಗಳಿಗೆ ಹೋಗದೇ ಶಾಂತ
ವಾಗಿರಿ. ಇಂದು ನಿಮ್ಮದಲ್ಲ. ಆದಷ್ಟು ಜಾಗ್ರತೆ
ಯಿಂದ ಇದ್ದರೆ ಒಳಿತು. ಹಿರಿಯರ ಗೌರವಿಸಿ.
ವೃಷಭ
ಖುಷಿಯ ಸುದ್ದಿಯೊಂದು ನಿಮ್ಮ ಕಿವಿಗೆ
ಬೀಳಲಿದೆ. ಇದರಿಂದ ನಿಮ್ಮಲ್ಲಿ ಹರುಷವು
ಉಂಟಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಿಥುನ
ಹೆತ್ತವರೊಂದಿಗೆ ವಾಗ್ವಾದ ಅಷ್ಟು ಸರಿಯಲ್ಲ.
ನೀವು ಹಾಗಿರಲಿಲ್ಲ. ನಿಮ್ಮ ಒತ್ತಡದ ಬದುಕು
ನಿಮ್ಮನ್ನು ಬದಲಿಸುತ್ತಿದೆ. ಧ್ಯಾನಾಸಕ್ತರಾಗಿ.
ಕಟಕ
ಹೊಸ ಥರದ ಆಲೋಚನೆಗಳು ನಿಮ್ಮನ್ನು
ಹುರಿದುಂಬಿಸಲಿವೆ. ಆದಕಾರಣ ಮಾನಸಿಕ
ನೆಮ್ಮದಿ ಸಿಗಲಿದೆ. ಗೆಳೆಯರ ಭೇಟಿ.
ಸಿಂಹ
ವರಮಾನದಲ್ಲಿ ಅಲ್ಪ ಸ್ವಲ್ಪ ಏರುಪೇರಾಗಿದೆ.
ಅದಕ್ಕಾಗಿ ಹೆಚ್ಚು ಚಿಂತಿಸಬೇಡಿ. ನಿಮ್ಮ ಎಲ್ಲಾ
ಕಷ್ಟಗಳು ಒಮ್ಮೆಲೆ ಸರಿ ಹೋಗದು. ಕಾಯಿರಿ.
ಕನ್ಯಾ
ಹಳೆಯ ಮಿತ್ರರು ನಿಮ್ಮ ಕಷ್ಟವನ್ನು ದೂರ
ಮಾಡಲಿದ್ದಾರೆ. ನಿಮ್ಮಿಂದ ಹೊಸದೊಂದು
ಮಹತ್ವದ ಕೆಲಸವು ಈಗ ಆಗುವುದಿದೆ.
ತುಲಾ
ಅಂದುಕೊಂಡ ಕೆಲಸಗಳೆಲ್ಲಾ ನಿಧಾನಗತಿಯಲ್ಲಿ
ಆಗಲಿವೆ. ಆದರೂ ನಿಮ್ಮ ಪ್ರಯತ್ನವನ್ನು
ನಿಲ್ಲಿಸದೇ ನಿರಂತರವಾಗಿ ಮುಂದುವರೆಸಿ.
ವೃಶ್ಚಿಕ
ನಿಮ್ಮ ನೆರೆಹೊರೆಯವರು ನಿಮ್ಮೊಡನೆ
ಯುದ್ಧಕ್ಕೆ ಬರಲಿದ್ದಾರೆ. ನೀವು ಮಾತ್ರ
ಉದ್ರೇಕಗೊಳ್ಳದಿರಿ. ಕೋಪಕ್ಕೆ ಆಸ್ಪದ ಬೇಡ.
ಧನುಸ್ಸು
ಹಣಕಾಸಿನ ಚಿಂತೆಯಿದ್ದರೂ ಆಗಾಗ ನಿಮ್ಮ
ಗೆಳೆಯರ ಅದನ್ನು ದೂರ ಮಾಡುತ್ತಿದ್ದಾರೆ.
ನೋವನ್ನು ಮರೆಯುವಂತೆ ಮಾಡಿದ್ದಾರೆ.
ಮಕರ
ಹೊಸ ಯೋಜನೆಗಳನ್ನು ರಚಿಸಲು ಸಕಾಲ.
ಯೋಚನೆಗಳು ಚದುರದಂತೆ ನಿಗಾವಹಿಸಿದರೆ
ಒಳಿತು. ಯೋಗ, ಪ್ರಾಣಾಯಾಮ ಮಾಡಿರಿ.
ಕುಂಭ
ದ್ವೇಷಿಸುವರೂ ಸ್ನೇಹಿತರಾಗಲಿದ್ದಾರೆ. ಅಂತಹ
ವಾತಾವರಣವು ಏರ್ಪಡಲಿದೆ. ಹಿರಿಯರ
ಆಶೀರ್ವಾದವೇ ಇದಕ್ಕೆಲ್ಲಾ ಕಾರಣವಾಗಿದೆ.
ಮೀನ
ಮನೆಯ ಮುಂಬಾಗಿಲಿನ ಎದುರೇ ಒಂದು
ಉತ್ತಮ ಪೇಂಟಿಂಗ್ ಹಾಕಿ. ಯಾವ ಬಣ್ಣ
ದ್ದಾದರೂ ಸರಿ. ಎಲ್ಲವೂ ಒಳಿತಾಗಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.