ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಈ ಸಮಾರಂಭದಲ್ಲಿ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಮಾಡಿದ ಭಾಷಣ ಸಿನಿಮಾವೊಂದರಿಂದ ಕಾಫಿ ಮಾಡಿದ್ದು ಎಂದು ಈಗ ಟ್ರೋಲ್ ಆಗ್ತಿದೆ.
ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಇತ್ತೀಚೆಗೆ ನಡೆದು ಹೋಗಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರು, ಕ್ರಿಕೆಟಿಗರು ಹಾಲಿವುಡ್ ನಟರು, ಮಾರ್ಕ್ ಜುಕರ್‌ಬರ್ಗ್, ಬಿಲ್‌ಗೆಟ್ಸ್ ಸೇರಿದಂತೆ ಜಾಗತಿಕ ಶ್ರೀಮಂತ ಉದ್ಯಮಿಗಳು, ಭಾಗಿಯಾಗಿ ಅಂಬಾನಿ ಕುಟುಂಬ ಕಾರ್ಯಕ್ರಮದ ವೈಭವಕ್ಕೆ ಸಾಕ್ಷಿಯಾಗಿದ್ದರು. ಆದರೆ ತಮ್ಮ ಈ ವಿವಾಹ ಪೂರ್ವ ಅದ್ದೂರಿ ಕಾರ್ಯಕ್ರಮದಲ್ಲಿ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಅತಿಥಿಗಳ ಮುಂದೆ ಭಾಷಣವೊಂದನ್ನು ಮಾಡಿದ್ದರು. ಈ ಭಾಷಣಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಈ ಭಾಷಣ ಸಿನಿಮಾವೊಂದರ ಡೈಲಾಗ್ ಆಗಿದ್ದು, ಕಾಫಿ ಮಾಡಲಾಗಿದೆ ಎಂಬ ಊಹಾಪೋಹಾವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಆರೋಪಕ್ಕೆ ಟೀಕೆ ಮಾಡಿದವರು ಪುರಾವೆಯನ್ನು ನೀಡಿದ್ದಾರೆ.
ಇದು ಸಾಮಾಜಿಕ ಜಾಲತಾಣ ಯುಗ ಕೆಲವೊಂದು ಘಟನೆಗಳನ್ನು ನಾವು ಮರೆತರು ಇಂಟರ್‌ನೆಟ್ ಮರೆಯುವುದಿಲ್ಲ, ಹಾಗೂ ಇಂಟರ್‌ನೆಟ್ ನಮ್ಮನ್ನು ಮರೆಯಲು ಬಿಡುವುದು ಇಲ್ಲ, ಅದೇ ರೀತಿ ನಾವು ಏನೇ ಕಾಪಿ ಮಾಡಿದರು ಕ್ಷಣದಲ್ಲಿ ಅದನ್ನು ಜಗತ್ತಿಗೆ ತೋರಿಸಿಬಿಡುತ್ತದೆ ಈ ಇಂಟರ್‌ನೆಟ್, ಜನರು ಕೂಡ ಬುದ್ದಿವಂತರಾಗಿದ್ದು, ಇಂತದ್ದೆಲ್ಲವನ್ನೂ ಆದಷ್ಟು ಬೇಗ ಪತ್ತೆ ಮಾಡಿ ಬಿಡುತ್ತಾರೆ. ಅದೇ ರೀತಿ ಈಗ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಮಾಡಿದ ಭಾಷಣ ನಕಲು ಮಾಡಿದ್ದು ಎಂದು ಇಂಟರ್‌ನೆಟ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ.
ಅನಂತ್ ಅಂಬಾನಿ ಕೈಲಿದ್ದ 18 ಕೋಟಿಯ ದುಬಾರಿ ವಾಚ್‌ಗೆ ಮನಸೋತ ಮಾರ್ಕ್ ಜುಕರ್‌ಬರ್ಗ್ ಪತ್ನಿ
ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಭಾಷಣವೂ ಮದ್ವೆ ಪೂರ್ವ ವಿವಾಹ ಕಾರ್ಯಕ್ರಮದ ಪ್ರಮುಖ ಹೈಲೈಟ್ ಆಗಿತ್ತು. ತಮ್ಮ ಭಾಷಣದಲ್ಲಿ ರಾಧಿಕಾ ಮರ್ಚೆಂಟ್ ತಮ್ಮ ಭಾಷಣಲ್ಲಿ ತನ್ನ ಭಾವಿ ಪತಿ, ತನ್ನ ಬದುಕಿನ ಪ್ರೀತಿ ಅನಂತ್ ಅಂಬಾನಿ ಜೊತೆಗಿನ ಪ್ರೀತಿಯ ಬಗ್ಗೆ ಒಡನಾಟದ ಬಗ್ಗೆ ಅದ್ಭುತವಾಗಿ ಮಾತನಾಡಿದ್ದರು. ಈ ಭಾಷಣಕ್ಕೆ ಸಮಾರಂಭಕ್ಕೆ ಬಂದ ಅತಿಥಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈ ಭಾಷಣವೂ ಹಾಲಿವುಡ್ ಸಿನಿಮಾವೊಂದರಿಂದ ಕಾಪಿ ಮಾಡಿದ್ದು ಎಂದು ನೆಟ್ಟಿಗರು ಆರೋಪಿಸಿದ್ದಾರೆ.
2004ರಲ್ಲಿ ತೆರೆಗೆ ಬಂದ ಹಾಲಿವುಡ್ ಸಿನಿಮಾ ಡಾನ್ಸ್ ವಿತ್ ಮಿಯ ತುಣಕಾಗಿದ್ದು, ರಾಧಿಕಾ ಭಾಷಣಕ್ಕೂ ಈ ಸಿನಿಮಾದಲ್ಲಿರುವ ಡೈಲಾಗ್‌ಗಳಿಗೂ ಸಾಮ್ಯತೆ ಇರುವುದನ್ನು ನೆಟ್ಟಿಗರು ಪತ್ತೆ ಮಾಡಿದ್ದಾರೆ. ಇಂಟರ್‌ನೆಟ್ ಬಳಕೆದಾರ್ ಸಾದಿಕ್ ಸಲೀಂ ಎಂಬಾತ ರಾಧಿಕಾ ಭಾಷಣ ಹಾಗೂ ಸಿನಿಮಾದಲ್ಲಿ ನಟಿ ಸುಸಾನ್ ಸರಡಾನ್ ತಮ್ಮಷ್ಟಕ್ಕೆ ತಾವು ಹೇಳಿಕೊಳ್ಳುತ್ತಿರುವ ಮಾತಿನ ತುಣಕನ್ನು ಒಟ್ಟಿಗೆ ಸಂಯೋಜಿಸಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅಲ್ಲದೇ 'ನಾವು ಮಾತನಾಡುವುದಿಲ್ಲ, ಆದರೆ ನಾವು ತನಿಖೆ ಮಾಡುತ್ತೇವೆ. ಅವರು ನನ್ನನ್ನು ಕರೆಯಬಹುದಿತ್ತು? ಆಗ ನಾನು ಕೆಲವು ಕೋಟಿ ಹಣ ಪಡೆದು ಆ ಭಾಷಣದಲ್ಲಿರುವ ಕೆಲ ಪದಗಳನ್ನು ಬದಲಾಯಿಸುತ್ತಿದ್ದೆ' ಎಂದು ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ಸಾಧಿಕ್ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ರಾಧಿಕಾಗೆ ಬೆಂಬಲ ವ್ಯಕ್ತಪಡಿಸಿದ್ದು, ನಕಲಿ ಮಾಡಿದರೆ ಏನಾಯಿತು ಅದು ನಕಲಿ ಮಾಡಿದರೂ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕಾರಣವಿಲ್ಲದೇ ಏಕೆ ದ್ವೇಷ ಮಾಡ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಬಹುಶಃ ಅದು ಆಕೆಯ ಫೇವರಿಟ್ ಸಿನಿಮಾ ಹಾಗೂ ಆಕೆಯ ಫೇವರಿಟ್ ಡೈಲಾಗ್ ಆಗಿರಬಹುದು, ನನಗೆ ಆಕೆಯ ಭಾಷಣ ದೊಡ್ಡ ವಿಷಯವಾಗಲಿಲ್ಲ, ಆದರೆ ಅವರಿಬ್ಬರ ನಡುವಣ ಕೆಮಿಸ್ಟ್ರಿ ನನಗೆ ಬೇಸರ ಮೂಡಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆ ನೇರವಾಗಿ ಸಿನಿಮಾದಿಂದಲೇ ಡೈಲಾಗ್ ಆರಿಸಿಕೊಂಡಿದ್ದರೆ ತಪ್ಪೇನು ಎಂದು ಅನೇಕರು ಪ್ರಶ್ನಿಸಿದ್ದಾರೆ. ನಾನು ಕೂಡ ನಾನೇ ಭಾಷಣಕ್ಕೆ ಡೈಲಾಗ್ ಬರೆಯುವ ಬದಲು ಬೇರೆ ಬೇರೆ ಸಿನಿಮಾದಿಂದ ಡೈಲಾಗ್ ತೆಗೆಯಬೇಕು ಎಂದುಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಇನ್ನು ಕೆಲವರು ರಾಧಿಕಾ ಅವರನ್ನು ಟ್ರೋಲ್ ಮಾಡಿದ್ದು, ಸೃಜನಶೀಲತೆ ಬುದ್ಧಿವಂತಿಕೆ ಮುಂತಾದ ಕೆಲವೊಂದನ್ನು ಹಣಕೊಟ್ಟು ಪಡೆಯಲಾಗದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಷ್ಟೊಂದು ಹಣ ವೆಚ್ಚ ಮಾಡಿದ್ದೀರಿ? ಒಂದು ಸ್ವಂತ ಭಾಷಣ ಬರೆಯಲು ಕಾಪಿ ರೈಟರ್ ಅನ್ನು ಇಡಲು ಸಾಧ್ಯವಾಗಲಿಲ್ವೆ ಎಂದು ಪ್ರಶ್ನೆ ಮಾಡಿದ್ದಾರೆ.
ಇವರೇ ನೋಡಿ ಅನಂತ್ ಅಂಬಾನಿ ಮಾವ 755 ಕೋಟಿ ಉದ್ಯಮದ ಒಡೆಯನಾದರೂ ಪ್ರಚಾರದಿಂದ ದೂರ ದೂರ
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ 2023ರ ಜನವರಿಯಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ವಿವಾಹ ಪೂರ್ವ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ಬಹಳ ಅದ್ದೂರಿಯಾಗಿ ನಡೆದಿತ್ತು. ಬರೀ ದೇಶದ ಮಾತ್ರವಲ್ಲದೇ ಜಗತ್ತಿನೆಲ್ಲೆಡೆಯ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿದ್ದರು.