Kidney Health Safety Tips: ಒಂದೇ ಒಂದು ಕಿಡ್ನಿ ಇರೋರು ಎಷ್ಟು ಸುರಕ್ಷಿತ?

By Suvarna News  |  First Published Mar 8, 2024, 12:11 PM IST

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಅದರ ಮೇಲೆ ಕೆಲಸದ ಹೊಣೆ ಹೆಚ್ಚಿದೆ. ಕೆಲ ಕಾರಣಕ್ಕೆ ಮನುಷ್ಯ ಒಂದೇ ಕಿಡ್ನಿಯಲ್ಲಿ ಬದುಕುವ ಅನಿವಾರ್ಯತೆ ಬರುತ್ತೆ. ಆಗ ಆ ವ್ಯಕ್ತಿ ಜೀವನ ಬದಲಾಗುತ್ತಾ? ಪ್ರಶ್ನೆಗೆ ಉತ್ತರ ಇಲ್ಲಿದೆ. 
 


ನಮ್ಮ ದೇಹದ ಪ್ರತಿಯೊಂದು ಅಂಗವೂ ಬಹಳ ಮಹತ್ವಪಡೆಯುತ್ತದೆ. ಒಂದು ಅಂಗ ಕೈಕೊಟ್ಟರೂ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ನಂತ್ರ ದೇಹ ಆ ಅಂಗವಿಲ್ಲದೆ ತನ್ನ ಕೆಲಸವನ್ನು ಮುಂದುವರೆಸುತ್ತದೆ. ನಮ್ಮ ದೇಹದಲ್ಲಿ ಎರಡು ಕಿಡ್ನಿಗಳಿವೆ. ಅವು ನಿರಂತರವಾಗಿ ಕೆಲಸ ಮಾಡುತ್ತವೆ. ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. 

ಮೂತ್ರಪಿಂಡ (Kidney) ಗಳ ಮುಖ್ಯ ಕಾರ್ಯ ದೇಹದಿಂದ ಕೊಳಕು ಮತ್ತು ತ್ಯಾಜ್ಯವನ್ನು ತೆಗೆದುಹಾಕುವುದು. ಕಿಡ್ನಿ, ದೇಹದಲ್ಲಿ ಹೆಚ್ಚುವರಿ ಉಪ್ಪು, ಸಕ್ಕರೆ ಮತ್ತು ಇತರ ರಾಸಾಯನಿಕಗಳನ್ನು ಫಿಲ್ಟರ್ (filter) ಮಾಡುತ್ತದೆ. ಮೂತ್ರಪಿಂಡಗಳು ನಮ್ಮ ರಕ್ತವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಕಿಡ್ನಿ ನಿರಂತರ ಕೆಲಸ ಮಾಡುವ ಕಾರಣ ಹಾಗೂ ಕೆಲಸ ಹೆಚ್ಚಿರುವ ಕಾರಣ ಎರಡೂ ಮೂತ್ರಪಿಂಡಗಳು ನಮಗೆ ಅತ್ಯಗತ್ಯ. ನಮ್ಮ ದೇಹಕ್ಕೆ ಯಾವುದೇ ಹಾನಿಯಾಗದಂತೆ ಇದು ರಕ್ಷಿಸುತ್ತದೆ. ನಮ್ಮನ್ನು  ಆರೋಗ್ಯ (health) ವಾಗಿಡಲು ಪ್ರಯತ್ನಿಸುತ್ತದೆ. ನಾವು ಕೂಡ ನಮ್ಮ ಎರಡೂ ಕಿಡ್ನಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು.

Tap to resize

Latest Videos

ಸಿಕ್ಕಾಪಟ್ಟೆ ರಾಗಿ ತಿಂತೀರಾ? ಈ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಹುಷಾರ್!

ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹವು ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಪಡೆಯುವುದಿಲ್ಲ ಅಥವಾ ದೇಹದಿಂದ ವಿಷವನ್ನು ಹೊರಹಾಕುವುದಿಲ್ಲ. ಕೆಲವೊಮ್ಮೆ ವ್ಯಕ್ತಿಯ ಒಂದು ಕಿಡ್ನಿ ಹಾನಿಗೊಳಗಾದರೆ, ಇನ್ನೊಂದು ಮೂತ್ರಪಿಂಡದ ಮೇಲೆ ಕೆಲಸದ ಹೊರೆ ಹೆಚ್ಚಾಗುತ್ತದೆ. ವ್ಯಕ್ತಿ ಒಂದು ಕಿಡ್ನಿಯನ್ನು ದಾನ ಮಾಡಿದರೂ, ಅವನ ಎಲ್ಲ ಕೆಲಸವವನ್ನು ಒಂದೇ ಮೂತ್ರಪಿಂಡ ಮಾಡಬೇಕಾಗುತ್ತದೆ. ಒಂದೇ ಮೂತ್ರಪಿಂಡವಿರುವ ವ್ಯಕ್ತಿ ಎಷ್ಟು ಆರೋಗ್ಯವಂತ ಎಂಬುದು ನಿಮಗೆ ಗೊತ್ತಾ? 

ತಜ್ಞರ ಪ್ರಕಾರ, ಕಾರಣ ಏನೇ ಇರಲಿ ಒಂದು ಮೂತ್ರಪಿಂಡ ಹೊಂದಿರುವ ವ್ಯಕ್ತಿಯಲ್ಲಿ ಆ ಮೂತ್ರಪಿಂಡದ ಮೇಲೆ ದುಪ್ಪಟ್ಟು ಕೆಲಸ ಬರುತ್ತದೆ. ಆದ್ರೆ ಇದರಿಂದ ಹೆಚ್ಚು ತೊಂದರೆ ಆಗೋದಿಲ್ಲ.  ಮೂತ್ರಪಿಂಡವು ಅದರ ದಕ್ಷತೆಯನ್ನು ಹೆಚ್ಚಿಸಿಕೊಳ್ಳುತ್ತದೆ.  ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.    

ತಜ್ಞರ ಪ್ರಕಾರ, ಕೆಲವು ಜನರಲ್ಲಿ ಜನನದ ಸಮಯದಿಂದ ಅವರ ದೇಹದಲ್ಲಿ ಒಂದು ಮೂತ್ರಪಿಂಡ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಂತಹ ಜನರು ಯಾವುದೇ ರೀತಿಯ ಸಮಸ್ಯೆಯನ್ನು ಅನುಭವಿಸುವುದಿಲ್ಲ. ಅದೇ  ಮೂತ್ರಪಿಂಡವನ್ನು ದಾನ ಮಾಡಿದ ದಾನಿಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಕಾಡುವುದಿದೆ. ಅವರು ಸುಧಾರಿಸಿಕೊಳ್ಳಲು ಕೆಲವು ತಿಂಗಳ ಅವಶ್ಯಕತೆ ಇರುತ್ತದೆ. ಆತನ ಬಳಿ ಒಂದೇ ಮೂತ್ರಪಿಂಡ ಇರುವ ಕಾರಣ ಅದರ ಆರೈಕೆ ಮುಖ್ಯವಾಗುತ್ತದೆ. ಆ ಒಂದು ಮೂತ್ರಪಿಂಡಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು.  ವೈದ್ಯರ ಸಲಹೆಯಂತೆ  ಆಹಾರ ಮತ್ತು ದಿನಚರಿಯನ್ನು ಪಾಲಿಸಬೇಕು.

ಒಂದು ಮೂತ್ರಪಿಂಡದ ದಾನದ ನಂತರ ಎರಡನೇ ಮೂತ್ರಪಿಂಡದ ದಕ್ಷತೆಯು ಹೆಚ್ಚಾಗುತ್ತದೆ. ಅದು ಮೊದಲಿಗಿಂತ ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.  ಮೂತ್ರಪಿಂಡ ದಾನ ಮಾಡಿದ ತಕ್ಷಣ ಇದು ಸಾಧ್ಯವಾಗೋದಿಲ್ಲ. ಕೆಲವು ತಿಂಗಳುಗಳವರೆಗೆ ಬಹಳ ಎಚ್ಚರಿಕೆಯಿಂದ ಇರಬೇಕು. 1-2 ವರ್ಷಗಳವರೆಗೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು.

ಹಲ್ಲಿನ ಬಗ್ಗೆ ನಿಮಗೂ ಭಯ ಇದ್ಯಾ? ಕಾಡ್ತಿರಬಹುದು ಡೆಂಟಲ್ ಎಂಕ್ಸೈಟಿ

ಒಂದೇ ಮೂತ್ರಪಿಂಡ ಹೊಂದಿರುವ ವ್ಯಕ್ತಿ ಉತ್ತಮ ಆಹಾರವನ್ನು ತೆಗೆದುಕೊಳ್ಳಬೇಕು. ಪ್ರತಿದಿನ ವ್ಯಾಯಾಮ ಮಾಡಬೇಕು.  ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸಾಕಷ್ಟು ನೀರು ಕುಡಿಯಬೇಕು. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು.  ಯಾವುದೇ ಕ್ರೀಡಾಪಟು ಆಗಿದ್ದರೆ ಮೂತ್ರಪಿಂಡ ಹಾನಿಯಾಗದಂತೆ ಎಚ್ಚರಿಕೆ ವಹಿಸಿ. ಒಂದೇ ಮೂತ್ರಪಿಂಡ ಹೊಂದಿರುವವರಿಗೆ ಡಯಾಲಿಸಸ್ ಅವಶ್ಯಕತೆ ಇರೋದಿಲ್ಲ. ಮೂತ್ರಪಿಂಡ ಶೇಕಡಾ ಎಂಬತ್ತರಷ್ಟು ಹಾನಿಗೊಳಗಾದಲ್ಲಿ ಮಾತ್ರ ಡಯಾಲಿಸಸ್ ಮಾಡಬೇಕು. 

ಒಂದೇ ಕಿಡ್ನಿ ಇದ್ದರೆ ಆಗುವ ನಷ್ಟ : ಒಂದು ಮೂತ್ರಪಿಂಡ ಹೊಂದಿದ ಬಹುತೇಕ ಜನರು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಆದ್ರೆ ಕೆಲವರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ, ಮೂತ್ರಕೋಶದಿಂದ ಪ್ರೋಟೀನ್ ಹೊರಬರುವ ಸಾಧ್ಯತೆ ಹಾಗೂ ದೇಹದಲ್ಲಿನ ದ್ರವಗಳ ಅಸಮತೋಲನ ಸಮಸ್ಯೆ ಕಾಡುವುದಿದೆ.  

click me!