ಒಂದೇ ವೈರಲ್‌ ರಿಯಾಕ್ಷನ್‌ಗೆ 800 ರಿಂದ 3 ಲಕ್ಷ ಫಾಲೋವರ್ಸ್‌, ಸ್ವಿಗ್ಗಿ ಬ್ರ್ಯಾಂಡ್‌ ಡೀಲ್‌ ಒಪ್ಪಿಕೊಂಡ ಆರ್ಯಪ್ರಿಯಾ ಭುಯಾನ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ಪಂದ್ಯದಲ್ಲಿನ ರಿಯಾಕ್ಷನ್‌ನಿಂದ ವೈರಲ್ ಆದ ಆರ್ಯಪ್ರಿಯಾ ಈಗ ಸ್ವಿಗ್ಗಿ, ಯೆಸ್‌ ಮೇಡಮ್‌ನಂತಹ ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಧೋನಿ ಔಟಾದಾಗ ತೋರಿದ ರಿಯಾಕ್ಷನ್‌ನಿಂದ ಇವರ ಫಾಲೋವರ್‌ಗಳ ಸಂಖ್ಯೆ 800 ರಿಂದ 3 ಲಕ್ಷಕ್ಕೆ ಏರಿದೆ.


ಬೆಂಗಳೂರು (ಏ.7): ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವೆ ಗುವಾಹಟಿಯಲ್ಲಿ ನಡೆದ ಐಪಿಎಲ್‌ ಪಂದ್ಯದ ವೇಳೆ ತನ್ನ ರಿಯಾಕ್ಷನ್‌ನ ಕಾರಣದಿಂದಾಗಿ ವೈರಲ್‌ ಆಗಿದ್ದ 19 ವರ್ಷದ ಯುವತಿ ಆರ್ಯಪ್ರಿಯಾ ಭುಯಾನ್ ಈಗ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ಫುಡ್‌ ಡೆಲಿವರಿ ಅಪ್ಲಿಕೇಶನ್‌ ಸ್ವಿಗ್ಗಿ ಹಾಗೂ ಯೆಸ್‌ ಮೇಡಮ್‌ ಜೊತೆ ಬ್ರ್ಯಾಂಡ್‌ ಒಪ್ಪಂದ ಮಾಡಿಕೊಂಡಿದ್ದಾರೆ. ಅದರೊಂದಿಗೆ ಅವರ ಇನ್ಸ್‌ಟಾಗ್ರಾಮ್‌ ಫಾಲೋವರ್‌ಗಳ ಸಂಖ್ಯೆ 800 ರಿಂದ 3 ಲಕ್ಷಕ್ಕೆ ಏರಿದೆ.

ಎಂಎಸ್‌ ಧೋನಿ ಔಟಾದ ಬಳಿಕ ಆರ್ಯಪ್ರಿಯಾ ಭುಯಾನ್‌ ತೋರಿದ್ದ ರಿಯಾಕ್ಷನ್‌ ಸಖತ್‌ ವೈರಲ್‌ ಆಗಿತ್ತು.  ಈ ಕ್ಲಿಪ್ ಸೋಶಿಯಲ್‌ ಮೀಡಿಯಾದಲ್ಲಿ ಹರಡುತ್ತಿದ್ದಂತೆ, ಕ್ಷಣಾರ್ಧದಲ್ಲಿ ಅವರು ಹೊಸ ಮೀಮ್‌ ಟೆಂಪ್ಲೆಟ್‌ನ ಮುಖವಾದರು. ಅದರೊಂದಿಗೆ ಅವರ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳ ಸಂಖ್ಯೆ ಕೆಲವೇ ದಿನಗಳಲ್ಲಿ ಕೇವಲ 800 ರಿಂದ 3 ಲಕ್ಷಕ್ಕೆ ಏರಿಕೆಯಾಗಿದೆ. ಅದರೊಂದಿಗೆ ಅವರು ಸ್ವಿಗ್ಗಿ ಮತ್ತು ಯೆಸ್ ಮೇಡಮ್‌ನಂತಹ ಕಂಪನಿಗಳೊಂದಿಗೆ ಬ್ರಾಂಡ್ ಒಪ್ಪಂದಗಳನ್ನು ಪಡೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆರ್ಯಪ್ರಿಯಾ ಅವರು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಜೊತೆ ಒಂದು ಪ್ರಾಜೆಕ್ಟ್‌ಗಾಗಿ ಸಹಯೋಗ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ "ಕೊಲಾಬ್ ಫಾರ್‌ ಎ ರೀಸನ್‌" ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಮತ್ತೊಂದು ವೀಡಿಯೊದಲ್ಲಿ, ಅವರು ಮತ್ತೊಂದು ದೊಡ್ಡ ಬ್ರ್ಯಾಂಡ್ ಯೆಸ್ ಮೇಡಂ ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದು ಕಂಡುಬರುತ್ತದೆ. ವೀಡಿಯೊದಲ್ಲಿ "ಧೋನಿ ಔಟ್‌ ಆದಾಗ ನನಗೆ ದುಃಖವಾಯಿತು, ಆದರೆ ನಂತರ ನನಗೆ ಯೆಸ್ ಮೇಡಂ ಅವರಿಂದ ಉಚಿತ ಕೊರಿಯನ್ ಕ್ಲೀನಪ್ ಸಿಕ್ಕಿತು" ಎಂದು ಬರೆದುಕೊಂಡಿದ್ದಾರೆ. ಅವರು "Opps ನಿಂದ ಸಂತೋಷದ ಕ್ಷಣಕ್ಕೆ, ಧನ್ಯವಾದಗಳು ಯೆಸ್ ಮೇಡಂ" ಎಂಬ ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ.

Latest Videos

ಎರಡೂ ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳು, ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಗಳಿಸಿವೆ. ಅನೇಕ ಯೂಸರ್‌ಗಳು ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಹಂಚಿಕೊಂಡರು. ಒಬ್ಬರು ಬರೆದಿದ್ದಾರೆ, "ಕೇವಲ 19ನೇ ವರ್ಷಕ್ಕೆ ಇವರು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿದ್ದಾರೆ' ಎಂದು ಬರೆದಿದ್ದಾರೆ. ಧೋನಿ ಔಟಾಗುವ ಮೂಲಕ ಈಕೆಗೆ ಒಂದು ಹೊಸ ಜೀವನ ಕಲ್ಪಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್‌ ರಿಯಾಕ್ಷನ್‌ನಿಂದ ಫೇಮಸ್‌ ಆದ ಚೆನ್ನೈ ಟೀಮ್‌ ಫ್ಯಾನ್‌ಗರ್ಲ್‌ ಹೆಸರೇನು ಗೊತ್ತಾ?

ಪಂದ್ಯದ ವಿಷಯಕ್ಕೆ ಬರುವುದಾದರೆ, ಮಾರ್ಚ್ 30 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿನ ನಂತರ ಸಿಎಸ್‌ಕೆ ಅಭಿಮಾನಿಗಳು ನಿರಾಶರಾಗಿದ್ದರು. ತಂಡದ ಪ್ರಮುಖ ಆಟಗಾರ ಎಂಎಸ್ ಧೋನಿ ಆರಂಭದಲ್ಲಿಯೇ ಔಟಾದರು. ಇದು ಅಭಿಮಾನಿಗಳ ನಿರಾಶೆಯನ್ನು ಮತ್ತಷ್ಟು ಹೆಚ್ಚಿಸಿತು. ವಿಪರ್ಯಾಸವೆಂದರೆ, ಈ ಪಂದ್ಯವು ಆರ್ಯಪ್ರಿಯರನ್ನು ವೈರಲ್ ಸೆನ್ಸೇಷನ್ ಆಗಿ ಪರಿವರ್ತಿಸಿತು.

ಧೋನಿಗೆ 10 ಓವರ್‌ ಬ್ಯಾಟ್ ಮಾಡಲು ಆಗಲ್ಲ: ಹೊಸ ಬಾಂಬ್ ಸಿಡಿಸಿದ ಸ್ಟಿಫನ್ ಪ್ಲೆಮಿಂಗ್!

 

 

click me!