ಇದು ಮಾಮೂಲಿ ಕೋಳಿಯಲ್ಲ, ಬದಲಿಗೆ ಸಾತ್ವಿಕ ಕೋಳಿ. ಸಂಗೀತ ಕೇಳುತ್ತಾ, ಹಾಲು ಕುಡಿಯುತ್ತಾ ಬೆಳೆಯುವ ಈ ಕೋಳಿಯ ವಿಶೇಷತೆ ಇಲ್ಲಿದೆ..
ಚಿಕನ್ ಪ್ರಿಯರು ಈ ಸುದ್ದಿ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ. ಏಕೆಂದರೆ 200-300 ನೂರಾರು ರೂಪಾಯಿಗಳ ಆಸುಪಾಸಿನಲ್ಲಿ ಒಂದು ಕೆ.ಜಿ ಚಿಕನ್ ಸಿಕ್ಕರೆ, ಈ ಕೋಳಿಮಾಂಸಕ್ಕೆ ಸುಮಾರು 11 ಸಾವಿರ ರೂಪಾಯಿಗಳು! ಅಯ್ಯಬ್ಬಾ ಎಂದು ಸುಸ್ತಾಗಿ ಹೋದ್ರಿ ಅಲ್ವಾ? ಹಾಗಿದ್ರೆ ಈ ಕೋಳಿ ಮಾಂಸದಲ್ಲಿ ಅಂಥದ್ದೇನಿದೆ ಎಂದು ನೀವು ಕೇಳಬಹುದು. ಅಲ್ಲೇ ಇರೋದು ವಿಶೇಷ. ಈ ಕೋಳಿ ಸಾಮಾನ್ಯ ಕೋಳಿಯಲ್ಲ ಬದಲಿಗೆ ಸಾತ್ವಿಕ ಕೋಳಿಯಂತೆ. ಏಕೆಂದ್ರೆ ಇದು ಮಾಮೂಲಿ ಕೋಳಿಗಳಂತೆ ಅದೂ ಇದೂ ತಿಂದು ಬೆಳೆದಿದ್ದಲ್ಲ, ಬದಲಿಗೆ ಹಾಲು ಕುಡಿಯುತ್ತಾ ಬೆಳೆದಿದೆ, ಜೊತೆಗೆ ಪ್ರತಿದಿನ ಸಂಗೀತ ಕೇಳುತ್ತಾ ಬೆಳೆಸಲಾಗಿದೆಯಂತೆ. ಅದಕ್ಕಾಗಿಯೇ ಇದನ್ನು ತಿಂದವರಿಗೆ ಸಾತ್ವಿಕ ಭಾವನೆ ಬರುತ್ತದೆ ಎನ್ನುವ ಕಾರಣಕ್ಕೆ ಇದಕ್ಕೆ ಇಷ್ಟೊಂದು ದುಬಾರಿ ಬೆಲೆ!
ಅಂದಹಾಗೆ ಸದ್ಯ ಈ ಸಾತ್ವಿಕ ಕೋಳಿ ಭಾರತದಲ್ಲಿ ಇಲ್ಲ ಬಿಡಿ. ಚೀನಾದ ಶಾಂಘೈನಲ್ಲಿ ಕಂಡು ಬಂದ ಕೋಳಿ ಇದು. ಇಲ್ಲಿಯ ಜೊಂಗ್‌ಹುಯಿ ರೆಸ್ಟೋರೆಂಟ್‌ನ ಗ್ರಾಹಕರೊಬ್ಬರು ಚಿಕನ್ ತಿನ್ನುವ ಆಸೆಯಲ್ಲಿದ್ದಾಗ ಈ ಬೆಲೆಯನ್ನು ನೋಡಿ ಶಾಕ್ಗೆ ಒಳಗಾಗಿ ಇದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅರ್ಧ ಆವಿಯಲ್ಲಿ ಬೇಯಿಸಿದ ಅರ್ಧ ಕೆ.ಜಿ ಚಿಕನ್‌ಗೆ 480 ಯುವಾನ್ ( 66 ಡಾಲರ್- ಅಂದ್ರೆ ಸುಮಾರು ಐದೂವರೆ ಸಾವಿರ ರೂಪಾಯಿ) ಶುಲ್ಕ ವಿಧಿಸಿದಾಗ ಆಘಾತವಾಗಿದೆ ಈತನಿಗೆ. ಈ ಬಗ್ಗೆ ಕೇಳಿದಾಗ, ನಾವು ನಮ್ಮಲ್ಲಿ ಬೇಯಿಸುವ ಎಲ್ಲಾ ಕೋಳಿಗಳನ್ನು "ಹಾಲು ಮತ್ತು ಸಂಗೀತದ ಮೇಲೆ ಸಾಕಲಾಗುತ್ತದೆ. ಇದಕ್ಕಾಗಿ ಪ್ರೀಮಿಯಂ ಬೆಲೆಯನ್ನು ನಿಗದಿಪಡಿಸಲಾಗಿದೆ" ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ. ಈ ಕುರಿತು ಗ್ರಾಹಕ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಅಮೆಜಾನ್ನಿಂದ ಏನೇನೋ ಆರ್ಡರ್ ಮಾಡಿದ ಕಿತಾಪತಿ ಆಫ್ರಿಕನ್ ಗಿಳಿ! ಮಹಿಳೆ ಸುಸ್ತೋ ಸುಸ್ತು- ಏನಾಯ್ತು ನೋಡಿ
ಅದಕ್ಕೆ ಗ್ರಾಹಕ, "ನನಗೆ ಹೆಚ್ಚಿನ ಬೆಲೆ ಪಾವತಿಸಲು ಅಭ್ಯಂತರವಿಲ್ಲ. ನಾನು ಅರ್ಧ ಕೋಳಿಗೆ 480 ಯುವಾನ್ (US$65) ಕೊಡಲು ಸಿದ್ಧನಿದ್ದೇನೆ. ಆದರೆ ನನ್ನನ್ನು ಮೋಸಗೊಳಿಸಲು ಮತ್ತು ನನ್ನ ಬುದ್ಧಿಮತ್ತೆಯನ್ನು ಅವಮಾನಿಸಲು ಪ್ರಯತ್ನಿಸಬೇಡಿ" ಎಂದು ರೆಸ್ಟೋರೆಂಟ್ನವರ ಜೊತೆ ಜಗಳವಾಡಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ ಈ ಗ್ರಾಹಕ ಉದ್ಯಮಿ ಆಗಿದ್ದು, ಸೋಷಿಯಲ್ ಮೀಡಿಯಾ ಪ್ರಭಾವಿಯಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ, 2,70,000 ಫಾಲೋವರ್ಸ್ ಹೊಂದಿದ್ದಾರೆ. ಕೋಳಿಯನ್ನು ಬೆಳೆಸಿದ ರೀತಿಯನ್ನು ವಿವರಿಸಿರುವ ಅವರು, ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಒಂದು ಫಾರ್ಮ್‌ನಲ್ಲಿ ಮಾತ್ರ ಇಂಥ ಕೋಳಿಯನ್ನು ಸಾಕಲಾಗುತ್ತದೆ. ಇದಕ್ಕೆ "ಸೂರ್ಯಕಾಂತಿ ಕೋಳಿ" ಎಂದು ಕರೆಯಲಾಗುತ್ತದೆ. ಇದು ಅಪರೂಪದ ತಳಿಯಾಗಿದೆ ಎಂದು ಸಿಬ್ಬಂದಿ ಹೇಳಿರುವುದಾಗಿ ತಿಳಿಸಿದ್ದಾರೆ. ಸೂರ್ಯಕಾಂತಿ ಕೋಳಿಯನ್ನು ಫಾರ್ಮ್‌ನಲ್ಲಿ ಸೂರ್ಯಕಾಂತಿ ಕಾಂಡಗಳು ಮತ್ತು ಮಸುಕಾದ ಹೂವಿನ ತಲೆಗಳಿಂದ ತೆಗೆದ ರಸವನ್ನು ತಿನ್ನಿಸುವ ಮೂಲಕ ಬೆಳೆಸಲಾಗುತ್ತದೆ, ಇದು ವಾಣಿಜ್ಯ ಸೂರ್ಯಕಾಂತಿ ತೋಟವೂ ಆಗಿದೆ.
ಚಕ್ರವರ್ತಿ ಕೋಳಿ ಎಂದೂ ಇದನ್ನು ಕರೆಯಲಾಗುತ್ತದೆ. ಈ ತಳಿಯ ಕೋಳಿಗಳಿಗೆ ಹಳದಿ ಕೊಕ್ಕು, ಚರ್ಮ ಮತ್ತು ಪಾದ ಇದೆ. ಆದ್ದರಿಂದ ಈ ಹೆಸರು ಬಂದಿದೆ. ಸಂಪೂರ್ಣವಾಗಿ ಬೇಯಿಸಿದಾಗ ಅದರ ರಸಭರಿತವಾದ ರುಚಿ ಮತ್ತು ಕೋಮಲ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಸೂರ್ಯಕಾಂತಿ ಕೋಳಿ ಇನ್ನೂ ಹೆಚ್ಚು ದುಬಾರಿಯಾಗಿದೆ ಮತ್ತು ಪ್ರತಿ ಕಿಲೋಗ್ರಾಂಗೆ 200 ಯುವಾನ್ (US$28) ಗಿಂತ ಹೆಚ್ಚು ಬೆಲೆಯಿದೆ ಎಂದು ವರದಿಯಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಇಡೀ ಸೂರ್ಯಕಾಂತಿ ಕೋಳಿಯ ಬೆಲೆ 1,000 ಯುವಾನ್ (US$140) ಗಿಂತ ಹೆಚ್ಚು ಇರಬಹುದು.
ಬುರ್ಖಾದೊಳಗೆ ಕೈಹಾಕಿದಷ್ಟೂ ಉದುರಿದ ಲಕ್ಷಾಂತರ ಮೌಲ್ಯದ ಕದ್ದ ವಸ್ತು- ವಿಡಿಯೋ ನೋಡಿದವರು ಸುಸ್ತೋ ಸುಸ್ತು!