ಚಿನ್ನದ ಹೇರ್ ಡ್ರೈಯರ್ ಬೇಕಾ? ಬೆಲೆ ಮಾತ್ರ ಕೇಳ್ಬೇಡಿ

Published : Oct 23, 2018, 12:15 PM IST
ಚಿನ್ನದ ಹೇರ್ ಡ್ರೈಯರ್ ಬೇಕಾ? ಬೆಲೆ ಮಾತ್ರ ಕೇಳ್ಬೇಡಿ

ಸಾರಾಂಶ

ಚಿನ್ನದ ಬೆಲೆ ಆಗಾಗ ಗಗನಕ್ಕೆ ಏರುತ್ತಲೇ ಇರುತ್ತದೆ. ಅಗತ್ಯ ಆಭರಣಗಳನ್ನೇ ಕೊಳ್ಳಲು ಹಿಂದು ಮುಂದು ನೋಡುವ ಮಂದಿ ಚಿನ್ನದ ಹೈರ್ ಡ್ರೈಯರ್ ಬಳಸುತ್ತಾರಂತೆ! ಇದರೆ ಬೆಲೆ ಎಷ್ಟಿರಬಹುದು ಗೊತ್ತಾ?

ಒದ್ದೆ ಕೂದಲನ್ನು ಒಣಗಿಸ್ಲಿಕ್ಕೆ ಹೇರ್ ಡ್ರೈಯರ್ ಬಳಸುತ್ತಾರೆ. ಅಬ್ಬಬ್ಬಾ ಎಂದರೆ ಇದಕ್ಕೆ ಗರಿಷ್ಠ 5 ಸಾವಿರ ರೂ.ವರೆಗೂ ಇರಬಹುದು. ಇದು ಸರಿಯಾಗಿ ಕೂದಲು ಒಣಗಿಸುವ ಕೆಲಸ ಮಾಡಿ, ಬಾಳಿಕೆ ಬಂದರೆ ಸಾಕು. ಈ ಕೂದಲು ಒಣಗಿಸುವ ಕೆಲಸಕ್ಕೆ ಚಿನ್ನದ ಡ್ರೈಯರ್ ಬಳಸುತ್ತಾರಾ?

ವಿಚಿತ್ರವಾದರೂ ಸತ್ಯ. ಚಿನ್ನದ ಡ್ರೈಯರ್ ಬಳಸುವುದೇ ನಂಬ್ಲಿಕ್ಕೆ ಕಷ್ಟವಾಗೋ ಸುದ್ದಿ. ಅಂಥದ್ರಲ್ಲಿ ಅದರ ಬೆಲೆ ಕೇಳಿದರೆ ಮತ್ತಷ್ಟು ಶಾಕ್ ಆಗೋದು ಗ್ಯಾರಂಟಿ.

23.75 ಕ್ಯಾರೇಟ್ ಚಿನ್ನ ಬಳಸಿದ ಈ ಡ್ರೈಯರ್ ಬೆಲೆ 37,900 ರೂ. ಅಂತೆ. ಅತ್ಯಂತ ದುಬಾರಿ ಎನ್ನಲಾದ ಈ ಡ್ರೈಯರ್ ಅನ್ನು ಅತ್ಯಂತ ಆಕರ್ಷಕವಾಗಿ, ವಿವಿಧ ಬಣ್ಣಗಳನ್ನು ಬಳಸಿ ತಯಾರಿಸಲಾಗಿದೆ. ಲೈಫ್‌ಟೈಮ್ ವಾರೆಂಟಿಯೂ ಇದೆಯಂತೆ! ಆನ್‌ಲೈನ್‌‌ನಲ್ಲಿ ಮಾತ್ರ ಲಭ್ಯವಿರೋ ಈ ಡ್ರೈಯರ್ ಅನ್ನು ಡೈಸನ್ ಸೂಪರ್ ಸೋನಿಕ್ ಕಂಪನಿ ತಯಾರಿಸುತ್ತದೆ. ಭಾರತದಲ್ಲಿನ್ನೂ ಯಾರೂ ಖರೀದಿ ಮಾಡಿಲ್ಲವಂತೆ. ನೀವು ಕೊಂಡು, ಮೊದಲಿಗರಾಗಿ...

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಂದದೊಂದಿಗೆ ನಿಮ್ಮ ಶೋಭೆಯನ್ನು ಹೆಚ್ಚಿಸೋ ₹500ಗೆ ಸಿಗೋ ಮಂಗಳಸೂತ್ರದ ಕಾಂಬೊ ಸೆಟ್