ಲಿಪ್ ಬಾಮ್ ತುಟಿಗೆ ಮಾತ್ರವಲ್ಲ ಹೀಗೂ ಬಳಸಬಹುದು!

Published : Oct 14, 2018, 03:43 PM ISTUpdated : Oct 15, 2018, 04:35 PM IST
ಲಿಪ್ ಬಾಮ್ ತುಟಿಗೆ ಮಾತ್ರವಲ್ಲ ಹೀಗೂ ಬಳಸಬಹುದು!

ಸಾರಾಂಶ

ತುಟಿಯ ತೇವಾಂಶವನ್ನು ಕಾಪಾಡಲು ಬಳಸುವ ಲಿಪ್ ಬಾಮ್ ದೈನಂದಿಕ ಕಾಡುವ ಅನೇಕ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು. ಲಿಪ್ ಕ್ರಾಕ್ ಮಾತ್ರವಲ್ಲದೇ ಲೈಫ್ ಕ್ರಾಕ್ ಸರಿ ಮಾಡಲೂ ಇದು ಮದ್ದು. ಲಿಪ್ ಬಾಮ್‌ನಿಂದ್ ಅನೇಕ ಉಪಯೋಗಗಳಿವೆ. ಏನವು?

  • ನೆಗಡಿಯಾದರೆ ಮೂಗಿನ ತುದಿ ತುರಕೆ ಇರುತ್ತದೆ. ಇದರಿಂದ ಸೀನುವುದೇ ಕೆಲಸವಾಗುತ್ತದೆ. ತುರಿಕೆ ತಡೆಯಲು, ಸ್ಮೆಲ್ ಇಲ್ಲದ ಲಿಪ್ ಬಾಮ್ ಅನ್ನು ಆ ಜಾಗದಲ್ಲಿ ಉಜ್ಜಬೇಕು.  
  • ಮೂರು ದಿನಕ್ಕೊಮ್ಮೆ ತಲೆಯಲ್ಲಿ ತೈಲಾಂಶ ಉತ್ಪತ್ತಿಯಾಗುತ್ತದೆ. ಅದಕ್ಕೆ ಕೈ ಬೆರಳ ತುದಿಯಲ್ಲಿ ಲಿಪ್ ಬಾಮ್ ತೆಗೆದುಕೊಂಡು ಕೊದಲ ಮಧ್ಯೆ ಮಸಾಜ್ ಮಾಡಿಕೊಂಡರೆ, ಸರಿಯಾಗುತ್ತದೆ.
  • ಕಬ್ಬಿಣಕ್ಕೆ ಹಚ್ಚಿದರೆ ತುಕ್ಕು ಹಿಡಿಯುವುದನ್ನು ತಡೆಯಬಹುದು.
  • ಚಿಕ್ಕ- ಪುಟ್ಟ ಕ್ರಿಮಿ ಕೀಟಗಳು ಕಚ್ಚಿದಾಗ ಆ ಜಾಗಕ್ಕೆ ಹಚ್ಚಿದರೆ, ತುರಿಕೆಯಾಗುವುದಿಲ್ಲ.
  • ಬುಕ್ ಅಥವ ಲ್ಯಾಪ್ ಟಾಪ್ ಮೇಲೆ ಹಾಕಿರುವ ಸ್ಟಿಕರ್ ತೆಗೆಯುವ ಮುನ್ನ ಲಿಪ್ ಬಾಮ್ ಹಚ್ಚಿದರೆ, ಯಾವುದೆ ಕಲೆ ಇಲ್ಲದೆ ಸುಲಭವಾಗಿ ತೆಗೆಯಬಹುದು.  
  • ಕೈ ಬೆರಳಿಂದ ತೆಗೆಯಲಾಗದ ಉಂಗುರಕ್ಕೆ ಲಿಪ್ ಬಾಮ್ ಸೊಲ್ಯೂಷನ್. 
  • ಮುಖಕ್ಕೆ ಉಬ್ಬು ಲಕ್ಷಣ. ಅದು ಇನ್ನೂ ದಪ್ಪವಾಗಬೇಕಾದರೆ ಲಿಪ್ ಬಾಮ್ ಹಚ್ಚಿಕೊಳ್ಳಿ.
  • ಹೊಸ ಚಪ್ಪಲಿ ಕಾಲಿಗೆ ಕಚ್ಚುತ್ತದೆ. ಇದನ್ನು ತಡೆಯಲು ಕಾಲಿಗೆ ಲಿಪ್ ಬಾಮ್ ಹಚ್ಚಿಕೊಳ್ಳಬಹುದು. 
  •  ಶೂ ಹೊಳಪಾಗಲು ಲಿಪ್ ಬಾಮ್ ತಿಕ್ಕಿ ತೆಳು ಬಟ್ಟೆಯಿಂದ ಸವರಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?