ಭಾನುವಾರ ಬಂತೆಂದ್ರೆ ಏನಾದರೂ ಸ್ಪೆಷಲಾದ ರೆಸಿಪಿ ಟ್ರೈ ಮಾಡಬೇಕು ಎಂಬುದು ಎಲ್ಲ ಮಹಿಳೆಯರ ಬಯಕೆ. ಇನ್ನು ನಾನ್‍ವೆಜಿಟೇರಿಯನ್ ಆದರಂತೂ ಕೇಳುವುದೇ ಬೇಡ, ಚಿಕನ್ ಇರಲೇಬೇಕು. ಈ ಬಾರಿ ಯಾವ ಚಿಕನ್ ರೆಸಿಪಿ ಟ್ರೈ ಮಾಡೋದು ಎಂಬ ಯೋಚನೆಯಲ್ಲಿರುವವರಿಗೆ ಇಲ್ಲಿದೆ ಕರಾವಳಿಯ ಫೇಮಸ್ ಡಿಸ್ ಚಿಕನ್ ಗೀ ರೋಸ್ಟ್.
ಚಿಕನ್ ಗೀ ರೋಸ್ಟ್ ಹೆಸರು ಕೇಳಿದ್ರೆ ನಾನ್‍ವೆಜ್ ಪ್ರಿಯರ ಬಾಯಲ್ಲಿ ನೀರಿಳಿಯುತ್ತದೆ. ಮ್ಯಾಂಗಳೂರಿಯನ್ ಡಿಸ್ ಎಂದೇ ಜನಪ್ರಿಯತೆ ಗಳಿಸಿರುವ ಕರಾವಳಿಯ ಈ ಖಾದ್ಯ ಜನ್ಮ ತಾಳಿದ್ದು ಕುಂದಾಪುರದ ಶೆಟ್ಟಿ ಲಂಚ್ ಹೋಮ್ಎಂಬ ಹೋಟೆಲ್‍ನ ಅಡುಗೆಮನೆಯಲ್ಲಿ.
ಇಂದು ದೇಶ-ವಿದೇಶದಲ್ಲೂ ಈ ಖಾದ್ಯದ ಘಮಲು ಪಸರಿಸಿದೆ. ಕರಾವಳಿಯ ಯಾವುದೇ ನಾನ್‍ವೆಜಿಟೇರಿಯನ್ ಹೋಟೆಲ್‍ಗೆ ಭೇಟಿ ನೀಡಿದರೂ ಅಲ್ಲಿನ ಮೆನುವಿನಲ್ಲಿ ಈ ಖಾದ್ಯ ತಪ್ಪದೇ ಇರುತ್ತದೆ. ಕುಂದಾಪುರಕ್ಕೆ ಭೇಟಿ ನೀಡುವ ನಾನ್‍ವೆಜ್‍ಪ್ರಿಯರು ಶೆಟ್ಟಿ ಲಂಚ್ ಹೋಮ್‍ಗೆ ತೆರಳಿ ಕಿಚನ್ ಗೀ ರೋಸ್ಟ್ ಸವಿಯದೆ ಹಿಂತಿರುಗುವುದೇ ಇಲ್ಲ. ಹುಳಿ, ಖಾರ, ಉಪ್ಪಿನ ಸಮ ಮಿಶ್ರಣದೊಂದಿಗೆ ತುಪ್ಪ ಬೆರೆತ ಈ ಖಾದ್ಯದ ರುಚಿಯನ್ನು ಒಮ್ಮೆ ಸವೆದರೆ ಮತ್ತೆ ಮರೆಯಲು ಸಾಧ್ಯವೇ ಇಲ್ಲ. ಕುಂದಾಪುರ ಮಸಾಲವನ್ನು ಇದಕ್ಕೆ ಬೆರೆಸುವ ಕಾರಣ ಸಹಜವಾಗಿಯೇ ಖಾರ ತುಸು ಹೆಚ್ಚೇ ಇರುವ ಚಿಕನ್ ಗೀ ರೋಸ್ಟ್ ಚಳಿಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯ.
undefined
ಡ್ರೈ ಕ್ಯಾಬೇಜ್ ಮಂಚೂರಿಯನ್ ಮನೆಯಲ್ಲೇ ಮಾಡಿ!
ತಯಾರಿ ಸಮಯ: 30 ನಿಮಿಷ
ಬೇಕಾಗುವ ಒಟ್ಟು ಸಮಯ: 1 ಗಂಟೆ 15 ನಿಮಿಷ
ಬೇಕಾಗುವ ಸಾಮಗ್ರಿಗಳು:
ಕತ್ತರಿಸಿ, ಶುಚಿಗೊಳಿಸಿದ ಕೋಳಿ ಮಾಂಸ-1ಕೆ.ಜಿ.
ಮೊಸರು-1 ಕಪ್
ತುಪ್ಪ-8 ಟೇಬಲ್ ಚಮಚ
ಅರಿಶಿಣ-1/2ಟೇಬಲ್ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ-6 -7 ಎಸಳುಗಳು
ಕೆಂಪು ಮೆಣಸು (ಬ್ಯಾಡಗಿ)-10
ಕೊತ್ತಂಬರಿ-2 ಟೇಬಲ್ ಚಮಚ
ಜೀರಿಗೆ-3/4 ಟೇಬಲ್ ಚಮಚ
ಮೆಂತೆ-1/4 ಟೇಬಲ್ ಚಮಚ
ಕರಿಮೆಣಸು-1/2 ಟೇಬಲ್ ಚಮಚ
ಲವಂಗ-3-4
ಬೆಲ್ಲ-1 ಟೀ ಚಮಚ
ಹುಣಸೆಹಣ್ಣು-1/2 ಲಿಂಬೆಹಣ್ಣಿನ ಗಾತ್ರ
ಕರಿಬೇವು
ಮಾಡುವ ವಿಧಾನ:
1.ಒಂದು ಪಾತ್ರೆಯಲ್ಲಿ ಶುಚಿಗೊಳಿಸಿದ ಕೋಳಿ ಮಾಂಸ ತೆಗೆದುಕೊಂಡು ಅದಕ್ಕೆ ಉಪ್ಪು, ಅರಿಶಿಣ ಹಾಗೂ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಆ ಬಳಿಕ ಇದನ್ನು 1 ಗಂಟೆಗಳ ಕಾಲ ಫ್ರಿಜ್‍ನಲ್ಲಿಟ್ಟು ಮ್ಯಾರಿನೇಟ್ಮಾಡಬೇಕು.
2. ಒಂದು ಫ್ರೈ ಪ್ಯಾನ್ ಅನ್ನು ಸ್ಟೌವ್ ಮೇಲಿಟ್ಟು, ಬಿಸಿ ಮಾಡಿ ಅದಕ್ಕೆ ಕೆಂಪು ಮೆಣಸು ಹಾಕಿ ಮಧ್ಯಮ ಉರಿಯಲ್ಲಿ 2-3 ನಿಮಿಷ ಹುರಿಯಿರಿ. ಯಾವುದೇ ಕಾರಣಕ್ಕೂ ಹುರಿಯುವಾಗ ಎಣ್ಣೆ ಸೇರಿಸಬೇಡಿ. ನಂತರ ಇದನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ ಬದಿಯಲ್ಲಿಡಿ.
3. ಅದೇ ಪ್ಯಾನ್‍ಗೆ ಕೊತ್ತಂಬರಿ, ಜೀರಿಗೆ, ಸೋಂಪು, ಮೆಂತೆ, ಲವಂಗ, ಕಾಳುಮೆಣಸು ಹಾಕಿ ಮಧ್ಯಮ ಉರಿಯಲ್ಲಿ 2 ನಿಮಿಷ ಹುರಿಯಿರಿ.
4. ಅಡುಗೆ ತಯಾರಿ ಪ್ರಾರಂಭಿಸಲು 15 ನಿಮಿಷ ಇರುವಾಗಲೇ ಬಿಸಿ ನೀರಿನಲ್ಲಿ ನೆನೆಸಿಟ್ಟ ಹುಣಸೆಹಣ್ಣನ್ನು ಚೆನ್ನಾಗಿ ಕಿವುಚಿ ಅದರ ರಸವನ್ನು ಸೋಸಿಟ್ಟುಕೊಳ್ಳಿ.
5. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದ ಮೆಣಸು, ಇತರ ಮಸಾಲ ಸಾಮಗ್ರಿಗಳು, ಬೆಳ್ಳುಳ್ಳಿ, ಹುಣಸೆಹಣ್ಣಿನ ರಸ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಪ್ರೊಟೀನ್ ಬಾರ್ ಮಾಡಲು ಇಲ್ಲಿದೆ ಸಿಂಪಲ್ ರೆಸಿಪಿ
6. ಈಗ ಪ್ಯಾನ್ ಅನ್ನು ಸ್ಟೌವ್ ಮೇಲಿಟ್ಟು ಅದಕ್ಕೆ 5 ಟೇಬಲ್ ಚಮಚ ತುಪ್ಪ ಹಾಕಿ ಕಾಯಿಸಿ. ಆ ಬಳಿಕ ಅದಕ್ಕೆ ಮ್ಯಾರಿನೇಟ್ ಮಾಡಿದ ಕೋಳಿಮಾಂಸ ಸೇರಿಸಿ ಶೇ.50ರಷ್ಟು ಬೇಯಿಸಿಕೊಳ್ಳಿ. ಬಳಿಕ ಕೋಳಿ ತುಂಡುಗಳನ್ನು ಮಾತ್ರ ಇನ್ನೊಂದು ಪಾತ್ರೆಗೆ ವರ್ಗಾಯಿಸಿ.
7. ಪ್ಯಾನ್‍ನಲ್ಲಿ ಉಳಿದಿರುವ ತುಪ್ಪಕ್ಕೆ 3 ಟೇಬಲ್ ಚಮಚ ತುಪ್ಪ ಸೇರಿಸಿ ರುಬ್ಬಿಟ್ಟುಕೊಂಡಿರುವ ಮಸಾಲ ಹಾಕಿ 3-4 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ. ಆ ಬಳಿಕ ಅರ್ಧ ಬೇಯಿಸಿರುವ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಮಿಕ್ಸ್ಮಾಡಿ. ಇದಕ್ಕೆ 1/4 ಕಪ್ ನೀರು ಹಾಕಿ ಮಧ್ಯಮ ಉರಿಯಲ್ಲಿ 10-15 ನಿಮಿಷ ಬೇಯಿಸಿ.
8. ಅಂತಿಮವಾಗಿ ಇದಕ್ಕೆ ಹುರಿದ ಕರಿಬೇವಿನ ಎಲೆಗಳನ್ನು ಸೇರಿಸಿದರೆ ಟೆಸ್ಟಿ ಟೆಸ್ಟಿ ಚಿಕನ್ ಗೀ ರೋಸ್ಟ್ ರೆಡಿ ಟು ಸರ್ವ್
9. ಚಿಕನ್ ಗೀ ರೋಸ್ಟ್ ಅನ್ನು ನೀರುದೋಸೆ, ಚಪಾತಿ ಅಥವಾ ರೈಸ್‍ನೊಂದಿಗೆ ಸವಿಯಬಹುದು.