ಬೆಳಗ್ಗೆ ಎದ್ದು ಜಾಗಿಂಗ್‍ಗೆ ಹೋಗಲು ಚಳಿಯ ಕಾಟ. ಸಂಜೆ ಆಫೀಸ್‍ನಿಂದ ಬಂದು ಜಿಮ್‍ಗೆ ಹೋಗಲು ಮೂಡ್ ಇಲ್ಲ. ಹಾಗದ್ರೆ ತೂಕ ಇಳಿಸಿಕೊಳ್ಳುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದೀರಾ? ವೆರಿ ಸಿಂಪಲ್ ನಿಂತಲ್ಲೆ ಕಪ್ಪೆಯಂತೆ
ಜಿಗಿಯಿರಿ.
ಸ್ಕೂಲ್‍ನಲ್ಲಿ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ನೆನಪಿದೆಯಾ? ಪ್ರೈಮರಿ ಸ್ಕೂಲ್‍ಗಳಲ್ಲಿ ಕಪ್ಪೆ ಜಿಗಿತವಿಲ್ಲದ ಕ್ರೀಡಾಕೂಟ ಸಪ್ಪೆ ಅನಿಸುವುದಂತೂ ನಿಜ. ಮಕ್ಕಳು ನಾ ಮುಂದು ತಾ ಮುಂದು ಎಂದು ಕಪ್ಪೆಯಂತೆ ಕುಪ್ಪಳಿಸುತ್ತ
ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗಂತ ಈ ಕಪ್ಪೆ ಜಿಗಿತ ಏನಿದ್ದರೂ ಮಕ್ಕಳಿಗೆ ಮಾತ್ರ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿದ್ದರೆ ಇಂದೇ ತೆಗೆದು ಬಿಡಿ. ಕಪ್ಪೆ ಜಿಗಿತದಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ
ಎಂಬುದನ್ನು ಅರಿತರೆ ನೀವು ಈ ಕ್ಷಣದಿಂದಲೇ ಕಪ್ಪೆಯಂತೆ ಜಿಗಿಯಲು ಪ್ರಾರಂಭಿಸುತ್ತೀರಿ. ಕಪ್ಪೆ ಜಿಗಿತ ಮಕ್ಕಳ ಆಟ ಎಂದು ಮೂಗು ಮುರಿಯುವ ಮುನ್ನ ಅದರ ಮಹತ್ವವನ್ನೊಮ್ಮೆ ತಿಳಿದು ಬಿಡಿ.
ಈ ಮಕ್ಕಳಾಟ ದೊಡ್ಡವರ ವರ್ಕ್ಔಟ್: ನಿಜ, ಮಕ್ಕಳಾಟವೆಂದು ನಾವು ಭಾವಿಸಿರುವ ಕಪ್ಪೆ ಜಿಗಿತ ಇಂದು ವಿದೇಶಗಳಲ್ಲಿ ಜನಪ್ರಿಯ ವ್ಯಾಯಾಮ ಪ್ರಕಾರವಾಗಿದೆ. ದೊಡ್ಡವರು ಪ್ರತಿದಿನ ಕಪ್ಪೆಯಂತೆ ಜಿಗಿಯುತ್ತ ತಮ್ಮ ಕೊಬ್ಬು
ಕರಗಿಸಿಕೊಳ್ಳುತ್ತಿದ್ದಾರೆ.
ನೀವು ಯಂಗ್ ಆಗಿ ಕಾಣಬೇಕೇ? ಹಾಗಾದ್ರೆ ಸಕ್ಕರೆಗೆ ಹೇಳಿ ಗುಡ್ ಬೈ
ಸಿಂಪಲಿ ಸೂಪರ್: ಕಪ್ಪೆ ಜಿಗಿತ ಮಾಡಲು ಸರಳವಾಗಿರುವ ಜೊತೆಗೆ ಇದಕ್ಕೆ ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಜಿಮ್‍ಗೆ ಹೋಗಬೇಕಾಗಿಯೂ ಇಲ್ಲ, ಮನೆಯಲ್ಲೇ ಮಾಡಬಹುದು. ನಿಂತಲ್ಲೇ ಕಪ್ಪೆಯಂತೆ ಜಿಗಿಯುತ್ತಿದ್ದರೆ ಸಾಕು,
ಕೆಲವೇ ನಿಮಿಷಗಳಲ್ಲಿ ಅನೇಕ ಕ್ಯಾಲೋರಿ ಬರ್ನ್ ಆಗುತ್ತದೆ. ಈ ಸರಳತೆಯ ಕಾರಣಕ್ಕೆ ಎಲ್ಲರೂ ಕಪ್ಪೆ ಜಿಗಿತಕ್ಕೆ ಮನಸೋಲುತ್ತಿದ್ದಾರೆ.
ಮಾಡೋದು ಹೇಗೆ?: ಕಪ್ಪೆ ಜಿಗಿತ ಹೇಗೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ವ್ಯಾಯಾಮ ಮಾಡುವಾಗ ಮಕ್ಕಳಾಟದಲ್ಲಿರುವಂತೆ ನೀವು ಸ್ವಲ್ಪ ದೂರದ ತನಕ ಕಪ್ಪೆಯಂತೆ ಜಿಗಿಯುತ್ತ ಸಾಗಬಹುದು. ಇದು ಸಾಧ್ಯವಿಲ್ಲ
ಎಂದಾದರೆ ನಿಂತಲ್ಲಿ ಮುಂದೆ ಹಿಂದೆ ಜಿಗಿಯುವ ಮೂಲಕ ಕೂಡ ಮಾಡಬಹುದು. ಇನ್ನೂ ಕೆಲವರು ನಿಂತಲ್ಲೇ ಮೇಲೆ ಜಿಗಿಯುವ ಮೂಲಕ ಈ ವ್ಯಾಯಾಮ ಮಾಡುತ್ತಾರೆ. ಈ ವ್ಯಾಯಾಮವನ್ನು ಇನ್ನಷ್ಟು ಚಾಲೆಂಜಿಂಗ್ ಆಗಿ
ಮಾಡಬೇಕು ಎಂಬ ಬಯಕೆ ನಿಮಗಿದ್ದರೆ ಬಾಲ್ ಬಳಸಬಹುದು. ಬಾಲನ್ನು ನೆಲದ ಮೇಲಿಟ್ಟು ಅದರ ಹಿಂಭಾಗದಲ್ಲಿ ನಿಂತುಕೊಳ್ಳಿ. ಆ ಬಳಿಕ ಬಾಗಿ ಬಾಲನ್ನು ಕೈಯಲ್ಲಿ ಹಿಡಿದು ಕಪ್ಪೆಯಂತೆ ಜಿಗಿಯಿರಿ. ಇದನ್ನು ಪುನಾರವರ್ತಿಸುತ್ತಿರಿ.
ಇದು ದೇಹವನ್ನು ದಂಡಿಸುವ ಜೊತೆಗೆ ಹೆಚ್ಚಿನ ಕ್ಯಾಲೋರಿ ಕರಗಿಸುತ್ತದೆ. ಕಪ್ಪೆ ಜಿಗಿತದಲ್ಲಿ ಬೆನ್ನು, ಸೊಂಟ ಹಾಗೂ ಕಾಲುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ.
ತರಕಾರಿ ಹಣ್ಣು ತಿನ್ನಿ, ವಾಕ್ ಮಾಡಿ ಅನ್ನೋದೆಲ್ಲ ಹಳೇದಾಯ್ತು, ಹೊಸದೇನಿದೆ?
ಎಷ್ಟು ಹೊತ್ತು ಮಾಡಬಹುದು?: ಕಪ್ಪೆ ಜಿಗಿತದ ಮೂಲ ಉದ್ದೇಶ ನಿಮ್ಮ ಶರೀರದಲ್ಲಿರುವ ಅನಗತ್ಯ ಕೊಬ್ಬು ಕರಗಿಸುವುದು. ಹೀಗಾಗಿ ಪ್ರಾರಂಭದಲ್ಲೇ ತುಂಬಾ ಹೊತ್ತು ಈ ವ್ಯಾಯಾಮ ಮಾಡುವ ಮೂಲಕ ದೇಹವನ್ನು ಸುಸ್ತುಗೊಳಿಸಬೇಡಿ. ನೀವು ಮೊದಲನೆಯ ಬಾರಿಗೆ ಈ ವ್ಯಾಯಾಮ ಮಾಡುವಾಗ 20-30 ಸೆಕೆಂಡ್‍ಗಳ ತನಕ ಮಾಡಿದ ಮೇಲೆ ಕೆಲವು ನಿಮಿಷ ರೆಸ್ಟ್ ತೆಗೆದುಕೊಂಡು ಪುನಾರವರ್ತಿಸಿ. ನಿಮ್ಮಲ್ಲಿ ಸಾಮಥ್ರ್ಯವಿದೆ, ಮಾಡಬಲ್ಲೆ ಎಂಬ
ವಿಶ್ವಾಸವಿದ್ದರೆ ಒಂದು ನಿಮಿಷವಾದ ಮೇಲೆ ಕೆಲವು ಸೆಕೆಂಡ್ ವಿರಾಮಿಸಿ ಆ ಬಳಿಕ ಮತ್ತೆ ಪ್ರಾರಂಭಿಸಬಹುದು. ಆದರೆ, ಒಮ್ಮೆಗೇ ಒಂದು ನಿಮಿಷಕ್ಕಿಂತಲೂ ಹೆಚ್ಚು ಕಾಲ ಕಪ್ಪೆ ಜಿಗಿತ ಮಾಡಿದರೆ ಶರೀರ ಬೇಗ ಆಯಾಸಗೊಳ್ಳುತ್ತದೆ.
ಪ್ರಯೋಜನಗಳೇನು ಗೊತ್ತಾ?: ಕಪ್ಪೆ ಜಿಗಿತದಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.
1.ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡುವ ಮೂಲಕ ಅವುಗಳನ್ನು ಸುಲಭವಾಗಿ ಬಾಗಿಸಲು ನೆರವು ನೀಡುತ್ತದೆ.
2. ಹೃದಯದ ಆರೋಗ್ಯಕ್ಕೆ ಉತ್ತಮ.
3. ಬೆನ್ನುಮೂಳೆಗೆ ಆರಾಮ ನೀಡುವ ಮೂಲಕ ಕೆಳ ಬೆನ್ನಿನ ನೋವಿನಿಂದ ಮುಕ್ತಿ ಒದಗಿಸುತ್ತದೆ.
4.ತೊಡೆ, ಕಾಲು, ಹೊಟ್ಟೆ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುತ್ತದೆ.
5.ಬೊಜ್ಜು ಕರಗಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ತೂಕ ಕಳೆದುಕೊಳ್ಳಲು ನೆರವು ನೀಡುತ್ತದೆ.
ಇದನ್ನ ತಿಂದ್ರೆ ಹ್ಯಾಂಗ್ ಓವರ್‌ನಿಂದ ಪಾರಾಗ್ತೀರ!
ಇವುಗಳ ಬಗ್ಗೆ ಎಚ್ಚರ: ಕಪ್ಪೆ ಜಿಗಿತ ಮಾಡುವಾಗ ಈ ಕೆಳಗಿನ ವಿಷಯಗಳ ಬಗ್ಗೆ ಎಚ್ಚರ ವಹಿಸಿ.
-ಬೆನ್ನನ್ನು ಕೆಳಗೆ ಬಾಗಿಸಿ ಕಪ್ಪೆಯಂತೆ ಹಿಮ್ಮಡಿಯಲ್ಲಿ ಕುಳಿತಿರುವಾಗ ತಪ್ಪದೇ ಉಸಿರು ಒಳಗೆ ಎಳೆದುಕೊಳ್ಳಿ.
-ಜಂಪ್ ಮಾಡುವಾಗ ಅಥವಾ ಮುಂದಕ್ಕೆ ಹಾರುವಾಗ ಉಸಿರನ್ನು ಹೊರಗೆ ಬಿಡಿ.
-ಮೇಲಕ್ಕೆ ಹಾರಿದ ಬಳಿಕ ಹಿಮ್ಮಡಿ ಊರಿ ನಿಲ್ಲಲು ಪ್ರಯತ್ನಿಸಬೇಡಿ. ಇದರಿಂದ ಮೊಣಕಾಲಿಗೆ ನೋವಾಗುವ ಸಾಧ್ಯತೆಯಿದೆ.
ಇವರು ಮಾಡಬಾರದು: ಸಂಧು ನೋವು ಅಥವಾ ಮೂಳೆ ಸಂಬಂಧಿ ಸಮಸ್ಯೆಯಿರುವವರು ಅಪ್ಪಿತಪ್ಪಿಯೂ ಕಪ್ಪೆ ಜಿಗಿತವನ್ನು ಟ್ರೈ ಮಾಡಬಾರದು. 50 ವರ್ಷ ಮೇಲ್ಪಟ್ಟವರು ಈ ವ್ಯಾಯಾಮದಿಂದ ದೂರ ಉಳಿಯುವುದು ಉತ್ತಮ.