
ಆರೋಗ್ಯದ ವಿಷಯದಲ್ಲಿ ಒಬ್ಬೊಬ್ಬರು ಒಂದು ಮಾತಾಡುತ್ತಾರೆ. ಆಯುರ್ವೇದ ಹೇಳಿದ್ದು, ಅಲೋಪತಿಗೆ ಸೇರುವುದಿಲ್ಲ, ಅಲೋಪತಿ ಹೇಳಿದ್ದನ್ನು ಹೋಮಿಯೋಪತಿ ಒಪ್ಪುವುದಿಲ್ಲ. ಇದರ ನಡುವೆ ಜನರು ತಮ್ಮ ಅನುಭವಗಳನ್ನಿಟ್ಟುಕೊಂಡು, ತಾವಂದುಕೊಂಡಿದ್ದೇ ನಿಜವೆಂಬಂತೆ ಮಾತನಾಡುವುದು ಬೇರೆ. ಎಲ್ಲವೂ ಕಲಸುಮೇಲೋಗರವಾಗಿ ಹಲವಾರು ಸುಳ್ಳುಗಳು ಸತ್ಯದ ವೇಷ ಧರಿಸಿ ನಮ್ಮ ನಡುವೆ ಹಬ್ಬಿವೆ. ಅವುಗಳಲ್ಲಿ ಹೃದಯದ ವಿಷಯದಲ್ಲಿ ಹರಡಿರುವ ಕೆಲ ಸುಳ್ಳುಗಳು ಇವು.
1. ಡಯಾಬಿಟೀಸ್‌ಗೆ ತೆಗೆದುಕೊಳ್ಳುವ ಔಷಧಗಳು ರಕ್ತದಲ್ಲಿ ಸಕ್ಕರೆ ಮಟ್ಟ ತಗ್ಗಿಸುವುದರಿಂದ ಹಾರ್ಟ್ ಅಟ್ಯಾಕ್ ಸಾಧ್ಯತೆಗಳನ್ನೂ ದೂರ ತಳ್ಳುತ್ತವೆ.
ಡಯಾಬಿಟೀಸ್ ಹೊಂದಿರುವವರಲ್ಲಿ ಬಹುತೇಕ ಸಾವುಗಳು ಹಾರ್ಟ್ ಪ್ರಾಬ್ಲಂನಿಂದಲೇ ಬಂದಿರುತ್ತದೆ. ಆದರೆ, ಇನ್ಸುಲಿನ್ ಸೇರಿದಂತೆ ಬ್ಲಡ್ ಶುಗರ್ ತಗ್ಗಿಸುವಂಥ ಔಷಧಗಳು ಹೃದಯದ ಕಾಯಿಲೆಗಳನ್ನು ದೂರವಿರಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಹೊಸ ರೀತಿಯ ಮೆಡಿಸಿನ್ ಎಸ್‌ಜಿಎಲ್‌ಟಿ2- ಇನ್‌ಹಿಬಿಟರ್ಸ್ ಎಂಬ ಹೊಸ ಔಷಧವು ಹಾರ್ಟ್ ಪ್ರಾಬ್ಲಂ ಕಡಿಮೆಗೊಳಿಸುತ್ತದೆ ಎಂದು ಕೆಲ ಅಧ್ಯಯನಗಳು ತಿಳಿಸಿವೆಯಾದರೂ, ಬಹಳ ಕಾಸ್ಟ್ಲಿ ಹಾಗೂ ಹೊಸತಾದ್ದರಿಂದ ಸಾಮಾನ್ಯವಾಗಿ ಜನ ಈ ಔಷಧವನ್ನು ಬಳಸುವುದಿಲ್ಲ.
2. ಅತಿಯಾದ ರಕ್ತದೊತ್ತಡ ತಲೆನೋವು ತರುತ್ತದೆ.
ಹೈ ಬಿಪಿ ಹೊಂದಿರುವ ಬಹುತೇಕ ಜನರಿಗೆ ಯಾವುದೇ ರೋಗ ಲಕ್ಷಣಗಳು ಕಾಣಿಸುವುದೇ ಇಲ್ಲ. ಆದ್ದರಿಂದಲೇ ಇದನ್ನು ಸೈಲೆಂಟ್ ಕಿಲ್ಲರ್ ಎನ್ನುವುದು. ಇದರ ಲಕ್ಷಣಗಳು ಕಾಣಲಿ ಎಂದು ವೈದ್ಯರ ಬಳಿ ಹೋಗದೆ ಕಾಯುತ್ತಾ ಕುಳಿತರೆ, ಆರಂಭದಲ್ಲೇ ಸ್ಟ್ರೋಕ್ ಅನುಭವಿಸಬೇಕಾದೀತು.
3. ಹೃದಯದ ಶಸ್ತ್ರಚಿಕಿತ್ಸೆಯು ಹೃದಯ ಸಮಸ್ಯೆಗಳನ್ನು ಗುಣಪಡಿಸುತ್ತದೆ.
ಬೈಪಾಸ್ ಸರ್ಜರಿ ಅಥವಾ ಸ್ಟೆಂಟ್ ಅಳವಡಿಸುವುದು ಹಾರ್ಟ್ ಅಟ್ಯಾಕ್ ಆದವರ ಜೀವ ಉಳಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಮತ್ತು ಪರಿಣಾಮಕಾರಿ ಕೂಡಾ. ಆದರೆ ಅವು ಹೃದಯ ಸಮಸ್ಯೆಯನ್ನು ಗುಣಪಡಿಸುವುದಿಲ್ಲ. ಕೆಲವೊಮ್ಮೆ ಉತ್ತಮ ಡಯಟ್, ತೂಕ ಕಳೆದುಕೊಳ್ಳುವುದು, ವ್ಯಾಯಾಮ ಹಾಗೂ ಔಷಧ ತೆಗೆದುಕೊಳ್ಳುವುದು ಕಾಯಿಲೆ ಗುಣಪಡಿಸಿ ಬೈಪಾಸ್ ಸರ್ಜರಿ ಅಥವಾ ಸ್ಟೆಂಟ್‌ಗಿಂತ ಉತ್ತಮ ಫಲಿತಾಂಶ ಕೊಡಬಲ್ಲದು.
4. ಎದೆನೋವು ಬರುವುದು ಹಾರ್ಟ್ ಅಟ್ಯಾಕ್‌ನ ಪ್ರಮುಖ ಲಕ್ಷಣ.
ಹಾರ್ಟ್ ಅಟ್ಯಾಕ್ ಸಂದರ್ಭದಲ್ಲಿ ಎದೆ ನೋವು ಬರುವುದು ಮೂರರಲ್ಲಿ ಒಂದು ಬಾರಿ ಮಾತ್ರ. ಉಳಿದಂತೆ ಇದ್ದಕ್ಕಿದ್ದಂತೆ ಉಸಿರಾಡಲು ಕಷ್ಟವಾಗುವದು, ಕೈ ಅಥವಾ ಎದೆಯೊತ್ತಿದಂತೆ ಭಾಸವಾಗುವುದು ಕಾಣಿಸಿಕೊಳ್ಳುತ್ತದೆ.
5. ಕುಟುಂಬದಲ್ಲಿ ಇತರರಿಗೆ ಹಾರ್ಟ್ ಅಟ್ಯಾಕ್ ಆದ ಇತಿಹಾಸವಿದ್ದರೆ ನಿಮಗೂ ಹೃದಯದ ಕಾಯಿಲೆ ಬರುತ್ತದೆ.
ಖಂಡಿತಾ ಸುಳ್ಳು. ಆದರೆ, ಅನುವಂಶೀಯವಾಗಿ ನಿಮ್ಮಲ್ಲಿ ಕೊಲೆಸ್ಟೆರಾಲ್ ಹೈ ಆಗಬಹುದು. ಇದನ್ನು ತಗ್ಗಿಸಿಕೊಳ್ಳುವತ್ತ ಗಮನ ಹರಿಸುವುದು ಉತ್ತಮ. ಸಾಮಾನ್ಯವಾಗಿ ಸಸ್ಯಾಹಾರ ಹಾಗೂ ವ್ಯಾಯಾಮ ಅನುವಂಶೀಯವಾಗಿ ಬೊಜ್ಜು ಹೊಂದಿದವರಿಗೆ ಹೆಚ್ಚಿನ ಲಾಭ ನೀಡುತ್ತವೆ.
6. ಫಿಶ್ ಆಯಿಲ್ ನಿಮ್ಮ ಕೊಲೆಸ್ಟೆರಾಲ್ ತಗ್ಗಿಸುತ್ತದೆ.
ಇದರ ವಿರುದ್ಧದ ಹೇಳಿಕೆ ಸತ್ಯವಾದುದು. ಬಹುತೇಕ ಫಿಶ್ ಆಯಿಲ್‌ಗಳಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್ ಇದ್ದು, ಇದು ನಿಮ್ಮಲ್ಲಿ ಕೆಟ್ಟ ಕೊಲೆಸ್ಟೆರಾಲ್ ಹೆಚ್ಚಿಸುತ್ತದೆ.
7. ಎಲ್ಲರ ರಕ್ತದೊತ್ತಡವೂ 120/80 ಇರಬೇಕು.
ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ತನ್ನ ಹೊಸ ಗೈಡ್‌ಲೈನ್ಸ್‌ನಲ್ಲಿ ರಕ್ತದೊತ್ತಡ ಕಡಿಮೆ ಇದ್ದಷ್ಟೂ ಒಳ್ಳೆಯದು ಎಂದಿದೆಯಾದರೂ,ಈ ಮ್ಯಾಜಿಕಲ್ ಸಂಖ್ಯೆಗಿಂತ ಹೆಚ್ಚು ಬಿಪಿ ಇರುವ ಬಗ್ಗೆ ಬಹುತೇಕರು ಚಿಂತಿತರಾಗುತ್ತಾರೆ. ತೂಕ ಇಳಿಕೆ, ವ್ಯಾಯಾಮ, ಉಪ್ಪು ಕಡಿಮೆ ಬಳಕೆಯಿಂದ ರಕ್ತದೊತ್ತಡ ಕಡಿಮೆ ಮಾಡಬಹುದು. ಇಷ್ಟೆಲ್ಲ ಮಾಡಿಯೂ ರಕ್ತದೊತ್ತಡ ಟಾಪ್ ನಂಬರ್ 140 ಎಂಎಂಎಚ್‌ಜಿಗಿಂತ ಹೆಚ್ಚು ಹಾಗೂ ಬಾಟಮ್ ನಂಬರ್ 90ಕ್ಕಿಂತ ಹೆಚ್ಚು ಇದ್ದರೆ ಆಗ ವೈದ್ಯರನ್ನು ಕಂಡು ಮೆಡಿಕೇಶನ್ ಬಗ್ಗೆ ಚರ್ಚಿಸಿ.
8. ದಿನಕ್ಕೊಂದು ಆ್ಯಸ್ಪಿರಿನ್ ಮಾತ್ರೆ ತಿನ್ನುವುದರಿಂದ ಹೃದಯ ಸಮಸ್ಯೆ ಬರುವುದಿಲ್ಲ.
ಹಾರ್ಟ್ ಅಟ್ಯಾಕ್ ಅಥವಾ ಸ್ಟ್ರೋಕ್ ಆಗಬಾರದೆಂದು ಮುನ್ನೆಚ್ಚರಿಕೆಯಿಂದ ದಿನಕ್ಕೊಂದು ಆ್ಯಸ್ಪಿರಿನ್ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಇದು ಒಳ್ಳೆಯದಕ್ಕಿಂತ ಕೆಟ್ಟದ್ದು ಮಾಡುವುದೇ ಹೆಚ್ಚು. ನಿಮಗೆ ಈ ಹಿಂದೆ ಎಂದೂ ಹಾರ್ಟ್ ಅಟ್ಯಾಕ್, ಸ್ಟ್ರೋಕ್, ಸ್ಟೆಂಟ್ ಅಥವಾ ಬೈಪಾಸ್ ಸರ್ಜರಿ ಆಗಿಲ್ಲ, ವಯಸ್ಸು 70 ದಾಟಿದೆ ಎಂದರೆ ಹೆಚ್ಚಿನ ಪಕ್ಷ ನೀವು ಆ್ಯಸ್ಪಿರಿನ್ ತೆಗೆದುಕೊಳ್ಳುವ ಅಗತ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.