
ಎತ್ತರ: 5’9
ತೂಕ: 55 ಕೆಜಿ
ಸುತ್ತಳತೆ: 34-26-34
ಡಯೆಟ್ ಕಥೆ ಇಷ್ಟೇ ಕಣಮ್ಮೋ
ಯಾವ ಕಾರಣಕ್ಕೂ ಬೆಳಗಿನ ಉಪಹಾರ ತಪ್ಪಿಸಲ್ಲ. ಸಪ್ಪಗಿರುವ, ತಿನ್ಬೇಕು ಅಂತ ತಿನ್ನೋ ಅಭ್ಯಾಸ ಈಕೆಗಿಲ್ಲ. ತಾನು ತಿನ್ನುವ ಪ್ರತೀ ತುತ್ತನ್ನೂ ಎನ್‌ಜಾಯ್ ಮಾಡ್ಕೊಂಡು ತಿನ್ನುವ ಪ್ರವೃತ್ತಿ. ಪ್ರೊಟೀನ್, ದೇಹಕ್ಕೆ ಉತ್ತಮವಾದ ಕಾರ್ಬೋಹೈಡ್ರೇಟ್ ಮಿಕ್ಸ್ ಇರುವ ಡಯೆಟ್. ಅವಕಾಡೊ, ಗೆಣಸು, ಎಗ್‌ವೈಟ್ ಬೆಳಗಿನ ಉಪಹಾರಕ್ಕೆ. ದಿನಕ್ಕೆ ಕನಿಷ್ಠ ಪಕ್ಷ 3 ಲೀಟರ್ ನೀರು ಕುಡಿಯುತ್ತಾರೆ. ಕೋಕ್‌ನಂಥ ಕಾರ್ಬೊನೇಟೆಡ್ ಡ್ರಿಂಕ್ಸ್ ಇವರಿಗೆ ದೂರ. ರಾತ್ರಿ ಎಂಟರ ಮೊದಲೇ ಊಟ ಮುಗಿಸೋ ಹುಡುಗಿ. ಸಂಸ್ಕರಿಸಿದ ಸಕ್ಕರೆಯಿಂದ ದೂರವಿದ್ದಷ್ಟೂಆರೋಗ್ಯ ಹೆಚ್ಚು ಎಂಬ ನಂಬಿಕೆ.
ವರ್ಕೌಟ್ ಇಲ್ದೇ ನಾನಿಲ್ಲ!
ತಿನ್ನೋದರಲ್ಲಿ ಹೆಚ್ಚು ಕಮ್ಮಿಯಾದರೆ ವರ್ಕೌಟ್‌ನಲ್ಲಿ ಸರಿದೂಗಿಸೋ ಜಾಣೆ ಈಕೆ. ವರ್ಕೌಟ್ ಮಾಡಕ್ಕಾಗಲ್ಲ ಅಂದಾಗ ತಿನ್ನೋದರಲ್ಲೇ ಕಡಿಮೆ ಮಾಡ್ತಾರೆ. ಪಿಲಾಟೆಸ್, ಯೋಗ ಮಿಸ್ ಮಾಡಲ್ಲ. ಬಹಳ ಇಷ್ಟವಾಗೋದು ಸ್ವಿಮ್ಮಿಂಗ್. ಈಕೆ ಉತ್ತಮ ಈಜು ಪಟುವೂ ಹೌದು.
ಬಿರ್ಲಾ ಮಗಳಾದ್ರೂ ಫಿಟ್‌ನೆಸ್‌ನಲ್ಲಿ ಕಮ್ಮಿ ಇಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.