ಯೂರಿನ್ ನಲ್ಲಿ ಬ್ಲಡ್ ಬರ್ತಿದ್ದಂತೆ ಆಸ್ಪತ್ರೆಗೆ ಓಡಿದ ವ್ಯಕ್ತಿ , ಮೂತ್ರಕೋಶದಲ್ಲಿದ್ದ ವಸ್ತು ನೋಡಿ ಡಾಕ್ಟರ್ ದಂಗು

Published : Sep 21, 2026, 08:31 PM IST
self embedding

ಸಾರಾಂಶ

ಚೀನಾದಲ್ಲಿ ವ್ಯಕ್ತಿಯೊಬ್ಬನ ಮೂತ್ರದಲ್ಲಿ ರಕ್ತ ಕಾಣಿಸಿಕೊಂಡಿತ್ತು. ಭಯದಲ್ಲಿ ವ್ಯಕ್ತಿ ಆಸ್ಪತ್ರೆಗೆ ಹೋದಾಗ, ಸ್ಕ್ಯಾನ್ ಮಾಡಿದ ವೈದ್ಯರು ಕನ್ಫ್ಯೂಸ್ ಆದ್ರು.

ಯೂರಿನ್ ನಲ್ಲಿ ರಕ್ತ ಬರೋದು ಚಿಂತೆಯುಂಟು ಮಾಡುತ್ತೆ. ಚೀನಾದಲ್ಲೂ 35 ವರ್ಷದ ವ್ಯಕ್ತಿಯೊಬ್ಬನಿಗೆ ಮೂತ್ರ ಮಾಡೋಕೆ ಕಷ್ಟವಾಗ್ತಿತ್ತು. ನಂತ್ರ ಮೂತ್ರದಲ್ಲಿ ರಕ್ತ ಕಾಣಿಸಿಕೊಂಡ್ತು. ಭಯದಲ್ಲಿ ಆತ ಆಸ್ಪತ್ರೆಗೆ ಓಡಿದ್ದ. ಮೂತ್ರಕೋಶದಲ್ಲಿದ್ದ ವಸ್ತು ನೋಡಿ ವೈದ್ಯರು ದಂಗಾದ್ರು.

ಮೂತ್ರಕೋಶದಲ್ಲಿತ್ತು ಈ ವಸ್ತು

ಆರಂಭದಲ್ಲಿ ಈ ಕೇಸ್ ವೈದ್ಯರಿಗೆ ಸವಾಲಾಗಿರಲಿಲ್ಲ.ಆದ್ರೆ ಪರೀಕ್ಷೆ ಮಾಡಿದ ನಂತ್ರ ಕೇಸ್ ಕಠಿಣವಾಯ್ತು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಸ್ಕ್ಯಾನ್ನಲ್ಲಿ ದೇಹದೊಳಗೆ ಹಲವಾರು ಲೋಹದ ಸೂಜಿಯಂತಹ ವಸ್ತುಗಳು ಪತ್ತೆಯಾದವು. ಇವು ಹೊಟ್ಟೆ ಅಥವಾ ಮೂತ್ರಕೋಶಕ್ಕೆ ಸೀಮಿತವಾಗಿರಲಿಲ್ಲ. ಒಂದು ಅಪಾಯಕಾರಿ ವಸ್ತು ಅವನ ಹೃದಯದ ಸುತ್ತಲಿನ ಪೊರೆಯನ್ನು ಸಹ ತಲುಪಿತ್ತು.

ಆಸ್ಪತ್ರೆಯಲ್ಲಿ ಪರೀಕ್ಷೆಯ ಸಮಯದಲ್ಲಿ, ವೈದ್ಯರು ಇಮೇಜಿಂಗ್ ಪರೀಕ್ಷೆ ಮಾಡಿದ್ರು. ಹೃದಯದ ಬಳಿ ವಿಚಿತ್ರ ನೆರಳು ಗಮನಿಸಿದ್ರು. ನಂತರ ಸ್ಥಿತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಕಾಂಟ್ರಾಸ್ಟ್-ವರ್ಧಿತ CT ಸ್ಕ್ಯಾನ್ ಮಾಡಲಾಯ್ತು. ಹೊಟ್ಟೆ, ಸೊಂಟ, ಮೂತ್ರಕೋಶ ಮತ್ತು ದೇಹದ ಇತರ ಭಾಗಗಳು ಸೇರಿದಂತೆ ಮನುಷ್ಯನ ದೇಹದ ವಿವಿಧ ಭಾಗಗಳಲ್ಲಿ ಹಲವಾರು ಸೂಜಿಯಂತಹ ಲೋಹದ ವಸ್ತುಗಳು ಕಂಡುಬಂದವು.

ವೈದ್ಯರನ್ನು ಹೆಚ್ಚು ಚಿಂತೆಗೀಡು ಮಾಡಿದ್ದು ಸುಮಾರು 1.4 ಇಂಚು ಉದ್ದದ ಲೋಹದ ಪಿನ್. ಈ ಪಿನ್ ಹೃದಯವನ್ನು ಸುತ್ತುವರೆದಿರುವ ದ್ರವ ತುಂಬಿದ ಪೊರೆಯೊಳಗಿತ್ತು. ಇದನ್ನು ಪೆರಿಕಾರ್ಡಿಯಂ ಎಂದು ಕರೆಯಲಾಗುತ್ತದೆ.

ಇದು ದೇಹದೊಳಗೆ ಹೇಗೆ ಬಂತು?

ಈ ವಸ್ತುಗಳು ಮನುಷ್ಯನ ದೇಹದೊಳಗೆ ಹೇಗೆ ಬಂತು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಈ ವ್ಯಕ್ತಿ ಬಾಲ್ಯದಿಂದಲೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ.ಅವನಿಗೆ ಈ ಸೂಜಿಗಳು ತನ್ನ ದೇಹವನ್ನು ಹೇಗೆ ಸೇರಿದೆ ಅನ್ನೋದನ್ನು ಹೇಳೋದು ಕಷ್ಟವಾಗಿದೆ. ವೈದ್ಯರು ವ್ಯಕ್ತಿಯ ಹಳೆ ದಾಖಲೆಗಳನ್ನು ಪರಿಶೀಲಿಸಿದ್ರು. ಎರಡು ವರ್ಷಗಳ ಹಿಂದೆ ಬೇರೆ ಆಸ್ಪತ್ರೆಯಲ್ಲಿ ಇಂಥದ್ದೇ ಅಪಾಯಕಾರಿ ವಸ್ತುಗಳನ್ನು ಹೊರಗೆ ತೆಗೆಯಲಾಗತ್ತು. ಇದನ್ನು ಅರಿತ ವೈದ್ಯರು, ಉದ್ದೇಶಪೂರ್ವಕವಾಗಿ ವ್ಯಕ್ತಿ ಈ ವಸ್ತುಗಳನ್ನು ತನ್ನ ದೇಹದೊಳಗೆ ಸೇರಿಸುತ್ತಿದ್ದಾನೆ ಎಂಬುದನ್ನು ಪತ್ತೆ ಮಾಡಿದ್ರು.

ಸ್ವಯಂ-ಎಂಬೆಡಿಂಗ್ ಎಂದರೇನು?

ಸ್ವಯಂ-ಎಂಬೆಡಿಂಗ್ ಎನ್ನುವುದು ಆತ್ಮಹತ್ಯೆಯಲ್ಲದ ಸ್ವಯಂ-ಗಾಯದ ಒಂದು ವಿಧನ. ಒಬ್ಬ ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನ ದೇಹಕ್ಕೆ ಅಪಾಯಕಾರಿ ವಸ್ತುವನ್ನು ಸೇರಿಸಿಕೊಳ್ಳುತ್ತಾನೆ. ಗಾಜಿನ ತುಂಡು, ಸ್ಟೇಪ್ಲರ್ ಪಿನ್ಗಳು, ಪೇಪರ್ ಕ್ಲಿಪ್ಗಳು, ತಂತಿ ಅಥವಾ ಇತರ ಚೂಪಾದ ವಸ್ತುಗಳನ್ನು ದೇಹಕ್ಕೆ ಸೇರಿಸಬಹುದು. ಈ ನಡವಳಿಕೆಯನ್ನು ಸಾಕಷ್ಟು ಅಪರೂಪವೆಂದು ಪರಿಗಣಿಸಲಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಿರಿಯಡ್ಸ್ ಜೊತೆ ಹೇರ್ ಫಾಲ್, ಮೊಡವೆ ಬಂದ್ರೆ ಇಗ್ನೋರ್ ಮಾಡ್ಬೇಡಿ… ಈ ಸಮಸ್ಯೆಯೂ ಇರಬಹುದು
ಅಮ್ಮನಾದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ದಿವ್ಯಾ ವಸಂತ್​: ಖುಷಿ ಹಂಚಿಕೊಂಡ ಮಾಜಿ ಆ್ಯಂಕರ್​