ಪ್ರತಿಯೊಂದೂ ದೇಶಕ್ಕೆ ಅದರದ್ದೇ ಸಂಪ್ರದಾಯ, ರೀತಿ ನೀತಿ ಇರುತ್ತವೆ. ಕೆಲವೊಂದು ಹೌದಾ ಎಂದು ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವೊಂದು ನಗು ತರಿಸುತ್ತದೆ. ಅಂತಹ ವಿಚಿತ್ರ ಸಂಗತಿಗಳು ಇಲ್ಲಿವೆ..
- ಇಥೋಪಿಯೋಪಿಯಾದಲ್ಲಿ ಪ್ರಪಂಚದ ಬೇರೆಲ್ಲ ದೇಶಗಳಿಗಿಂತಲೂ 7 ವರ್ಷ ಹಿಂದಿನ ಕ್ಯಾಲೆಂಡರ್ ಅನ್ನು ಜನ ಅನುಸರಿಸುತ್ತಾರೆ. ಜೊತೆಗೆ ಅವರಿಗೆ ಸೆಪ್ಟೆಂಬರ್ 12ರಂದು ಹೊಸ ವರ್ಷ ಆರಂಭವಾಗುತ್ತದೆ.
- ದಕ್ಷಿಣ ಪೆಸಿಫಿಕ್‌ನಲ್ಲಿರುವ ನಿಯು ಐಲ್ಯಾಂಡ್‌ನಲ್ಲಿ ಚಾಲನೆಯಲ್ಲಿರುವ ನಾಣ್ಯದಲ್ಲಿ ಮಿಕ್ಕಿ ಮೌಸ್ ಮತ್ತು ಸ್ಟಾರ್‌ವಾರ್ ಚಿತ್ರಗಳಿವೆ.
- ಭೂತಾನ್‌ನಲ್ಲಿ ಹೆಚ್ಚಿನ ಕಟ್ಟಡಗಳು ಪುರುಷರ ಜನಾಂಗವನ್ನು ಹೋಲುವಂತಿರುತ್ತದೆ. ಕಾರಣ ಅದು ಫಲವತ್ತತೆಯ ಸಂಕೇತ.
- ಜಪಾನ್‌ನಲ್ಲಿ ಪ್ಯಾಥೋ ಮೂವಿ ನೋಡಲು ಮಹಿಳೆಯರು ಒಬ್ಬ ಸುಂದರವಾದ ಪುರುಷನನ್ನು ನೇಮಿಸಬಹುದು. ನೀವು ಅತ್ತರೆ ಆತ ಕಣ್ಣನ್ನು ಒರೆಸಲು ಸಹಕರಿಸುತ್ತಾನೆ.
- ಡೆನ್ಮಾರ್ಕ್‌ನಲ್ಲಿ ಪೋಷಕರು ತಮ್ಮ ಮಗುವಿಗೆ ಸರ್ಕಾರ ಅಂಗೀಕರಿಸಿರುವ 7,000 ಹೆಸರುಗಳಲ್ಲಿ ಒಂದನ್ನೇ ಇಡಬೇಕು. ಬೇರೆ ಹೆಸರು ಇಡುವ ಹಾಗಿಲ್ಲ.
- svangerskabsforebyggende middel ಇದು ಕಾಂಡೋಮ್‌ನ ಡ್ಯಾನಿಷ್ ಹೆಸರು.
- ಮಲೇಷಿಯಾದಲ್ಲಿ ಹಳದಿ ಬಣ್ಣದ ಧಿರಿಸನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
- ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಖರೀದಿಸುವುದು, ಮಾರುವುದು, ಆಮದು ಮಾಡುವುದು, ಸೇವಿಸುವುದು ಕಾನೂನು ಬಾಹಿರ.
- ಫ್ರಾನ್ಸ್‌ನಲ್ಲಿ ಸತ್ತ ಮನುಷ್ಯನ ಜೊತೆಯೂ ಮದುವೆಯಾಗಬಹುದು.