ಈ ದೇಶಗಳಲ್ಲೆಲ್ಲಾ ಹೊಸ ವರ್ಷಾಚರಣೆ ಹೇಗೆ ಆಚರಿಸ್ತಾರೆ ಗೊತ್ತಾ?

By Web DeskFirst Published Jan 12, 2019, 4:23 PM IST
Highlights

ಈಗ ತಾನೇ ವಿಶ್ವ ಹೊಸ ವರ್ಷವನ್ನು ಬರ ಮಾಡಿಕೊಂಡಿದೆ. ಈ ಸಂಭ್ರಮ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರುತ್ತದೆ. ಯಾವ ದೇಶದಲ್ಲಿ ಹೇಗಿರುತ್ತೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ...

ಭಾರತದಲ್ಲಿ ಜನರು ಪಾರ್ಟಿ ಮಾಡುತ್ತಾ, ಎಂಜಾಯ್ ಮಾಡುತ್ತಾ ಅಥವಾ ಚರ್ಚ್ ಗೆ ಹೋಗಿ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷಾಚರಣೆ ಮಾಡುತ್ತಾರೆ. ಆದರೆ ಎಲ್ಲಾ ದೇಶಗಳಲ್ಲೂ ಹಾಗೆ ಇರೋದಿಲ್ಲ. ಈ ದಿನ ಬೇರೆ ಬೇರೆ ರೀತಿಯಲ್ಲಿ ಜನರು ಆಚರಣೆ ಮಾಡುತ್ತಾರೆ. ಕೆಲವೊಂದು ದೇಶಗಳಿಗೆ ತನ್ನದೇ ಆದ ಆಚರಣೆ, ಸಂಪ್ರದಾಯವಿದೆ. ಅದನ್ನು ಹೇಗೆ ಆಚರಣೆ ಮಾಡಲಾಗುತ್ತದೆ ನೋಡೋಣಾ.

ದ್ರಾಕ್ಷಿ ಸೇವನೆ, ಸ್ಪೇನ್: ಸ್ಪೇನ್‌ನಲ್ಲಿ ಹೊಸ ವರ್ಷಾಚರಣೆ ಮಾಡುವುದು ದ್ರಾಕ್ಷಿ ತಿನ್ನುವ ಮೂಲಕ. ಹೌದು ಎಲ್ಲೆಡೆ ಹೇಗೇಗೋ ಆಚರಿಸಿದರೆ ಸ್ಪೇನ್ ಮಂದಿ ಮಾತ್ರ ದ್ರಾಕ್ಷಿ ತಿಂದು ಆಚರಿಸುತ್ತಾರೆ. ಇದು ಅಲ್ಲಿನ ಸಂಪ್ರದಾಯ. ಇದಕ್ಕಾಗಿ 12 ದ್ರಾಕ್ಷಿಗಳನ್ನು ಒಂದೇ ಬಾರಿಗೆ ಸೇವಿಸಬೇಕು. ಇದು ಹೇಳಿದಷ್ಟು ಸುಲಭವೇನಲ್ಲ. ಯಾರು ಹೀಗೆ 12 ದ್ರಾಕ್ಷಿಗಳನ್ನು ಒಟ್ಟಿಗೇ ಸೇವಿಸುತ್ತಾರೋ ಅವರಿಗೆ ಆ ವರ್ಷ ಸುಖ ಸಮೃದ್ಧಿಯಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ.

ಡೆನ್ಮಾರ್ಕ್ ಜನ ಪ್ಲೇಟ್ ತುಂಡರಿಸುತ್ತಾರೆ: ಮನೆಯ ಮುಂದೆ ಪಾತ್ರೆಗಳನ್ನು ಎಸೆಯುವುದು ಅಥವಾ ತುಂಡು ಮಾಡುವುದು ಕೆಟ್ಟದ್ದು ಎಂದು ನಮ್ಮ ದೇಶದಲ್ಲಿ ನಂಬಲಾಗುತ್ತೆ. ಆದರೆ ಡೆನ್ಮಾರ್ಕ್‌ನಲ್ಲಿ ಹೊಸ ವರ್ಷಾಚರಣೆಗಾಗಿ ಡಿಸೆಂಬರ್ 31ರ ರಾತ್ರಿ ತಮ್ಮ ಸ್ನೇಹಿತರ, ಸಂಬಂಧಿಕರ ಮನೆಗೆ ಹೋಗಿ ಅವರ ಮನೆ ಬಾಗಿಲಿಗೆ ಪಿಂಗಾಣಿ ಪಾತ್ರೆಗಳನ್ನು ಒಡೆಯುತ್ತಾರೆ. ಯಾರ ಮನೆಯ ಮುಂದೆ ಹೆಚ್ಚು ಪಾತ್ರೆಗಳು ಬಿದ್ದಿರುತ್ತವೆಯೋ ಅವರು ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ಈಸ್ಟೋನಿಯಾ ಸಂಪ್ರದಾಯ ಏನು ಗೊತ್ತಾ?: ಇಲ್ಲಿ ಹೊಸ ವರ್ಷಾಚರಣೆಗೆ ಏಳು, ಒಂಬತ್ತು ಅಥವಾ ಹನ್ನೆರಡು ಪ್ಲೇಟ್ ತಿಂಡಿ ತಿಂದರೆ ಅದನ್ನು ಲಕ್ಕಿ ಎಂದು ಹೇಳಲಾಗುತ್ತದೆ. ಅದೇ ರೀತಿ ಎಷ್ಟು ಪ್ಲೇಟ್ ತಿಂಡಿ ತಿನ್ನುತ್ತಾರೋ ಅಷ್ಟು ಜನರ ಶಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಹಾಗಂತ ತಿನ್ನುವವರು ಎಲ್ಲವನ್ನೂ ಮುಗಿಸಬೇಕೆಂದೇನಿಲ್ಲ. ಪ್ಲೇಟ್ ನಲ್ಲಿ ಬಿಟ್ಟರೂ ಉತ್ತಮ. ಯಾಕೆಂದರೆ ಅದು ಪೂರ್ವಜರಿಗೆ ನೀಡುವಂತಹ ಆಹಾರವಾಗಿರುತ್ತದೆ ಎಂದು ನಂಬಲಾಗುತ್ತದೆ.

ಜಪಾನ್ ನಲ್ಲಿ 108 ಸಲ ಬೆಲ್ ಮಾಡುತ್ತಾರೆ: ಜಪಾನ್ ಜನರು ಹೆಚ್ಚಾಗಿ ಬುದ್ಧ ದೇವಾಲಯಗಳಲ್ಲಿ ಹೊಸ ವರ್ಷಾಚರಣೆ ಆಚರಣೆ ಮಾಡುತ್ತಾರೆ. ಈ ದಿನ ಅಲ್ಲಿ 108 ಸಲ ಗಂಟೆ ಬಾರಿಸುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗುತ್ತದೆ. 108 ಎಂದರೆ ಮಾನವನ ಆಸೆಗಳು. 108 ಸಲ ಗಂಟೆ ಬಾರಿಸಿದರೆ ನೆಗೆಟಿವ್ ಶಕ್ತಿ, ವಿಚಾರ ದೂರವಾಗುತ್ತದೆ ಎಂದು ನಂಬಲಾಗುತ್ತದೆ.


 

click me!