
ಈ ಸುದ್ದಿ ಓದಿದರೆ, ಇದೇನಾದರೂ ಮಾನಸಿಕ ಕಾಯಿಲೆಯೇ ಅಥವಾ ಪರ್ಸನಾಲಿಟಿ ಡಿಸಾರ್ಡರಾ ಅಥವಾ ಇಲ್ಲಿ ಎಲ್ಲವೂ ನಾರ್ಮಲ್ ಆಗೇ ಇದೆಯೇ, ನಾನೇ ಸರಿ ಇಲ್ಲವೇನೋ ಎಂದು ನಿಮಗೆ ಅನುಮಾನ ಬರಬಹುದು. ವೀರ್ಯವೆಂಬುದು ವಿವಿಧೋದ್ದೇಶ ಯೋಜನೆಯ ಮೂಲಸರಕೇನೋ ಎಂದೂ ಅನಿಸಬಹುದು. ಈ ವಿಚಾರಧಾರೆಯೇ ಇಷ್ಟು ವಿಚಿತ್ರವಾಗಿದ್ಯಲ್ಲಪ್ಪ, ಇನ್ನು ವೀರ್ಯ ಭಕ್ಷ್ಯಗಳು ಅದು ಹೇಗಿರಬಹುದು ಎಂದೆಲ್ಲ ಪ್ರಶ್ನೆ ಮೂಡಬಹುದು. ಅಥವಾ ನೆನೆಸಿಕೊಂಡರೇ ವಾಕರಿಕೆ, ವಾಂತಿ ಎಲ್ಲವೂ ಬರಬಹುದು. ಅದ್ಯಾವುದಕ್ಕೂ ನಾವು ಹೊಣೆಯಲ್ಲ. ವಿಷಯ ಹೇಳುವುದಷ್ಟೇ ನಮ್ಮ ಕೆಲಸ.
ಬಕ್ರೀದ್ ಸಂಭ್ರಮದಲ್ಲಿ ಈ ಖಾದ್ಯ ತಿನ್ನೋದ ಮರೀಬೇಡಿ!
ಅಮೆರಿಕದ ಈ ಪಾಲ್ ಫೋಟಿ ಫೋಟೆನಾರ್ ಎಂಬ ಲೇಖಕ -ಲೆೇಖಕ ಎನಿಸಿಕೊಂಡಿದ್ದು ತನ್ನ ಪಾಕ ಪ್ರಾವೀಣ್ಯತೆಯಿಂದ. ಈತನ ನ್ಯಾಚುರಲ್ ಹಾರ್ವೆಸ್ಟ್- ಎ ಕಲೆಕ್ಷನ್ ಆಫ್ ಸೆಮನ್ ಬೇಸ್ಡ್ ರೆಸಿಪಿ, ಸೆಮೆನಾಲಜಿ- ಪುಸ್ತಕಗಳು ವೀರ್ಯ ಬಳಸಿ ತಯಾರಿಸುವ ಅಡುಗೆಯನ್ನು ಹೇಳಿಕೊಡುತ್ತವೆ! ಈ ಎರಡು ಪುಸ್ತಕದಷ್ಟು ವೀರ್ಯಪಾಕ ರೆಸಿಪಿಗಳಿಗೆ ಸಮಾಧಾನ ಹೊಂದದ ಫೋಟಿ ಇದೀಗ ಈ ಕುರಿತ ಮೂರನೇ ಸರಣಿ ಪುಸ್ತಕ ತರಲು ಹೊರಟಿದ್ದಾನೆ.
ನಿಮ್ಮ ನಿತ್ಯದ ಆಹಾರದಲ್ಲಿ ವೀರ್ಯವನ್ನು ಹೇಗೆಲ್ಲ ಬಳಸಬಹುದೆಂದು ಈತ ವಿವರಿಸಿದ್ದಾನೆ. ಮೊದಲ ಪುಸ್ತಕದ ಹಿಂಭಾಗದಲ್ಲಿ ಅಡುಗೆಯಲ್ಲಿ ವೀರ್ಯ ಬಳಕೆಯನ್ನು ಸಮರ್ಥಿಸಿಕೊಂಡಿರುವ ಈತ- "ವೀರ್ಯ ಕೇವಲ ಪೋಷಕಾಂಶಯುಕ್ತವಷ್ಟೇ ಅಲ್ಲ, ಅದರ ಟೆಕ್ಸ್ಚರ್ ಹಾಗೂ ರುಚಿಯನ್ನು ಕೂಡಾ ಕಡೆಗಣಿಸಲಾಗದು. ವೈನ್ ಹಾಗೂ ಚೀಸ್‌ನಂತೆ ಸೆಮನ್‌ನ ರುಚಿ ಕೂಡಾ ಅದ್ಭುತವಾದದ್ದು. ಮತ್ತೊಂದು ಪ್ರಯೋಜನವೆಂದರೆ ಇದರ ಉತ್ಪಾದನೆಗೆ ಖರ್ಚಿಲ್ಲ ಜೊತೆಗೆ ಬಹುತೇಕ ಮನೆಗಳಲ್ಲಿ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಇದು ಸಾಮಾನ್ಯವಾಗಿ ಸಿಗುತ್ತದೆ.
ಉಳಿದ ಅನ್ನ ಎಸೆಯಬೇಡಿ, ಅದರಿಂದ ರುಚಿಯಾದ ಕಟ್ಲೆಟ್ ಮಾಡಿ!
ಅಷ್ಟೇ ಅಲ್ಲ, ಇದು ತಾಜಾವಾಗಿರುತ್ತದಲ್ಲದೆ, ಇದರ ಉತ್ಪಾದಕ ಯಾರು ಎಂಬುದೂ ನಿಮಗೆ ಗೊತ್ತಿರುತ್ತದೆ. ಇಷ್ಟೆಲ್ಲ ಪಾಸಿಟಿವ್ ವಿಷಯಗಳಿದ್ದರೂ ವೀರ್ಯ ಆಹಾರವಾಗಿ ಬಹಳ ಕಡೆಗಣನೆಗೊಳಗಾಗಿದೆ"- ಎಂದೆಲ್ಲ ವಿವರಿಸಿದ್ದಾನೆ. ಅಬ್ಬಬ್ಬಾ! ಎಂಥಾ ವಿವರಣೆ, ಎಂಥಾ ವಿವರಣೆ... ಓದಿದವರು ಟ್ರೈ ಮಾಡಿ ನೋಡೇ ಬಿಡೋಣ ಎಂದುಕೊಂಡರೂ ಅಚ್ಚರಿ ಇಲ್ಲ.
ಇದಿಷ್ಟಕ್ಕೇ ಮುಗಿದಿಲ್ಲ, ''ಆರಂಭದಲ್ಲಿ ನಿಮಗೊಂಚೂರು ಅನುಮಾನ ಕಾಡಬಹುದು, ಆದರೆ, ಬಳಸಿದರೆ ಅಡುಗೆಮನೆಯ ಆಹಾರಪದಾರ್ಥವಾಗಿ ವೀರ್ಯ ಅದೆಂಥಾ ವಂಡರ್‌ಫುಡ್ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.
ಪ್ರತಿ ಬೋರಿಂಗ್ ಆಹಾರಕ್ಕೂ ಟ್ವಿಸ್ಟ್ ನೀಡಿ ಅದನ್ನು ಆಸಕ್ತಿಕರವಾಗಿಸಬಲ್ಲ ತಾಕತ್ತು ವೀರ್ಯಕ್ಕಿದೆ. ನೀವು ಅತ್ಯಂತ ಒಳ್ಳೆಯ ಅಡುಗೆಯವರಾಗಿದ್ದು, ಹೊಸದನ್ನು ಪ್ರಯತ್ನಿಸಲು ಹಿಂಜರಿಯುವವರಲ್ಲ ಎಂದರೆ- ಈ ಪುಸ್ತಕ ನಿಮಗೆ ಖಂಡಿತಾ ಇಷ್ಟವಾಗುತ್ತದೆ,'' ಎಂದು ಫೋಟಿ ಬರೆದಿದ್ದಾರೆ.
ಈ ಕುರಿತು ಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಫೋಟಿ, ತಾನು ತಿನ್ನುವುದೆಲ್ಲಕ್ಕೂ ವೀರ್ಯ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. "ನಾನು ಯೋಚಿಸಿದಾಗ ಜನರು ಎಲ್ಲ ಚಿತ್ರವಿಚಿತ್ರ ಆಹಾರಗಳನ್ನು ಸೇವಿಸುವುದು ಗಮನಕ್ಕೆ ಬಂತು. ಮೊಟ್ಟೆಗಳು ಕೋಳಿಯ ಮುಟ್ಟಿನ ಫಲ, ಹಾಲು ಹಸುವಿನ ಮ್ಯಾಮರಿ ಗ್ಲ್ಯಾಂಡ್‌ನಿಂದ ಹೊರಬಿದ್ದದ್ದು. ವೀರ್ಯ ಕನಿಷ್ಠ ಪಕ್ಷ ಇದು ತಾಜಾ ಆಗಿರುತ್ತದೆ," ಎನ್ನುವುದು ಈ ವೈಪರೀತ್ಯಕ್ಕೆ ಫೋಟಿಯ ಎಕ್ಸ್‌ಪ್ಲೇನೇಶನ್. ಇಷ್ಟೆಲ್ಲ ಆದರೂ ಜನರಿಗೆ ಗೊತ್ತಿಲ್ಲದಂತೆ ವೀರ್ಯ ಬೆರೆಸಿದ ಆಹಾರ ತಿನ್ನಿಸಬಾರದು ಎನ್ನುತ್ತಾರೆ ಅವರು.
ಎಚ್ಐವಿಯಂಥ ಲೈಂಗಿಕವಾಗಿ ಹರಡುವ ಕಾಯಿಲೆಗಳು ಸೆಮನ್‌ನಲ್ಲಿ ಏಡ್ಸ್ ವೈರಸ್ ಇದ್ದರೆ, ಅದರ ಸೇವನೆಯಿಂದಲೂ ಹರಡುತ್ತವೆ. ಗೋನೋರಿಯಾ, ಜೆನೈಟಲ್ ಹರ್ಪ್ಸ್, ಸಿಫಿಲಿಸ್, ಹೆಪಟೈಟಿಸ್ ಎ,ಬಿ ಮತ್ತು ಸಿ ಮುಂತಾದವು ಕೂಡಾ ಹರಡುತ್ತವೆ. ಈ ಕುರಿತು ಪ್ರಶ್ನಿಸಿದಾಗ, ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯಾ ಚೆನ್ನಾಗಿ ಬಿಸಿ ಮಾಡಿದ, ಬೇಯಿಸಿದ ಆಹಾರದಲ್ಲಿ ಬದುಕುಳಿಯುವುದಿಲ್ಲ ಎನ್ನುತ್ತಾರೆ. ಮ್ಯಾಚೋ ಮೊಜಿಟೋ, ಕ್ರೀಮಿ ಕಮ್ ಕ್ರೀಪ್ಸ್, ಕ್ರೀಮ್ ಕೆರಾಮೆಲ್, ಬಾರ್ಬೆಕ್ಯೂ ಸಾಸ್ ಮುಂತಾದವು ಈತನ ರೆಸಿಪಿಯ ಭಾಗಗಳು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.