ಯಾವಾಗ್ಲೂ ಸುಸ್ತೆನಿಸುತ್ತದೆಯೇ?ನಿಮ್ಮ ದೇಹಕ್ಕಿದೆ ಇವುಗಳ ಕೊರತೆ

By Web Desk  |  First Published Aug 12, 2019, 4:09 PM IST

ಕೆಲಸ ಮಾಡಿದಾಗ ಬಿಡಿ, ನಿದ್ದೆಯಾಗಿ ಎದ್ದಾಗ ಕೂಡಾ ಸುಸ್ತು, ವಾಕ್ ಹೋಗಿ ಬಂದರೂ ಸುಸ್ತು, ಸ್ನಾನ ಮಾಡಿ ಬಂದಾಗಲೂ ಸುಸ್ತು, ಕಡೆಗೆ ಥಿಯೇಟರ್‌ಗೆ ಹೋಗಿ ಬಂದರೂ ಸುಸ್ತೆನಿಸುತ್ತದೆಯೇ? ನೆಗ್ಲೆಕ್ಟ್ ಮಾಡ್ಬೇಡಿ, ಈ ಗಂಭೀರ ಕಾರಣಗಳಿರಬಹುದು. 


ಅಲಾರಾಂ ತಲೆಗೆ ಗುದ್ದಿ ಗುದ್ದಿ ಸಾಕಾಗುತ್ತದೆ. ಆದರೆ, ಎಷ್ಟು ಮಲಗಿದರೂ ಫ್ರೆಶ್ ಎನಿಸುವುದಿಲ್ಲ. ಮಧ್ಯಾಹ್ನ ಊಟವಾದ ಮೇಲಂತೂ ಸುಸ್ತಿಗೆ ಮಲಗುವುದು ಬಿಟ್ಟು ಬೇರೇನೂ ಬೇಡ ಎನಿಸುತ್ತದೆ.

ಹೊರಗೆ ಹೋಗೋಣವೆಂದರೂ ಮಲಗಬಹುದಲ್ಲ ಎನ್ನುವ ಮನಸ್ಸು, ಸ್ವಲ್ಪ ಭಾರ ಎತ್ತಿದರೆ ಉಸ್ಸಪ್ಪಾ ಎಂದು ಗಂಟೆಗಟ್ಟಲೆ ಸೋಫಾಗೆ ಒರಗುವಂತಾಗುತ್ತದೆ. ನೋಡುವವರಿಗೆ ಸೋಮಾರಿ ಎನಿಸಬಹುದು. ಸುಖಾಸುಮ್ಮನೆ ಸುಸ್ತಾಗುತ್ತಾ, ನಾಟಕ ಎನಿಸಬಹುದು. ಆದರೆ, ಹೀಗೆಲ್ಲ ಇಡೀ ದಿನ ಸುಸ್ತೋ ಸುಸ್ತು ಎನಿಸುತ್ತಿದ್ದರೆ ಅದರ ಹಿಂದೆ ಗಂಭೀರ ಕಾರಣಗಳಿರಬಹುದು. ಅದು ನಿಮ್ಮ ಆರೋಗ್ಯದ ಬಗ್ಗೆ ಏನನ್ನೋ ಹೇಳುತ್ತಿರಬಹುದು. 

Latest Videos

undefined

'ಆ' ಸಮಯದಲ್ಲಿ ನೋವಾಗುತ್ತಾ? ಈ ನಂಬಿಕೆಗಳಿಗೆ ಹೇಳಿ ಗುಡ್‌ ಬೈ!

ನಮಗೆಲ್ಲರಿಗೂ ಆಗಾಗ ಸ್ವಲ್ಪ ಸುಸ್ತಾಗುವುದು ನಾರ್ಮಲ್. ಒಂದು ನಿದ್ದೆ ಮಾಡೆದ್ದರೆ ಫ್ರೆಶ್ ಆಗಿ ಬಿಡುತ್ತೇವೆ. ಆದರೆ, 10ರಲ್ಲಿ ಒಬ್ಬರಿಗೆ ಹಾಗಾಗುವುದಿಲ್ಲ. ಅವರಿಗೆ ಎಷ್ಟು ನಿದ್ದೆ ಮಾಡೆದ್ದರೂ ಸುಸ್ತು ಹೋಗುವುದಿಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ವೈದ್ಯರನ್ನು ಕಾಣಿ. ಅದಕ್ಕೆ ಈ ಕಾರಣಗಳಿರಬಹುದು. 

1. ಐರನ್ ಕೊರತೆ

ಇಡೀ ದಿನ ಸುಸ್ತೆನಿಸುತ್ತಿದದ್ದರೆ ಫುಲ್ ಬ್ಲಡ್ ಕೌಂಟ್ ಚೆಕಪ್ ಮಾಡಿಸಿ.  ಇದು ದೇಹದಲ್ಲಿರುವ ಕೆಂಪು ಹಾಗೂ ಬಿಳಿ ರಕ್ತ ಕಣಗಳ ಮಟ್ಟವನ್ನು ಲೆಕ್ಕ ಹಾಕುತ್ತದೆ. ಇದರೊಂದಿಗೆ ವಿಟಮಿನ್ ಬಿ12 ಹಾಗೂ ಫೆರಾಟಿನ್ ಮಟ್ಟವನ್ನೂ ಚೆಕ್ ಮಾಡಲು ಹೇಳಿ. ಏಕೆಂದರೆ ರಕ್ತದಲ್ಲಿ ಐರನ್ ಹಿಡಿದಿಟ್ಟುಕೊಳ್ಳುವ ಪ್ರೋಟೀನ್ ಇದೇ ಆಗಿದೆ. ಇವೆರಡು ಕಡಿಮೆ ಇದ್ದಾಗ ಐರನ್ ಮಟ್ಟ ಕಡಿಮೆ ಇರುತ್ತದೆ. ಐರನ್ ಕಡಿಮೆ ಇದ್ದಾಗ ಸುಖಾಸುಮ್ಮನೆ ಸುಸ್ತೆನಿಸುತ್ತದೆ. 

2. ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆಯಿಂದಲೂ ನಿಮಗೆ ಹೀಗೆ ಸುಸ್ತಾಗುತ್ತಿರಬಹುದು. ಪ್ರತಿ 1000ದಲ್ಲಿ 15 ಮಹಿಳೆಯರು ಥೈರಾಯ್ಡ್‌ನಿಂದ ಬಳಲುತ್ತಾರೆ. ನೀವು ಫುಲ್ ಬ್ಲಡ್ ಕೌಂಟ್ ಟೆಸ್ಟ್ ಮಾಡಿಸಿದಾಗಲೇ ಥೈರಾಯ್ಡನ್ನು ಕೂಡಾ ಪರೀಕ್ಷಿಸುವಂತೆ ಹೇಳಿ. ಐಯೋಡಿನ್ ಕೊರತೆಯಿಂದ, ಅದರಲ್ಲೂ ಗರ್ಭಿಣಿ ಮಹಿಳೆಯರು ಹಾಗೂ ಹೆಚ್ಚು ಡೈರಿ ಉತ್ಪನ್ನಗಳನ್ನು ಸೇವಿಸದ ಟೀನೇಜ್ ಹುಡುಗಿಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಥೈರಾಯ್ಡ್ ಹೆಲ್ತ್ ಕಾಪಾಡುವಲ್ಲಿ ಹಾಲಿನ ಪಾತ್ರ ಬಹಳ ದೊಡ್ಡದು. 

3. ಮೆಗ್ನೀಶಿಯಂ ಕೊರತೆ

ನರಗಳ ಆರೋಗ್ಯ ಹಾಗೂ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ  ನೋಡಿಕೊಳ್ಳುವಲ್ಲಿ ಮೆಗ್ನೀಶಿಯಂ ಬಹು ಮುಖ್ಯವಾದ ಮಿನರಲ್. ರಕ್ತದಲ್ಲಿ ಸಕ್ಕರೆ ಮಟ್ಟ ಕಾಯ್ದುಕೊಳ್ಳುವಲ್ಲಿ ಕೂಡಾ ಇದೇ ಮಿನರಲ್ ಪಾತ್ರ ವಹಿಸುತ್ತದೆ. ಜೊತೆಗೆ, ದೇಹದಲ್ಲಿ ಎನರ್ಜಿ ಉತ್ಪಾದಿಸುವ ಅಡಿನೋಸಿನ್ ಟ್ರೈ ಫಾಸ್ಪೇಟ್ ತಯಾರಿಕೆ ಮೆಗ್ನೀಶಿಯಂ ಇಲ್ಲದೆ ಸಾಧ್ಯವಿಲ್ಲ. ಹಾಗಾಗಿ, ಮೆಗ್ನೀಶಿಯಂ ಕೊರತೆಯಾದಾಗ ಎನರ್ಜಿ ಇಲ್ಲದಂತೆನಿಸುತ್ತದೆ. ಮೆಗ್ನೀಶಿಯಂ ಕೊರತೆಯನ್ನು ಪರೀಕ್ಷಿಸುವುದು ಕಷ್ಟ. ಆದರೆ ಸುಸ್ತು, ಮಸಲ್ ಕ್ರ್ಯಾಂಪ್, ನೋವುಗಳು, ರೆಸ್ಟ್‌ಲೆಸ್ ಕಾಲುಗಳು, ನಿದ್ರಾ ಸಮಸ್ಯೆಗಳು, ನಕಾರಾತ್ಮಕ ಯೋಚನೆಗಳು- ಮೆಗ್ನೀಶಿಯಂ ಕೊರತೆಯ ಲಕ್ಷಣಗಳು. ಇಂಥದ್ದು ಕಂಡುಬಂದಾಗ ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳಾದ ಅವಕಾಡೋ, ಡ್ರೈ ಫ್ರೂಟ್ಸ್, ನಟ್ಸ್, ಕಾಳುಗಳ ಸೇವನೆ ಸಹಾಯಕ್ಕೆ ಬರುತ್ತದೆ.

ಆ ಟೈಮಲ್ಲಿ ಅಂಡರ್‌ವೈರ್ ಬ್ರಾಗಳಿಗೆ ಹೇಳಿ ಬೈ ಬೈ!

4. ವೈರಲ್ ಫೇಟಿಗ್

ಇಷ್ಟೆಲ್ಲ ತಪಾಸಣೆಯಾಗಿ, ಮೆಗ್ನೀಶಿಯಂ ರಿಚ್ ಆಹಾರ ಸೇವಿಸಿದದ ಮೇಲೂ ಸುಸ್ತೆನಿಸುತ್ತಿದ್ದರೆ, ನಮ್ಮ ದೇಹದಲ್ಲಿ ಆಹಾರವನ್ನು ಎನರ್ಜಿಯಾಗಿ ಪರಿವರ್ತಿಸುವ ಮೈಟೋಕಾಂಡ್ರಿಯಾ ಮೇಲೆ ವೈರಸ್ ಅಟ್ಯಾಕ್ ಮಾಡಿರಬಹುದು. ಇದರ ಇತರೆ ಲಕ್ಷಣಗಳೆಂದರೆ ಗ್ಯಾಸ್ ಹಾಗೂ ಹೊಟ್ಟೆ ತೊಳೆಸುವುದು. ಔಷಧೀಯ ಎಲೆಗಳ ಸೇವನೆಯಿಂದ ಈ ವೈರಸ್ಸನ್ನು ಹೊಡೆದೋಡಿಸಬಹುದು. ವೈದ್ಯರ ಸಹಾಯ ಪಡೆಯಬಹುದು.

5.  ಗ್ಯಾಜೆಟ್ಸ್

ನಿಮ್ಮ ಟಿವಿ, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ. ಅದರಲ್ಲೂ ಮಲಗುವ 1 ಗಂಟೆ ಮುಂಚೆ ಇವುಗಳಲ್ಲಿ ಯಾವುದರ ಬಳಕೆಯೂ ಬೇಡ. ಏಕೆಂದರೆ, ಮಲಗುವ ಹೊತ್ತಿನಲ್ಲಿ ಇವುಗಳ ಬಳಕೆಯಿಂದ ನಿದ್ದೆಯ ಸೈಕಲ್ ಏರುಪೇರಾಗುತ್ತದೆ. ಅಷ್ಟೇ ಅಲ್ಲ, ಇದರ ನೀಲಿ ಲೈಟ್ ಪಿಟ್ಯುಟರಿ ಗ್ರಂಥಿಯ ಮೇಲೆ ಪರಿಣಾಮ ಬೀರಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವಂತಾಗುತ್ತದೆ. ಇದರಿಂದಲೂ ದೇಹ ಎನರ್ಜಿಹೀನವಾಗಬಹುದು. 

6. ಖಿನ್ನತೆ

ಸದಾ ಸುಸ್ತೆನಿಸುವುದು ದೈಹಿಕ ಸಮಸ್ಯೆ ಎಂದು ನಾವೆಂದುಕೊಳ್ಳುತ್ತೇವೆ. ಆದರೆ, ಇದು ಖಿನ್ನತೆಯ ಕಾರಣಕ್ಕೂ ಆಗುತ್ತಿರಬಹುದು. ಆದ್ದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಮೂಡ್ ಡಲ್ಲಾಗಿರುವುದು, ಯಾರನ್ನೂ ಭೇಟಿಯಾಗಲು ಮನಸ್ಸಿಲ್ಲದಿರುವುದು ಮುಂತಾದ ಕಾರಣಗಳಿಂದ ಸುಸ್ತೆನಿಸುತ್ತಿದ್ದರೆ ತಕ್ಷಣ ಮಾನಸಿಕ ತಜ್ಞರ ಸಹಾಯ ಪಡೆಯಿರಿ.  

click me!