ಸ್ಟಾರ್ ನಟಿಯರ ಸೌಂದರ್ಯದ ಗುಟ್ಟು ಹಕ್ಕಿ ಪಿಕ್ಕೆ...

By Web Desk  |  First Published Jun 14, 2019, 11:28 AM IST

ಹಕ್ಕಿ ಹಿಕ್ಕೆಯಿಂದ ಸೌಂದರ್ಯವೇ.... ಛೀ ಎಂದು ಹೇಳಬಹುದು ... ಕೇಳಲು ಅಸಹ್ಯ ಎನಿಸಬಹುದು ಆದರೆ ಇದರಿಂದ ಮುದ್ದು ಮುದ್ದಾದ ಮುಖ ನಿಮ್ಮದಾಗುತ್ತದೆ , ನಟನಟಿಯರೂ ಇದನ್ನೇ ಬಳಸುತ್ತಾರಂತೆ! ಇದರಿಂದೇನು ಪ್ರಯೋಜನ?


ಏನೇನೋ ಚಿತ್ರ ವಿಚಿತ್ರ ಫೇಷಿಯಲ್‌ಗಳಿವೆ. ಅವುಗಳಲ್ಲಿ ಹಕ್ಕಿ ಹಿಕ್ಕೆಯಿಂದ ಮಾಡಿದ ಫೇಷಿಯಲ್ ಕೂಡ ಒಂದು. ಈ ಫೇಷಿಯಲ್ ಬಗ್ಗೆ ಕೇಳಲು ವಿಚಿತ್ರ ಎನಿಸಿದರೂ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಟಿಯರು ಯಾವಾಗಲೂ ಚಿರ ಯೌವ್ವನ ಹಾಗೆ ಉಳಿಸಿಕೊಳ್ಳಲು ಬೇರೆ ಬೇರೆ ಥೆರಪಿ ಮಾಡುತ್ತಾರೆ. ಅದರಲ್ಲಿ ಇದು ಮುಖ್ಯವಾಗಿದೆ. 

ಕಾಂತಿಯುತ ಕೂದಲಿಗೆ ಕೆಫಿನ್ ಟ್ರೀಟ್ಮೆಂಟ್!

ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಥೆರಪಿ ಹೆಸರುವಾಸಿ. ಜನಪ್ರಿಯ ಫ್ಯಾಷನ್ ಡಿಸೈನರ್ ವಿಕ್ಟೊರಿಯಾ ಬೆಹಕಂ ಎಂಗ್ ಆಗಿ ಕಾಣುವುದೂ ಈ ಥೆರಪಿಯಿಂದಲೇ. ಈ ಥೆರಪಿ ಜಪಾನ್‌ನಲ್ಲಿ ತುಂಬಾ ಫೇಮಸ್. ಇದರಲ್ಲಿ ಹಕ್ಕಿ ಹಿಕ್ಕೆಯನ್ನು ಮುಖದ ಮೇಲೆ ಹಾಕಿ ಅದರಿಂದ ಮಸಾಜ್ ಮಾಡಲಾಗುತ್ತದೆ. 

ಈ ಥೆರಪಿಯಲ್ಲಿ ಮೊದಲಿಗೆ ಹಕ್ಕಿ ಹಿಕ್ಕೆಯನ್ನು ಒಣಗಿಸಲಾಗುತ್ತದೆ. ಇದರಿಂದ  ಹಿಕ್ಕೆ ಕೀಟಾಣು ಮುಕ್ತವಾಗುತ್ತದೆ. ನಂತರ ಅದನ್ನು ಪುಡಿ ಮಾಡಿ, ಫೇಷಿಯಲ್ ಮಾಡಲು ಬಳಸುತ್ತಾರೆ. 

ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?

Tap to resize

Latest Videos

ಜೊಜೊಬಾ ಎಣ್ಣೆ ಏನೂ ಜುಜುಬಿಯಲ್ಲ, ತ್ವಚಾ ಆರೋಗ್ಯಕ್ಕೆ ಬೇಕೇ ಬೇಕು...

- ಈ ಫೇಷಿಯಲ್ ಮಾಡುವುದರಿಂದ ತ್ವಚೆ ತುಂಬಾ ಸ್ಮೂತ್ ಆಗುತ್ತದೆ. ಜೊತೆಗೆ ಇದು ಹೀಲಿಂಗ್ ಪ್ರಕ್ರಿಯೆಯಲ್ಲಿ ಹೆಚ್ಚು ಕೆಲಸ ಮಾಡುತ್ತೆ.

- ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ. ಇದರಿಂದ ಸ್ಕಿನ್ ಕ್ಲಿಯರ್ ಆಗುತ್ತದೆ. 

- ನಿಯಮಿತವಾಗಿ ಇದನ್ನು ಬಳಸುವುದರಿಂದ ತ್ವಚೆ ಹೊಳೆಯುತ್ತದೆ. 

- ಈ ಫೇಷಿಯಲ್  ಒಂದು ಸಾರಿ ಮಾಡಿದರೆ 14 ರೂಪಾಯಿ ರೂ. ಖರ್ಚಾಗುತ್ತದೆ. ಅಷ್ಟೊಂದು ದುಬಾರಿ ಈ ಟ್ರೀಟ್‌ಮೆಂಟ್ ಇದು. ಅದಕ್ಕಾಗಿ ಸೆಲೆಬ್ರಿಟಿಗಳೇ ಇದನ್ನು ಹೆಚ್ಚು ಬಳಸುತ್ತಾರೆ.

ನೀವೂ ಎಂಗ್ ಆಗಿ ಕಾಣಬಯಸಿದರೆ , ಅಷ್ಟೊಂದು ಹಣ ಖರ್ಚು ಮಾಡಲು ಶಕ್ತರಾಗಿದರೆ, ಇದನ್ನು ಟ್ರೈ ಮಾಡಿ. 

ಶೇವಿಂಗ್ ಬಳಿಕ ತ್ವಚೆ ತುರಿಸುತ್ತದೆಯೇ? ಹೀಗ್ ಮಾಡಿ

click me!