ಸೀರೆಗಳೆಂದರೆ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಅವರ ವಾರ್ಡ್ ರೋಬ್ ಗಳಲ್ಲಿ ಸೀರೆಗಳಿಲ್ಲ ಅಂದರೆ ಅದಕ್ಕೆ ಶೋಭೆಯೇ ಇರುವುದಿಲ್ಲ. ದುಬಾರಿ ಸೀರೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದು ಹಾಳಾಗುವುದು ಗ್ಯಾರಂಟಿ. ಸೀರೆಗಳು ಹಾಳಾಗದಂತೆ ನಿರ್ವಹಿಸುವುದು ಹೇಗೆ? ಇಲ್ಲಿದೆ ಟಿಪ್ಸ್ ಗಳು.
ಬೆಂಗಳೂರು (ಸೆ. 23): ಸೀರೆಗಳೆಂದರೆ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಅವರ ವಾರ್ಡ್ ರೋಬ್ ಗಳಲ್ಲಿ ಸೀರೆಗಳಿಲ್ಲ ಅಂದರೆ ಅದಕ್ಕೆ ಶೋಭೆಯೇ ಇರುವುದಿಲ್ಲ. ದುಬಾರಿ ಸೀರೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದು ಹಾಳಾಗುವುದು ಗ್ಯಾರಂಟಿ. ಸೀರೆಗಳು ಹಾಳಾಗದಂತೆ ನಿರ್ವಹಿಸುವುದು ಹೇಗೆ? ಇಲ್ಲಿದೆ ಟಿಪ್ಸ್ ಗಳು.
ಆಗಾಗ ಗಳಿಗೆಗಳನ್ನು ಬದಲಾಯಿಸಿ
ವಾರ್ಡ್ ರೋಬಲ್ಲಿ ಒಮ್ಮೆ ಮಡಚಿಟ್ಟ ಸೀರೆಗಳನ್ನು ಬಹಳ ದಿನಗಳಾದರೂ ತೆಗೆಯದೇ ಇದ್ದರೆ ಹಾಗೆಯೇ ಮಾರ್ಕ್ ಬಿದ್ದು ಬಿಡುತ್ತದೆ. ಆಗಾಗ ತೆಗೆದು ಎಳೆ ಬಿಸಿಲಿಗೆ ಹಾಕಿ ಫೋಲ್ಡ್ ಬದಲಾಯಿಸಿ ತೆಗೆದಿಡಿ.
ಲೋಹದ ಹ್ಯಾಂಗರ್ ಗಳನ್ನು ಬಳಸಬೇಡಿ
ಸೀರೆಗಳನ್ನು ಲೋಹದ ಹ್ಯಾಂಗರ್ ಗಳಲ್ಲಿ ಹಾಕಿಡಬಾರದು. ಅದು ರೇಷ್ಮೇ ಸೀರೆಗಳನ್ನು, ಝರಿ ಸೀರೆಗಳನ್ನು ಬೇಗ ಹಾಳು ಮಾಡಿ ಬಿಡುತ್ತದೆ.
ನ್ಯಾಫ್ತಲೀನ್ ಗುಳಿಗೆ (ಡಾಂಬರ್ ಗುಳಿಗೆ)
ಸೀರೆಗಳನ್ನು ಎಷ್ಟೇ ಜೊಆಪಾನ ಮಾಡಿಟ್ಟರೂ ಸಣ್ಣ ಸಣ್ಣ ಹುಳುಗಳು ಕಬೋರ್ಡ್ ಒಳಗೆ ಸೇರಿಕೊಂಡು ಬಿಡುತ್ತದೆ. ಅವು ಸೀರೆಗಳನ್ನು ಹಾಳು ಮಾಡಿ ಬಿಡುತ್ತವೆ. ಅವುಗಳನ್ನು ತಡೆಯಲು ನ್ಯಾಫ್ತಲೀನ್ ಬಾಲ್ ಗಳನ್ನು (ಡಾಂಬರ್ ಗುಳಿಗೆ ) ಗಳನ್ನು ಬಳಸಿ. ನೇರವಾಗಿ ಸೀರೆಗಳ ಮೇಲೆ ಇಡಬೇಡಿ. ಸಣ್ಣ ಪೇಪರ್ ನಲ್ಲಿ ಸುತ್ತಿ ಬಟ್ಟೆ ಮಧ್ಯೆಯಿಡಿ.
ಸುಡು ಬಿಸಿಲಿಗೆ ಹಾಕಬಾರದು
ರೇಷ್ಮೆ ಸೀರೆಗಳನ್ನು, ಜರಿ ಸೀರೆಗಳನ್ನು ಜಾಸ್ತಿ ಸುಡು ಬಿಸಿಲಿಗೆ ಹಾಕಬಾರದು. ಎಳೆ ಬಿಸಿಲಿಗೆ ಹಾಕಿ ತೆಗೆದಿಡಬೇಕು.