
ಆಟೋ, ಕ್ಯಾಬ್ ಹಿಡಿಯಬೇಕೆಂದ್ರೆ ತಲೆ ನೋವಿನ ಕೆಲಸ. ಯಾಕೆಂದ್ರೆ ಅನೇಕ ಚಾಲಕರು ನಾವು ಹೇಳಿದಲ್ಲಿಗೆ ಬರೋದಿಲ್ಲ ಎಂಬ ಆರೋಪವನ್ನು ನಾವು ನಿತ್ಯ ಕೇಳ್ತೇವೆ. ಈಗ ಓಲಾ, ಉಬರ್ ಸೇರಿದಂತೆ ಅನೇಕ ಇ ಬುಕ್ಕಿಂಗ್ ಸಾರಿಗೆ ಲಭ್ಯವಿದೆ. ಆದ್ರೆ ಅಲ್ಲಿ ಕೂಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಟೋ ಅಥವಾ ಕ್ಯಾಬ್ ಬುಕ್ ಏನೋ ಆಗಿರುತ್ತೆ. ಆದ್ರೆ ಚಾಲಕರು ರೈಡಿಂಗ್ ಕ್ಯಾನ್ಸಲ್ ಮಾಡ್ತಾರೆ. ತಡ ರಾತ್ರಿ ಹಾಗೂ ಅನೇಕ ಏರಿಯಾಕ್ಕೆ ಈ ಚಾಲಕರು ಬರೋದಿಲ್ಲ. ತಮ್ಮ ಏರಿಯಾಗಿಂತ ದೂರಕ್ಕೆ ಪ್ರಯಾಣ ಬೆಳೆಸಬೇಕು ಎಂದಾಗ ಅಥವಾ ಬೇರೆ ಕಾರಣಕ್ಕೆ ಚಾಲಕರು ರೈಡಿಂಗ್ ಕ್ಯಾನ್ಸಲ್ ಮಾಡ್ತಾರೆ. ಹಾಗಂತ ಎಲ್ಲ ಚಾಲಕರು ರೈಡಿಂಗ್ ಕ್ಯಾನ್ಸಲ್ ಮಾಡೋದಿಲ್ಲ. ಕೆಲವರು ಜನರ ಸೇವೆಗೆ ಸದಾ ಸಿದ್ಧರಿರುತ್ತಾರೆ.
ಸಾಮಾಜಿಕ ಜಾಲತಾಣ (Social Media ) ದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ಇಂಟರೆಸ್ಟಿಂಗ್ ವಿಷ್ಯಗಳು ವೈರಲ್ (Viral) ಆಗ್ತಿರುತ್ತವೆ. ಈಗ ಉಬರ್ ಚಾಲಕನೊಬ್ಬನ ಕಥೆ ವೈರಲ್ ಆಗಿದೆ. ಆತ ಗರ್ಭಿಣಿ (Pregnant) ಯೊಬ್ಬಳ ಜೀವ ಉಳಿಸಿದ ನಂತ್ರ ತನ್ನ ಕೆಲಸವೇನು ಎಂಬುದನ್ನು ಅರಿತಿದ್ದಾನೆ. ಚಾಲಕರ ಕೆಲಸ ಕೇವಲ ಗ್ರಾಹಕರನ್ನು ಅವರ ಗಮ್ಯಸ್ಥಾನಕ್ಕೆ ಸೇರಿಸುವುದಲ್ಲ. ಅವರ ಸುರಕ್ಷತೆ ಜೊತೆಗೆ ಅವರ ಸಮಸ್ಯೆಯನ್ನು ಅರಿಯಬೇಕಾಗುತ್ತದೆ. ಗರ್ಭಿಣಿ, ವೃದ್ಧರು, ಅನಾರೋಗ್ಯಕ್ಕೊಳಗಾದವರು, ಸಮಸ್ಯೆಯಲ್ಲಿರುವವರಿಗೆ ಸ್ಪಂದಿಸುವ ಕೆಲಸವನ್ನು ಅವರು ಮಾಡ್ತಾರೆ. ಈ ವಿಷ್ಯ ಅರಿತ ಚಾಲಕ (Driver) ನೊಬ್ಬ 17 ವರ್ಷಗಳಿಂದ ಚಾಲನೆಯನ್ನೇ ತನ್ನ ಉದ್ಯೋಗವಾಗಿ ಮಾಡಿಕೊಂಡು ಅದನ್ನು ಪ್ರೀತಿಸ್ತಿದ್ದಾನೆ, ಗೌರವಿಸುತ್ತಿದ್ದಾನೆ. ಅಷ್ಟಕ್ಕೂ ಆತ ಚಾಲಕ ವೃತ್ತಿಯನ್ನು ಅಪ್ಪಿಕೊಳ್ಳಲು ಬಲವಾದ ಕಾರಣವಿದೆ.
'ಹಾರ್ಟ್‌ಬ್ರೇಕ್ ಇನ್ಶುರೆನ್ಸ್ ಫಂಡ್' ಮಾಡಿಸಿದ್ದ ಲವರ್ಸ್, ಬ್ರೇಕ್‌ಅಪ್ ಆದಾಗ ಹುಡುಗನಿಗೆ ಸಿಕ್ತು 25 ಸಾವಿರ!
ಟ್ವಿಟರ್ ನಲ್ಲಿ ಆ ವ್ಯಕ್ತಿಯ ಕಥೆ ವೈರಲ್ ಆಗಿದೆ. ಸುಮಿತ್ ಮೇಘಾನಿ ಎಂಬುವವರು ತಮ್ಮ ಖಾತೆಯಲ್ಲಿ ಚಾಲಕನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ ಸಿಕ್ಕ ಕ್ಯಾಬ್ ಡ್ರೈವರ್ ಭೇಟಿ ಮಾಡಿ. ನನ್ನ ಜೀವನದಲ್ಲಿ ಇದೊಂದು ಸ್ಪೂರ್ತಿದಾಯಕ ಅನುಭವವಾಗಲಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ @ಪೀಕ್ ಬೆಂಗಳೂರು ಶೀರ್ಷಿಕೆ ಹಾಕಿದ್ದಾರೆ ಸುಮಿತ್.
ಟ್ವಿಟರ್ ನಲ್ಲಿ ವೈರಲ್ ಆದ ಚಾಲಕ : ಟ್ವಿಟರ್ ಖಾತೆದಾರ ಸುಮಿತ್, ಉಬರ್ ಚಾಲಕನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸುಮಿತ್, ಈ ಚಾಲಕನ ಜೊತೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಚಾಲಕನನ್ನು ಮಾತನಾಡಿಸಿದ್ದಾರೆ. ಆಗ ಕೆಲವೊಂದು ಇಂಟರೆಸ್ಟಿಂಗ್ ವಿಷ್ಯ ತಿಳಿದಿದೆ. ಅದನ್ನು ಜನರ ಮುಂದೆ ಹಂಚಿಕೊಳ್ಳಲು ಸುಮಿತ್ ಮುಂದಾಗಿದ್ದಾರೆ. ಉಬರ್ ಚಾಲಕ ಕುಟುಂಬಕ್ಕೆ ಏಕೈಕ ಜೀವನಾಧಾರ ಎಂಬುದು ಗೊತ್ತಾಗಿದೆ. ಹಾಗೆ ಆತ 17 ವರ್ಷಗಳಿಂದ ಚಾಲಕ ಕೆಲಸ ಮಾಡ್ತಿದ್ದಾರೆ ಎಂಬುದು ತಿಳಿದಿದೆ.
Trending News : ಗರ್ಲ್ ಫ್ರೆಂಡ್ ಹೇಳಿದ ಮಾತು ಕೇಳಿ ಸ್ಟಾರ್ ಆದ ಹುಡುಗ
ಚಾಲಕನ ಕಥೆ ಏನು ಗೊತ್ತಾ? : ಒಂದು ದಿನ ಉಬರ್ ನಲ್ಲಿ ಡ್ರೈವಿಂಗ್ ರಿಕ್ವೆಸ್ಟ್ ಬಂದಿದೆ. ಅದನ್ನು ಚಾಲಕ ಕ್ಯಾನ್ಸಲ್ ಮಾಡಿದ್ದ. ಆದ್ರೆ ಮತ್ತೆ ಮತ್ತೆ ಅದರಿಂದಲೇ ರಿಕ್ವೆಸ್ಟ್ ಬರ್ತಾ ಇತ್ತು. ಕೊನೆಯದಾಗಿ ಆತ ರಿಕ್ವೆಸ್ಟ್ ಒಪ್ಪಿಕೊಂಡಿದ್ದಾನೆ. ರಿಕ್ವೆಸ್ಟ್ ಬಂದ ಸ್ಥಳಕ್ಕೆ ಹೋಗಿ ನೋಡಿದಾಗ ಆಕೆ ಗರ್ಭಿಣಿ ಎಂಬುದು ತಿಳಿದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದ್ರೆ ಅಲ್ಲಿ ವೈದ್ಯರಿರಲಿಲ್ಲ. ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಗು ಹಾಗೂ ತಾಯಿ ಇಬ್ಬರ ಜೀವ ಉಳಿದಿದೆ. ಈ ಘಟನೆ ಚಾಲಕನಿಗೆ ದೊಡ್ಡ ಪಾಠ ಕಲಿಸಿದೆ. ಚಾಲಕನಿಗೆ ತನ್ನ ಕೆಲಸ ಡ್ರೈವಿಂಗ್‌ಗಿಂತ ಹೆಚ್ಚಿನದ್ದು ಎಂಬುದು ಅರಿವಾಯಿತು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನನ್ನ ಕೆಲಸವೆಂದು ಆತನಿಗೆ ಮನವರಿಕೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.