ಕಾಫಿ ಮನಸ್ಸನ್ನು ರಿಫ್ರೆಶ್ ಮಾಡುತ್ತೆ ಅಂತ ಗೊತ್ತು. ಆದರೆ, ಕೂದಲನ್ನೂ ಸ್ಟ್ರಾಂಗ್ ಮಾಡುತ್ತೆ ಎನ್ನೋ ವಿಷ್ಯ ಗೊತ್ತಾ? ಹೇಗೆ? ಓದಿ ಈ ಸುದ್ದಿ...
ಕಾಫಿ ನೀಡೋ ಎನರ್ಜಿ ಅಷ್ಟಿಷ್ಟಲ್ಲ. ಕಾಫಿ ಕುಡದರೇನೇ ಕೆಲಸಕ್ಕೆ ಅನೇಕರಿಗೆ ಸ್ಫೂರ್ತಿ. ಮನಸ್ಸನ್ನು ಫ್ರೆಶ್ ಆಗಿಡೋ ಈ ಕಾಫಿ ಕುಡಿಯೋದರಿಂದ ಕೂದಲು ಉದುರುವುದು, ಬೆಳವಣಿಗೆ ಕುಂಠಿತ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಕಾಫಿಯಲ್ಲಿರುವ ಕೆಲವೊಂದು ತತ್ವಗಳು ಕೂದಲು ಆರೋಗ್ಯವಾಗಿರಲು ಹಾಗೂ ಸ್ಟ್ರಾಂಗ್ ಆಗಿರಲು ಸಹಕರಿಸುತ್ತದೆ. ಇದರ ಸೇವನೆಯಿಂದ ಮೆದುಳು ಸ್ಟ್ರೆಸ್ ಫ್ರೀ ಆಗುತ್ತದೆ. ಇನ್ನೇನಿವೆ ಪ್ರಯೋಜನ?
undefined
ಕೂದಲ ಆರೋಗ್ಯಕ್ಕೆ ಭೃಂಗರಾಜನೆಂಬ ಆಪ್ತ...
ಕಾಫಿಯಲ್ಲಿರುವ ಕೆಫೆನ್ ಕೂದಲನ್ನು ಬೆಳೆಸುತ್ತದೆ. ಕೆಫೆನ್ ಶರೀರದಲ್ಲಿ ಕೂದಲನ್ನು ದುರ್ಬಲಗೊಳಿಸುವ ಫೋಸ್ಫೋಡಿಸ್ರೇಸ್ ಎಂಜೈಮ್ ಅನ್ನು ಹೆಚ್ಚಿಸುವುದನ್ನು ತಡೆಯುತ್ತದೆ.
ಫೋಸ್ಫೋಡಿಸ್ರೇಸ್ ಎಂಜೈಮ್ ಶರೀರದಲ್ಲಿದ್ದರೆ, ಸೈಕ್ಲಿಕ್ ಎಡನೋಸೀಸ್ ಮೋನೋಫಾಸ್ಪೆಕ್ಟ್ ಹೆಚ್ಚುತ್ತದೆ. ಇದರಿಂದ ಕೂದಲು ಬೆಳೆಯುತ್ತದೆ. ಕೆಫೆನ್‌ನಲ್ಲಿ ಕೂದಲನ್ನು ಹೊಳೆಯುವಂತೆ ಮಾಡುವ ಹಾಗೂ ಸ್ಟ್ರಾಂಗ್ ಆಗಿಸುವ ಗುಣವಿದೆ. ಕೆಫೆನ್ ದೇಹದೊಳಗೆ ಹೋದಾಗ ಶರೀರದ ರೋಮ ಕೂಪದಲ್ಲಿ ಉಂಟಾಗುವ ಸಮಸ್ಯೆ ನಿವಾರಿಸಿ, ಕೇಶವನ್ನು ಸಮೃದ್ಧವಾಗಿ ಬೆಳೆಸುತ್ತದೆ.