ಕೂದಲು ತುಂಬಾ ಉದುರುತ್ತಿದ್ದರೆ, ತುಂಡಾಗುತ್ತಿದ್ದರೆ ಈ ಬಗ್ಗೆ ತುಂಬಾ ಯೋಚನೆ ಮಾಡಬೇಡಿ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕೂದಲು ಉದುರುವುದಕ್ಕೆ ಹಲವಾರು ಆಯುರ್ವೇದಿಕ್ ಔಷಧಿ, ಎಣ್ಣೆ ಬಂದಿವೆ. ಅವುಗಳಲ್ಲಿ ಭೃಂಗರಾಜ ಇದೆ ಎಂದು ಹೇಳಲಾಗುತ್ತದೆ. ಇಂಥ ಎಣ್ಣೆ ಕೊಳ್ಳೋ ಬದಲು, ಮನೆಯಲ್ಲಿಯೇ ಇದನ್ನು ತಯಾರಿಸಿ...

ಈ ಎಣ್ಣೆಯಿಂದ ಕೂದಲು ಉದುರುವುದು, ಬಿಳಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ತೆಲೆಹೊಟ್ಟು, ಕೆರೆತ ಸಮಸ್ಯೆಯೂ ದೂರವಾಗುತ್ತವೆ. ಇದನ್ನು ತಯಾರಿಸೋದು ಹೇಗೆ?

  • ಮೊದಲಿಗೆ ಭೃಂಗರಾಜದ ಎಲೆಗಳನ್ನು ಚೆನ್ನಾಗಿ ಜಜ್ಜಿ ರಸ ತೆಗೆದಿಟ್ಟುಕೊಳ್ಳಿ. 
  • ಈ ರಸವನ್ನು ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆಯಲ್ಲಿ ಹಾಕಿ ಮಿಕ್ಸ್ ಮಾಡಿ. 
  • ಈಗ ಎರಡನ್ನು ಸಣ್ಣ ಬೆಂಕಿಯಲ್ಲಿ ಬಿಸಿ ಮಾಡಿ. 
  • ರಸ ಚೆನ್ನಾಗಿ ಎಣ್ಣೆಯಲ್ಲಿ ಮಿಕ್ಸ್ ಆಗಿ, ಕೇವಲ ಎಣ್ಣೆ ಮಾತ್ರ ಉಳಿದ ಮೇಲೆ ಅದನ್ನು ಸ್ಟೌನಿಂದ ಇಳಿಸಿ. 
  • ಕೂದಲು ಉದುರುವ ಸಮಸ್ಯೆ ಇದ್ದರೆ ಈ ಎಣ್ಣೆಗೆ ನೆಲ್ಲಿಕಾಯಿ ರಸವನ್ನೂ ಬೆರೆಸಿ. ಇದರಿಂದ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ.