
ದಾಸವಾಳದ ಗಿಡವನ್ನು ಸಾಮಾನ್ಯವಾಗಿ ಎಲ್ಲರ ಮನೆಯಂಗಳದಲ್ಲಿಯೂ ಕೂಡ ಕಾಣಬಹುದಾಗಿದೆ. ಇದೊಂದು ಪೊದೆ ರೀತಿಯಾದ ಸಸ್ಯವಾಗಿದ್ದು, ಇದರ ಭಾಗಗಳೆಲ್ಲವೂ ಕೂಡ ಔಷಧೀಯ ಆಗರವಾಗಿದೆ. ಇದರಲ್ಲಿ ಅನೇಕ ರೀತಿಯಾದ ಆರೋಕ್ಯಕಾರಿಯಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ದಾಸವಾಳದ ಉಪಯೋಗಗಳು
*ದಾಸವಾಳದ ಹೂವನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಶೋಧಿಸಿ, ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ, ಕಪ್ಪಾಗಿ ಬೆಳೆಯುತ್ತದೆ.
*ಇದರ ಹೂವುಗಳನ್ನು ಗೋ ಮೂತ್ರದಲ್ಲಿ ರುಬ್ಬಿ ತಲೆಗೆ ಹಚ್ಚುವುದರಿಂದ ನೆರೆಗೂದಲು ಕಡಿಮೆಯಾಗುತ್ತದೆ.
*ದಾಸವಾಳ ಮೊಗ್ಗನ್ನು ಹಾಲಿನಲ್ಲಿ ಅರೆದು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಾಗುವ ಅತಿಯಾದ ರಕ್ತಸ್ರಾವ ಕಡಿಮೆಯಾಗುತ್ತದೆ.
ದಾಸವಾಳದ ಪುಷ್ಪವನ್ನು ಬಾಯಿ ಹುಣ್ಣು ಇದ್ದಲ್ಲಿ ಚೆನ್ನಾಗಿ ಅಗಿದು ತಿನ್ನುವುದು ಉಪಯುಕ್ತ.
ತಲೆಹೊಟ್ಟಿಗೆ ದಾಸವಾಳದ ಎಲೆ ಮತ್ತು ಹೂವನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಬೇಕು.
ಬೇಸಗೆ ಸಮಯದಲ್ಲಿ ದಾಸವಾಳದ ಹೂವನ್ನು ರಾತ್ರಿ ನೆನೆಹಾಕಿ ಪ್ರಾತಃಕಾಲದಲ್ಲಿ ಆ ನೀರನ್ನು ಕುಡಿಯುವುದರಿಂದ ದೇಹಕ್ಕೆ ತಂಪಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.