ಖರ್ಜೂರ ರೋಲ್ ಮಾಡುವುದು ಹೇಗೆ?

By Suvarna Web DeskFirst Published Mar 13, 2018, 1:44 PM IST
Highlights

ಡ್ರೈ ಫ್ರೂಟ್ಸ್ ಬಳಸಿ, ಕಡಿಮೆ ತುಪ್ಪದಲ್ಲಿ, ಸಕ್ಕರೆಯನ್ನೂ ಬಳಸದೇ ಮಾಡೋ ಸ್ವೀಟ್ ಇದು. ಸುಲಭವಾಗಿ, ರುಚಿ ರುಚಿಯಾದ, ಅತ್ಯಂತ ಪೌಷ್ಟಿಕವಾದ ಖರ್ಜೂರದ ರೋಲ್ ಮಾಡೋದು ಹೀಗೆ...

ಡ್ರೈ ಫ್ರೂಟ್ಸ್ ಬಳಸಿ, ಕಡಿಮೆ ತುಪ್ಪದಲ್ಲಿ, ಸಕ್ಕರೆಯನ್ನೂ ಬಳಸದೇ ಮಾಡೋ ಸ್ವೀಟ್ ಇದು. ಸುಲಭವಾಗಿ, ರುಚಿ ರುಚಿಯಾದ, ಅತ್ಯಂತ ಪೌಷ್ಟಿಕವಾದ ಖರ್ಜೂರದ ರೋಲ್ ಮಾಡೋದು ಹೀಗೆ...

ಬೇಕಾಗುವ ಸಾಮಾಗ್ರಿಗಳು...
- ಖರ್ಜೂರ ಅರ್ಧ ಕೆ.ಜಿ.
- ಗೋಡಂಬಿ 100 ಗ್ರಾಂ
- ಬಾದಾಮಿ 100 ಗ್ರಾಂ
-ನಾಲ್ಕು ಚಮಚ ತುಪ್ಪ
- ಮಾರಿ ಬಿಸ್ಕತ್

ಮಾಡುವುದು ಹೇಗೆ?

ಬಿಸಿ ತುಪ್ಪದಲ್ಲಿ ಮೊದಲೇ ಹೆಚ್ಚಿಕೊಂಡ ಬಾದಾಮಿಯನ್ನು ಹುರಿದುಕೊಳ್ಳಿ. ಅದೇ ಬಿಸಿ ತುಪ್ಪದಲ್ಲಿ ಗೋಡಂಬಿಯನ್ನೂ ಹುರಿದುಕೊಳ್ಳಿ. ಅಷ್ಟೇ ತುಪ್ಪದಲ್ಲಿ ಬೀಜ ಬಿಡಿಸಿದ ಖರ್ಚೂರವನ್ನು ತುಸು ಕಾಲ ಮಗುಚಿ. ಖರ್ಚೂರ ತುಸು ಕರಗಿದಂತಾದ ಕೂಡಲೇ, ಅದಕ್ಕೆ ಹುರಿಟ್ಟುಕೊಂಡ ಬಾದಾಮಿ, ಗೊಡಂಬಿಯನ್ನು ಮಿಕ್ಸ್ ಮಾಡಿ. ಇದು ತುಸು ತಣಿದ ಮೇಲೆ, ಪುಡಿ ಮಾಡಿಕೊಂಡ ಮಾರಿ ಬಿಸ್ಕತ್ ಮೇಲೆ ಉರುಳಿಸಿ. 15 ನಿಮಿಷಗಳ ಕಾಲ ಫ್ರೀಜರ್‌ನಲ್ಲಿಡಿ. ಆಮೇಲೆ ಚಾಕುವಿನಿಂದ ಬೇಕಾದ ಶೇಪ್‌ನಲ್ಲಿ ಕಟ್ ಮಾಡಿಕೊಳ್ಳಬಹುದು.
 
click me!