ರತ್ನಗಿರಿ ಬೋರೆಯ ಸೊಗಸು

First Published Jun 19, 2018, 3:39 PM IST
Highlights

ಚಿಕ್ಕಮಗಳೂರಿಗೆ ಹೋದರೆ ಮುಳ್ಳಯ್ಯನ ಗಿರಿ, ಬಾಬಾ ಬುಡನ್‌ಗಿರಿ ಕಡೆ ಹೋಗುವ ಪ್ರವಾಸಿಗರೇ ಹೆಚ್ಚು. ಒಂದೆರಡು ಕಿಲೋಮೀಟರ್ ದೂರದಲ್ಲಿರುವ ರತ್ನಗಿರಿ ಬೋರೆ ಕಡಿಮೆ ಪ್ರವಾಸಿಗರಿಂದ ಕೂಡಿದ ಸುಂದರ ಪ್ರದೇಶ. ಇದಕ್ಕೆ ಮಹಾತ್ಮ ಗಾಂಧಿ ಪಾರ್ಕ್ ಅನ್ನೋ ಹೆಸರೂ ಇದೆ. 

ಗುಡ್ಡವನ್ನೇ ಕಡಿದು ಪಾರ್ಕ್ ಮಾಡಿದ್ದಾರೆ. ಇಲ್ಲಿ ಸಂಗೀತ ಕಾರಂಜಿ, ಮಕ್ಕಳ ರೈಲು, ಆಟದ ಪಾರ್ಕ್‌ಗಳೆಲ್ಲ ಇವೆ. ಆದರೆ ಅವುಗಳಿಗಿಂತ ಹೆಚ್ಚು ಖುಷಿ ನೀಡೋದು ವ್ಯೆ ಪಾಯಿಂಟ್‌ಗಳು. ರತ್ನಗಿರಿ ಬೋರೆಯ ತುದಿಯಲ್ಲಿ ಕಾಳಿ ಗುಡಿ. ಅದರ ಪಕ್ಕದಲ್ಲಿರುವ ವ್ಯೆ ಪಾಯಿಂಟ್‌ನಲ್ಲಿ ಇಡೀ ಚಿಕ್ಕಮಗಳೂರಿನ  ವಿಹಂಗಮ ನೋಟ. ಇನ್ನೊಂದು ಬದಿ, ಅಭೇದ್ಯ ಕೋಟೆಯಂಥ ಪಶ್ಚಿಮಘಟ್ಟಗಳ ಸಾಲು. ಮೋಡ, ಗಾಳಿ, ಮಳೆಗಳಲ್ಲಿ ಪರ್ವತದ ಸೊಗಸು ನೋಡಲು ಖುಷಿ. ಇದು ಚಿಕ್ಕಮಗಳೂರಿನಿಂದ ಎರಡು-ಮೂರು ಕಿಲೋಮೀಟರ್ ದೂರದಲ್ಲಿದೆ. 

click me!