
ಅಸ್ಸಾಂ(ನ.26): ತನ್ನ ತಾಯಿಯನ್ನು ಕಳೆದುಕೊಂಡ ಮರಿ ಆನೆಯೊಂದು ತಾಯಿ ಆನೆಯ ಶವದ ಮುಂದೆ ರೋದಿಸುತ್ತಿರುವ ಹೃದಯ ವಿದ್ರಾವಕ ಘಟನೆ ಅಸ್ಸಾಂ ನಡೆದಿದೆ.
ಸೋನಿತ್ಪುರ್ ಜಿಲ್ಲೆಯ ಪತಾಂಜಲಿ ಮೆಗಾ ಅರ್ಬಲ್ ಮತ್ತು ಪುಡ್ ಪಾರ್ಕ್‌ನಲ್ಲಿ ಆನೆಯೊಂದು ತನ್ನ ಮರಿಯ ಜೊತೆ ಆಹಾರ ಅರಸಿ ಬಂದಿತ್ತು. ಈ ವೇಳೆ ಮರಿಯಾನೆ ಜೊತೆ ಗುಂಡಿಗೆ ಬಿದ್ದ ತಾಯಿ ಆನೆ ಮೃತಪಟ್ಟಿತ್ತು. ತನ್ನ ತಾಯಿಯನ್ನು ಕಳೆದುಕೊಂಡ ಮರಿಯಾನೆ ಆಕ್ರಂದನ ಮುಗಿಲು ಮುಟ್ಟಿತ್ತು.
ಬಳಿಕ ಕ್ರೈನ್ ಸಹಾಯದಿಂದ ತಾಯಿ ಆನೆಯ ಮೃತದೇಹವನ್ನು ಮೇಲತ್ತಲಾಯಿತು. ಇನ್ನು ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದಿದ್ದ ವ್ಯಕ್ತಿಯ ವಿರುದ್ಧ ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.