ಸಿಟ್ಟು ನೆತ್ತಿ'ಗೇರಿದಾಗ ಏನು ಮಾಡಬೇಕು, ಏನು ಮಾಡಬಾರದು : ಇಲ್ಲಿದೆ ಟಿಪ್ಸ್

By Web DeskFirst Published Oct 20, 2016, 7:13 PM IST
Highlights

ಅನಿವಾರ್ಯ ಕಾರಣಗಳಿಂದ ಪ್ರತಿಯೊಬ್ಬರಿಗೂ ಸಿಟ್ಟು ನೆತ್ತಿಗೇರುತ್ತದೆ. ಆಗ ಕುಟುಂಬದ ಮೇಲೋ, ಪ್ರೀತಿ ಪಾತ್ರರ ಮೇಲೋ ಹರಿಹಾಯುತ್ತೇವೆ. ಕೋಪ ನಿಯಂತ್ರಿಸಿಕೊಳ್ಳಲು ಕಲಿಯಬೇಕು ನಿಜ. ಅದಕ್ಕೂ ಮೊದಲು ಸಿಟ್ಟಿಗೆದ್ದ ಸಮಯದಲ್ಲಿ ಏನನ್ನು ಮಾಡಬಾರದು ಎಂಬುದನ್ನು ಅರಿತುಕೊಳ್ಳಲು ಇಲ್ಲಿವೆ ಟಿಪ್ಸ್

1)ಸಂಬಂಧ ಕಡಿತ: ಸಿಟ್ಟು ಬಂದಾಕ್ಷಣ ಸಂಬಂಧ ಕಡಿದುಕೊಳ್ಳುವ ಮಾತನ್ನು ಆಡಬೇಡಿ. ಆ ಕ್ಷಣಕ್ಕೆ ಹೀಗೆ ಹೇಳುವುದರಿಂದ ನಾನೇ ಗೆದ್ದೆ ಎಂದು ಅನಿಸಬಹುದು. ಆದರೆ, ಅದರಿಂದ ದೀರ್ಘಕಾಲ ದುಃಖ ಪಡಬೇಕಾದ ಸ್ಥಿತಿ ಎದುರಾಗಬಹುದು.

 

2) ಕೆಟ್ಟಭಾಷೆ: ನೀವೆಷ್ಟೇ ಕೋಪಿಷ್ಠರಾಗಿ ದ್ದರೂ, ಅದು ಗೊತ್ತಿರುವವರು ಹೊಂದಿಕೊಂಡು ಹೋಗುತ್ತಾರೆ. ಆದರೆ, ಸಿಟ್ಟು ಬಂದಾಗ ಯಾವುದೇ ಕಾರಣಕ್ಕೂ ಅವಾಚ್ಯ ಪದ ಬಳಸಬೇಡಿ. ಬಳಸಿದರೆ ಅದು ಪರಿಸ್ಥಿತಿಯನ್ನು ವಿಕೋಪಕ್ಕೆ ತಳ್ಳಬಹುದು.


3) ನಕಾರಾತ್ಮಕ ಚಿಂತನೆ: ಒಂದು ಬಾರಿ ಸಂಬಂಧ ಕಡಿದರೆ ಮತ್ತೆ ಸಿಗುವುದಿಲ್ಲ. ಹಾಗಾಗಿ, ಕೋಪ ಬಂದಾಗ ನೆಗೆಟಿವ್‌ ಆಗಿ ಯೋಚನೆ ಮಾಡಬೇಡಿ. ಆ ವ್ಯಕ್ತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು, ಕೋಪ ತಣಿಸಲು ಯತ್ನಿಸಿ.


4) ನಡತೆ ಬಗ್ಗೆ ಮಾತು: ಕೋಪದ ಭರದಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಯ ನಡತೆಯ ಬಗ್ಗೆ ಕೆಟ್ಟಮಾತುಗಳನ್ನಾಡುವುದನ್ನು ಮಾಡಲೇಬೇಡಿ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ನೆನಪಿಟ್ಟುಕೊಳ್ಳಿ.


5) ಹೊಯ್‌ ಕೈ ಬೇಡ: ಆತ್ಮೀಯರಲ್ಲಿ ಸಿಟ್ಟಾಗುವುದು ಸಹಜ. ಹಾಗಂತ, ಯಾವುದೇ ಬಲಪ್ರಯೋಗ ಮಾಡಬೇಡಿ. ಹೊಡೆಯುವುದು, ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಕುವುದು ಮಾಡಬೇಡಿ. ಇದರಿಂದ ನಿಮಗೇ ನಷ್ಟ.

 

 

 

 

click me!