ಮಳೆಗಾಲ ಬಂತೆಂದರೆ ಇಷ್ಟ ಪಟ್ಟು ತಿನ್ನುವ ಹಣ್ಣು ನೇರಳೆ. ಇದರ ರಸವನ್ನು ತ್ವಚೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತೆ ಎನ್ನುವ ವಿಷಯವನ್ನು ನೀವು ತಿಳಿದುಕೊಳ್ಳಿ.
ನೇರಳೆ ಹಣ್ಣು ಜಾಮೂನ್, ಇಂಡಿಯನ್ ಬ್ಲಾಕ್ ಬೆರ್ರಿ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲ್ಪಡುವ ಹುಳಿ, ಸಿಹಿಯ ವಿಭಿನ್ನ ರುಚಿಯುಳ್ಳ, ತಿಂದಾಗ ಬಾಯನ್ನು ನೇರಳೆ ಬಣ್ಣಕ್ಕೆ ತಿರುಗಿಸುವ ಹಣ್ಣು. ಈ ಹಣ್ಣನ್ನು ಮತ್ತು ಹಣ್ಣಿನ ಜ್ಯೂಸ್ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ ಅನ್ನೋದು ಗೊತ್ತು . ಆದರೆ ಇದರಿಂದ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ನಿವಾರಣೆಯಾಗುತ್ತೆ ಅನ್ನೋದು ಗೊತ್ತಾ? ಹೇಗೆ ಅನ್ನೋದನ್ನ ನೋಡಿ..
ಪಿಂಪಲ್ ಸಮಸ್ಯೆ ನಿವಾರಿಸುತ್ತದೆ. ಅದಕ್ಕಾಗಿ ಒಣಗಿದ ನೇರಳೆ ಹಣ್ಣಿನ ಬೀಜವನ್ನು ಪುಡಿ ಆದಿ ಅದಕ್ಕೆ ದನದ ಹಾಲನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಪಿಂಪಲ್‌ಗೆ ಹಚ್ಚಿ. ಮರುದಿನ ಬೆಳಗ್ಗೆ ಎದ್ದು ವಾಶ್ ಮಾಡಿ. ಒಂದು ರಾತ್ರಿಯಲ್ಲಿ ಮೊಡವೆ ನಿವಾರಣೆಯಾಗುವುದಿಲ್ಲ. ಅದನ್ನು ನಿಯಮಿತವಾಗಿ ಪಾಲಿಸಬೇಕು.
ಸುಲಭವಾಗಿ ಸಿಗೋ ಈ ಹಣ್ಣು ಹಲವು ರೋಗಕ್ಕೆ ಮಹಾ ಮದ್ದು...!
ಎಣ್ಣೆ ಚರ್ಮದ ಸಮಸ್ಯೆ ನಿವಾರಿಸುತ್ತದೆ. ಅದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ.. ನೇರಳೆ ಹಣ್ಣಿನ ತಿರುಳು, ನೆಲ್ಲಿಕಾಯಿ ರಸ ಮತ್ತು ರೋಸ್ ವಾಟರ್ ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮುಖದ ತೈಲಾಂಶ ಕಡಿಮೆಯಾಗುತ್ತದೆ.
ಮುಖದ ಮೇಲೆ ಡಾರ್ಕ್ ಸ್ಪಾಟ್ ಇದ್ದರೆ ನೇರಳೆ ಬೀಜದ ಪುಡಿ, ನಿಂಬೆ ಪುಡಿ ಮತ್ತು ಕಡ್ಲೆ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ, ಅದಕ್ಕೆ ಸ್ವಲ್ಪ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಡಾರ್ಕ್ ಸ್ಪಾಟ್ ನಿಧಾನವಾಗಿ ಕಡಿಮೆಯಾಗುತ್ತದೆ.
ಹಣ್ಣು, ತರಕಾರಿ ಮೇಲಿನ ಬಿಲ್ ಕೋಡನ್ನು ಇಗ್ನೋರ್ ಮಾಡ್ಬೇಡಿ!
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಸ್ಕಿನ್ ಗ್ಲೋ ಆಗಲು ಸಹಾಯ ಮಾಡುತ್ತೆ. ಅದಕ್ಕಾಗಿ ನೇರಳೆ ಹಣ್ಣಿನ ಜ್ಯೂಸ್ ನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.