ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ!

By Web DeskFirst Published Jun 3, 2019, 12:56 PM IST
Highlights

ವಿಶ್ವದ ಯಾವುದೇ ಟ್ರಾವೆಲರ್‌ಗೆ ಅವರು ಹೋಗಲೇಬೇಕಾದ ದೇಶದ ಹೆಸರುಗಳ ಪಟ್ಟಿ ನೀಡಲು ಕೇಳಿ. ಭಾರತದ ಹೆಸರು ಇದ್ದೇ ಇರುತ್ತದೆ. ಇಲ್ಲಿನ ಆಹಾರ ವೈವಿಧ್ಯದಿಂದ ಹಿಡಿದು ಸಂಸ್ಕೃತಿ, ದೇಗುಲಗಳು ಎಲ್ಲವೂ ಭಾರತವನ್ನು ವಿಶೇಷವಾಗಿಸಿವೆ. ಈಗ ಇಲ್ಲಿಗೆ ಭೇಟಿ ನೀಡಲು ಮತ್ತಷ್ಟು ಕಾರಣಗಳು ಹುಟ್ಟಿಕೊಂಡಿದ್ದು, ಅವುಗಳಲ್ಲಿ ಕೇರಳದ ಬೆಟ್ಟವೊಂದರಲ್ಲಿ ಹರಡಿ ನಿಂತ ಜಗತ್ತಿನ ಅತಿ ದೊಡ್ಡ ಪಕ್ಷಿ ಶಿಲ್ಪವೂ ಸೇರಿಕೊಂಡಿದೆ. 

ಕೇರಳದಲ್ಲೀಗ ಜಯತು ಅರ್ಥ್ ಸೆಂಟರ್‌, ಸೆಂಟರ್ ಆಫ್ ಅಟ್ರ್ಯಾಕ್ಷನ್. ರಾಮಾಯಣದ ಕಥಾ ತುಣುಕೊಂದು ಇಲ್ಲಿನ ಚಡಯಮಂಗಳಮ್ ಹಳ್ಳಿಯ ಬೆಟ್ಟದುದ್ದಕ್ಕೂ ಹಾಸಿ ಹರಡಿ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ಇದೇ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ. ಪ್ರಸಿದ್ಧ ಚಿತ್ರ ನಿರ್ಮಾಪಕ ರಾಜೀವ್ ಅಂಚಲ್ ಇಲ್ಲಿ ರಾಮಾಯಣದಲ್ಲಿ ಬರುವ ಜಯತು ಎಂಬ ಹದ್ದಿನ ಶಿಲ್ಪವನ್ನು ಕೆತ್ತಿದ್ದಾರೆ. ಇದಕ್ಕಾಗಿ ಅವರು ಸುಮಾರು 10 ವರ್ಷಗಳ ಕಾಲ ಸಮಯವನ್ನು ತೆಗೆದುಕೊಂಡಿದ್ದಾರೆ. 

ಸೀತೆಯನ್ನು ರಕ್ಷಿಸಲು ರಾವಣನೊಡನೆ ಗುದ್ದಾಡುವಾಗ ಆಯ ತಪ್ಪಿ ಕೆಳಗೆ ಬಿದ್ದ ಹದ್ದಿನ ಕತೆ ಇಲ್ಲಿ ರೂಪ ತಾಳಿದೆ. ಈ ಶಿಲ್ಪವು ಜಯತುಪರ ಟವರ್ ಮೇಲೆ ಸುಮಾರು 1000 ಅಡಿ ಎತ್ತರದಲ್ಲಿ 2000 ಅಡಿ ಉದ್ದಗಲಕ್ಕೆ ರೆಕ್ಕೆಯನ್ನು ಹರಡಿ ನಿಂತಿದೆ. 

ಹುಡುಗಿಯರು ಸೋಲೋ ಟ್ರಿಪ್‌ ಹೋಗುವುದು ಹೇಗೆ?

'ಮಹಿಳೆಯ ಗೌರವ ರಕ್ಷಿಸುವ ಸಲುವಾಗಿ ಹೋರಾಡಿ ಪ್ರಾಣ ಬಿಡುತ್ತದೆ ಜಯತು. ಅದನ್ನೇ ಇಲ್ಲಿ ಶಿಲ್ಪ ನೆನಪಿಸಬೇಕು. ಇದೊಂದು ಸಾಂಸ್ಕೃತಿಕ ರಾಯಭಾರಿಯಾಗಬೇಕೇ ಹೊರತು ಧಾರ್ಮಿಕ ನೆಲೆಯಾಗಬಾರದು. ಎಲ್ಲ  ಧರ್ಮದ ಪ್ರವಾಸಿಗರೂ ಈ ಶಿಲ್ಪ ನೋಡಲು ಬರುತ್ತಿದ್ದಾರೆ. ಅದು ಹಾಗೇ ಮುಂದುವರೆಯಬೇಕು,' ಎನ್ನುತ್ತಾರೆ ಅಂಚಲ್.

ಹಾಗಂತ ಇಲ್ಲಿ ಕೇವಲ ಹದ್ದಿನ ಶಿಲ್ಪವಷ್ಟೇ ಅಲ್ಲ, ಪ್ರವಾಸಿಗರು ರಾಕ್ ಕ್ಲೈಂಬಿಂಗ್, ರೆಪೆಲ್ಲಿಂಗ್, ಪೇಯಿಂಟ್ ಬಾಲ್ ಹಾಗೂ ರೈಫಲ್ ಶೂಟಿಂಗ್ ಚಟುವಟಿಕೆಗಳನ್ನು ನಡೆಸಿ ಪ್ರವಾಸವನ್ನು ಮತ್ತಷ್ಟು ಎಂಜಾಯ್ ಮಾಡಬಹುದು. ಜೊತೆಗೆ ಮ್ಯೂಸಿಯಂಗೆ ಭೇಟಿ ನೀಡುವುದರೊಂದಿಗೆ ಇಲ್ಲಿನ ಆಯುರ್ವೇದಿಕ್ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಬಹುದು.

ಉರಗದೊಂದಿಗೇ ಸಮರದ ಜೀವನ ನಡೆಸೋ ಗ್ರಾಮವಿದು!

click me!