
ಕಾಮಾಸಕ್ತಿ ಹೆಚ್ಚಲು ಲಿಬಿಡೋ ಎಂಬ ಹಾರ್ಮೋನ್ ಮುಖ್ಯ. ಈ ಹಾರ್ಮೋನ್ ಬಿಡುಗಡೆ ಕಡಿಮೆಯಾದರೆ ಲೈಂಗಿಕ ಆಸಕ್ತಿ ಕುಂದುತ್ತದೆ. ಇದು ದಾಂಪತ್ಯ ಸಮಸ್ಯೆಗೂ ದಾರಿ ಮಾಡಿಕೊಡಬಹುದು. ಹಾಗಾದರೆ ಈ ಹಾರ್ಮೋನ್ ಬಿಡುಗಡೆ ಮಾಡುವುದು ಹೇಗೆ?
ಲಿಬಿಡೊ ಬಿಡುಗಡೆಯಾಗಲು ಹಲವು ವಿಧಾನಗಳಿವೆ. ಅವುಗಳಲ್ಲಿ ಪ್ರಮುಖವಾದದು ಚೈನೀಸ್ ತೆರಪಿ. ಅಂದರೆ ಅಕ್ಯೂ ಪ್ರೆಷರ್. ದೇಹದಲ್ಲಿ ಎರಡು ಪ್ರಮುಖವಾದ ಪಾಯಿಂಟ್‌ಗಳಿವೆ. ಅವುಗಳನ್ನು ತಿಳಿದುಕೊಂಡು ಆ ಪಾಯಿಂಟ್‌ಗೆ ಪ್ರೆಷರ್ ಹಾಕಿದರೆ ಲಿಬಿಡೊ ಬಿಡುಗಡೆಯಾಗುತ್ತದೆ. ಇದರಿಂದ ಕಾಮಾಸಕ್ತಿ ಹೆಚ್ಚುತ್ತದೆ.
ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?
ಶರೀರದಲ್ಲಿ ಲಿಬಿಡೊ ಹಾರ್ಮೋನ್ ಹೆಚ್ಚಿಸಲು ಹೊಟ್ಟೆಯಲ್ಲಿ ನಾಭಿ ಮೇಲೆ ಬೆರಳಿನ ಸಹಾಯದಿಂದ ನಾಲ್ಕು - ಐದು ನಿಮಿಷ ಪ್ರೆಶರ್ ಹಾಕಿ. ಇದೇ ರೀತಿ ನಾಭಿ ಕೆಳಗೂ ಪ್ರೆಷರ್ ಹಾಕಿ. ಹೀಗೆ ಬೆಳಗ್ಗೆ, ಸಂಜೆ ಹತ್ತು ನಿಮಿಷ ಮಾಡಿ. ಇದರಿಂದ ದೇಹದಲ್ಲಿ ಲಿಬಿಡೊ ಹಾರ್ಮೋನ್ ಬಿಡುಗಡೆಯಾಗುತ್ತದೆ.
ಲಿಬಿಡೊ ಹಾರ್ಮೋನ್‌ಗಾಗಿ ಕಿಡ್ನಿ ಪಾಯಿಂಟ್ ತುಂಬಾ ಇಂಪಾರ್ಟಂಟ್. ಕಿಡ್ನಿ ಪಾಯಿಂಟ್ ಆ್ಯಂಕಲ್ ಬೋನ್‌ನಲ್ಲಿ ಇರುತ್ತದೆ. ಆ್ಯಂಕಲ್ ಪಾಯಿಂಟ್ ಮೇಲೆ ಬೆರಳಿನ ಸಹಾಯದಿಂದ ಪ್ರೆಷರ್ ಹಾಕಿ. ಇದು ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ. ಜೊತೆಗೆ ಲಿಬಿಡೋ ಹಾರ್ಮೋನ್ ಬಿಡುಗಡೆಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.