ಸಾವಿನ ಮನೆಯಲ್ಲೂ ಸೆಲ್ಫಿ ಕೇಳಿದ ಫ್ಯಾನ್: ಮುಜುಗರಕ್ಕೊಳಗಾದರು ತಾಳ್ಮೆ ವಹಿಸಿದ ವಿದ್ಯಾ ಬಾಲನ್

By Anusha Kb  |  First Published Feb 28, 2024, 4:23 PM IST

common sense is not so common ಎಂಬ ಮಾತಿನಂತೆ ಕೆಲವರಿಗೆ ವಿದ್ಯೆ ಇದ್ದರೂ ಕಾಮನ್‌ಸೆನ್ಸ್ ಎಂಬುದೇ ಇರುವುದಿಲ್ಲ, ಎಲ್ಲಿ ಹೇಗೆ ವರ್ತಿಸಬೇಕು ಎಂಬುದರ ಅರಿವಿರುವುದಿಲ್ಲ, ಇದರಿಂದ ಇನ್ಯಾರೋ ಮುಜುಗರಕ್ಕೀಡಾಗಬೇಕಾಗುತ್ತದೆ.


common sense is not so common ಎಂಬ ಮಾತಿನಂತೆ ಕೆಲವರಿಗೆ ವಿದ್ಯೆ ಇದ್ದರೂ ಕಾಮನ್‌ಸೆನ್ಸ್ ಎಂಬುದೇ ಇರುವುದಿಲ್ಲ, ಎಲ್ಲಿ ಹೇಗೆ ವರ್ತಿಸಬೇಕು ಎಂಬುದರ ಅರಿವಿರುವುದಿಲ್ಲ, ಇದರಿಂದ ಇನ್ಯಾರೋ ಮುಜುಗರಕ್ಕೀಡಾಗಬೇಕಾಗುತ್ತದೆ. ಅದೇ ರೀತಿಯ ಅನುಭವ ಈಗ ಬಾಲಿವುಡ್ ನಟಿ ವಿದ್ಯಾ ಬಾಲನ್‌ಗೆ ಆಗಿದೆ. ಬಾಲಿವುಡ್‌ ನಟಿ ವಿದ್ಯಾಬಾಲನ್ ಇತ್ತೀಚೆಗೆ ನಿಧನರಾದ ಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ಅವರ ಅಂತಿಮ ದರ್ಶನಕ್ಕಾಗಿ ಅವರ ಮನೆಗೆ ತೆರಳಿದ್ದ ವೇಳೆ  ಅಭಿಮಾನಿಯೊರ್ವ ನಟಿಯೊಂದಿಗೆ ಸೆಲ್ಫಿಗೆ ಮುಗಿಬಿದ್ದಿದ್ದು, ಇದರಿಂದ ನಟಿ ತೀವ್ರ ಮುಜುಗರಕ್ಕೀಡಾಗಿದ್ದಾರೆ.  ಆದರೂ ತಾಳ್ಮೆ ವಹಿಸಿದ ನಟಿ ಸಂಯಮದಿಂದಲೇ ವರ್ತಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು,  ನೆಟ್ಟಿಗರು ಈ ರೀತಿಯ ಜನರ ಹುಚ್ಚು ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸೆಲೆಬ್ರಿಟಿಗಳಾಗಿ ಬದುಕುವುದು ಬಹಳ ಕಷ್ಟದ ಕೆಲಸ ಸೆಲೆಬ್ರಿಟಿಗಳು ಸಿನಿಮಾ ನಟರು ಎಂದ ಮೇಲೆ ಅವರಿಗೆ ವೈಯಕ್ತಿಕ ಬದುಕೇ ಇರುವುದಿಲ್ಲ, ಹೋದಲೆಲ್ಲಾ ಅಭಿಮಾನಿಗಳು ಸುತ್ತುವರೆದು ಬಿಡುತ್ತಾರೆ. ಓರ್ವ ಸಾಮಾನ್ಯರಂತೆ ಅವರಿಗೆ ಎಂದಿಗೂ ಸಮಯ ಕಳೆಯಲು ಆಗುವುದಿಲ್ಲ. ಬಹುತೇಕ ತಾಳ್ಮೆಯಿಂದಲೇ ವರ್ತಿಸುವ ನಟ ನಟಿಯರು ಸಹಿಸಲು ಸಾಧ್ಯವಾಗದಾಗ ತೆಗೆದು ಬಾರಿಸಿಬಿಡುತ್ತಾರೆ. ಅನೇಕ ನಟ ನಟಿಯರು ಅಭಿಮಾನಿಗಳಿಗೆ ಹೊಡೆದ ಘಟನೆ ಸಾಕಷ್ಟು ನಡೆದಿವೆ. ನಂತರ ಜನ ನಟನಟಿಯರನ್ನೇ ಅಭಿಮಾನಿಗಳಿಗೆ ಹೊಡೆದರು ಎಂದು ಬೈದಾಡಲು ಶುರು ಮಾಡುತ್ತಾರೆ. ಆದರೆ ಇಲ್ಲಿ ವಿದ್ಯಾ ಬಾಲನ್ ಬಹಳ ಸಂಯಮದಿಂದ ವರ್ತಿಸಿದ್ದಾರೆ. 

Tap to resize

Latest Videos

ನಾನು ಕೈ ಚೆಲ್ಲಿದಾಗ ದೇವರು ಕೈ ಹಿಡಿದಿದ್ದಾನೆ, ಇದು ದೈವ ಪ್ರೇರಣೆ; ಗುಟ್ಟು ಹೇಳ್ಬಿಟ್ರಾ ವಿದ್ಯಾ ಬಾಲನ್!

ಖುಷಿಯ ಕ್ಷಣಗಳಲ್ಲಿ ಸೆಲ್ಪಿ ಕೇಳಿದರೆ ಓಕೆ ಆದರೆ ಎಲ್ಲರೂ ಕಣ್ಣೀರಿಡುತ್ತಿರುವ ಈ ಸಾವಿನ ಮನೆಯಲ್ಲೂ ಜನ ಸೆಲ್ಫಿ ಕೇಳುವ ಬಗ್ಗೆ ಕೆಲ ವಿಚಿತ್ರ ವ್ಯಕ್ತಿಗಳ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ಕಾಣಿಸುವಂತೆ ನಟಿ ವಿದ್ಯಾ ಬಾಲನ್ ಪಂಕಜ್ ಉದಾಸ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದು, ಈ ವೇಳೆ ಅಭಿಮಾನಿಯೋರ್ವ ಸೆಲ್ಫಿ ನೀಡುವಂತೆ ಬಹಳ ದೂರದವರೆಗೆ ಹಿಂದಿಂದಿನಿಂದಲೇ ಬಂದಿದ್ದಾನೆ. ಈ ವೇಳೆ ವಿದ್ಯಾ ಬಾಲನ್ ಅವರ ಸಹಾಯಕಿ ಆತನನ್ನು ಸೆಲ್ಫಿ ತೆಗೆಯದಂತೆ ಮನವಿ ಮಾಡಿದರು ಆತ ಕೇಳಿಲ್ಲ, ಆದರೆ ವಿದ್ಯಾ ಬಾಲನ್ ಮಾತ್ರ ಆತನಿಗೆ ಏನು ಹೇಳದೇ ಬಹಳ ತಾಳ್ಮೆಯಿಂದ ವರ್ತಿಸಿದ್ದಾರೆ. 

ಅಭಿಮಾನಿಯೋರ್ವನ ಅತಿರೇಕದ ವರ್ತನೆಯ ನಂತರವೂ ವಿದ್ಯಾ ಬಾಲನ್ ಸಂಯಮದಿಂದ ವರ್ತಿಸಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅಭಿಮಾನಿಗಳ ವರ್ತನೆ ಅವಮಾನಕಾರಿ ಎಂದು ಕೆಲವರು ಕಿಡಿಕಾರಿದ್ದಾರೆ. 

'ಡರ್ಟಿ ಪಿಕ್ಚರ್‌'ನಲ್ಲಿ ಬೆತ್ತಲಾಗಿದ್ದ ವಿದ್ಯಾ ಬಾಲನ್‌, ಸಿಲ್ಕ್ ಸ್ಮಿತಾ ಪಾತ್ರ ಮಾಡಿದ ನಂತರ ಜೀವನಾನೇ ಬದಲಾಯ್ತಂತೆ!

ಫೆಬ್ರವರಿ 26 ರಂದು ಪಂಕಜ್ ಉದಾಸ್ ಅವರು ಸಾವನ್ನಪ್ಪಿದ್ದರು.  ಫೆಬ್ರವರಿ 27 ರಂದು ಅವರ ಅಂತಿಮ ಕ್ರಿಯೆ ಇತ್ತು.  ಪಂಕಜ್ ಅವರ ನಿಧನದಿಂದ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ಅವರ ಪುತ್ರಿ ಹಾಗೂ ಪತ್ನಿ ಬಿಕ್ಕಿ ಬಿಕ್ಕಿ ಅಳುತ್ತಿರುವ ವೀಡಿಯೋಗಳು ವೈರಲ್ ಆಗಿವೆ. ಇದರ ಮಧ್ಯೆ ಪಂಕಜ್ ಅವರ ಸಾಕಷ್ಟು ಅಭಿಮಾನಿಗಳು ಆಗಮಿಸಿ ಖ್ಯಾತ ಗಝಲ್ ಗಾಯಕನ ಅಂತಿಮ ದರ್ಶನ ಪಡೆದಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by Voompla (@voompla)

 

 

click me!