ಭಾರತದಲ್ಲಿ ಸಾಕಷ್ಟು ಸಾಂಪ್ರದಾಯಿಕ ಉಡುಪುಗಳಿವೆ. ಅನೇಕ ಉಡುಗೆ, ಧರಿಸುವ ವಿಧಾನಗಳ ಬಗ್ಗೆಯೇ ನಮಗೆ ಗೊತ್ತಿಲ್ಲ. ಆದ್ರೆ ವಿದೇಶಿಗರು ನಮಗಿಂತ ಹೆಚ್ಚು ತಿಳಿದಂತಿದೆ. ಈ ವಿಡಿಯೋ ನೋಡಿದ್ರೆ ನಿಮಗೆ ಅರ್ಥವಾಗುತ್ತೆ.
ಸಾಮಾಜಿಕ ಜಾಲತಾಣಗಳು ದೇಶ ದೇಶದ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಿದೆ. ಇದಕ್ಕೆ ಅನೇಕ ಉದಾಹರಣೆ ಈಗಾಗಲೇ ಸಿಕ್ಕಿದೆ. ರೀಲ್ಸ್, ಯುಟ್ಯೂಬ್ ವಿಡಿಯೋಗಳಲ್ಲಿ ವಿದೇಶಿಗನೊಬ್ಬ ಕನ್ನಡದ ಹಾಡುಗಳನ್ನು ಹಾಡೋದು, ವಿದೇಶಿ ಮಹಿಳೆಯರು ಸುಂದರ ಸೀರೆ ಧರಿಸೋದನ್ನು ನೀವು ನೋಡಿರ್ತಿರಿ. ಕಾಲ ಬದಲಾದಂತೆ ನಾವು ಬದಲಾಗ್ತಿದ್ದೇವೆ. ಭಾರತದ ಸಂಸ್ಕೃತಿ ಭವ್ಯ ಪರಂಪರೆ ಬಗ್ಗೆ ಭಾರತೀಯರಿಗೆ ಸರಿಯಾಗಿ ತಿಳಿದಿಲ್ಲ. ಆದ್ರೆ ವಿದೇಶಿಯರು ಅದನ್ನು ಇಷ್ಟಪಡ್ತಿದ್ದಾರೆ. ಭಾರತೀಯ ಬಟ್ಟೆಗಳನ್ನು ಧರಿಸುತ್ತಿದ್ದಾರೆ.
ಇದು ಆಧುನಿಕ ಕಾಲವಾದ ಕಾರಣ ಸೀರೆ (Saree) ಧರಿಸುವ, ಧೋತಿ (Dhoti) ಧರಿಸಲು ಜನರಿಗೆ ಸಮಯ ಸಿಗ್ತಿಲ್ಲ. ಅದನ್ನು ಧರಿಸೋದು ಹೇಗೆ ಎಂಬುದು ನಮ್ಮವರಿಗೇ ಸರಿಯಾಗಿ ತಿಳಿದಿಲ್ಲ. ಪೂಜೆ, ಹಬ್ಬಗಳಲ್ಲೂ ವಿದೇಶಿ ಜೀನ್ಸ್ ಪ್ಯಾಂಟ್ ನಮ್ಮನ್ನು ಆವರಿಸಿದೆ. ಅತೀ ಅನಿವಾರ್ಯ ಎಂದಾಗ ಜನರು ಧೋತಿ ಧರಿಸಲು ತಡಕಾಡ್ತಾರೆ. ಹಾಗಾಗಿಯೇ ರೆಡಿಮೆಡ್ ಧೋತಿ ಮಾರುಕಟ್ಟೆ ಆಳ್ತಿದೆ. ಅದೇನೇ ಇರಲಿ, ವಿದೇಶಿಗನೊಬ್ಬ ದಕ್ಷಿಣ ಭಾರತದ ಪ್ರಸಿದ್ಧ, ಸಾಂಪ್ರದಾಯಿ ಉಡುಗೆ ಧೋತಿಯನ್ನು ಪ್ರೀತಿಯಿಂದ, ಪರ್ಫೆಕ್ಟ್ ಆಗಿ ಧರಿಸಿದಾಗ ಒಂದು ಶಹಬ್ಬಾಸ್ ನೀಡ್ಲೇಬೇಕು. ಸಾಮಾಜಿಕ ಜಾಲತಾಣದಲ್ಲಿ ದಕ್ಷಿಣ ಕೊರಿಯಾ (South Korea) ವ್ಯಕ್ತಿಯೊಬ್ಬನ ಧೋತಿ ಧರಿಸುವ ವಿಡಿಯೋ ವೈರಲ್ ಆಗಿದೆ.
ಬ್ಲ್ಯಾಕ್ ಆ್ಯಂಡ್ ವೈಟ್ ಸ್ಯಾರಿಯಲ್ಲಿ ಮಿಂಚಿದ ನಮ್ರತಾ ಗೌಡ ಸ್ನೇಹಿತ್ ಒಳ್ಳೆ ಹುಡ್ಗ ಎಂದ ಫ್ಯಾನ್ಸ್!
ಬೇ ಯುನ್ ಸೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನರಿಗೆ ಹತ್ತಿರವಾಗಿದ್ದಾನೆ. ಈಗ ಬೇ ಯುನ್ ಸ, ದಕ್ಷಿಣ ಭಾರತದ ಸಾಂಪ್ರದಾಯಿ ಉಡುಗೆ ಧೋತಿಯನ್ನು ಧರಿಸಿದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾನೆ. ಬೇ ಯುನ್ ಸೂ ಬಿಳಿ ಬಣ್ಣದ ಧೋತಿ ಧರಿಸಿದ್ದಾನೆ. ಅದರ ಮೇಲೊಂದು ಬಿಳಿ ಬಣ್ಣದ ಕುರ್ತಾ ಹಾಕಿದ್ದಾನೆ. ಅದಕ್ಕೆ ಒಪ್ಪುವ ಶಾಲ್ ಒಂದನ್ನು ಹೆಗಲ ಮೇಲೆ ಹಾಕಿಕೊಂಡು ಫೋಸ್ ನೀಡಿದ್ದಾನೆ.
ಇಲ್ಲಿ ಬೇ ಯುನ್ ಸೂ ಧೋತಿ ಧರಿಸಿದ ವಿಧಾನ ಗಮನ ಸೆಳೆದಿದೆ. ಭಾರತೀಯರನ್ನು ನಾಚಿಸುವಂತೆ ಈತ ಧೋತಿ ಧರಿಸಿದ್ದಾನೆ. ಈ ಪಂಜೆ ತಿರುಪತಿಯಿಂದ ಬಂದಿದ್ದು ಎಂದು ಬೇ ಯುನ್ ಸೂ ಹೇಳಿದ್ದಾನೆ. ಆತನ ಆಪ್ತ ಸ್ನೇಹಿತನ ತಂದೆ – ತಾಯಿ ಈ ಧೋತಿಯನ್ನು ತಿರುಪತಿಯಿಂದ ಕಳುಹಿಸಿದ್ದಾರೆ.
ಭಾರತವು ಹಲವಾರು ಸಾಂಪ್ರದಾಯಿಕ ಬಟ್ಟೆಗಳನ್ನು ಹೊಂದಿದೆ. ಎಲ್ಲವೂ ತುಂಬಾ ಸುಂದರವಾಗಿದೆ. ಅದಕ್ಕಾಗಿಯೇ ನಾನು ಭಾರತೀಯ ಸಾಂಪ್ರದಾಯಿಕ ಫ್ಯಾಷನ್ ಅನ್ನು ಪ್ರೀತಿಸುತ್ತೇನೆ ಮತ್ತು ನಾನು ಅದನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ಆತ್ಮೀಯ ಸ್ನೇಹಿತನ ಪೋಷಕರು ತಿರುಪತಿಯಿಂದ ಈ ಸುಂದರವಾದ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯನ್ನು ಧೋತಿ ಮತ್ತು ಪಂಚಕಟ್ಟನ್ನು ನನಗೆ ಕಳುಹಿಸಿದ್ದಾರೆ. ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಭಗವಂತ ಬಾಲಾಜಿಯ ದೈವಿಕ ಆಶೀರ್ವಾದವನ್ನು ಪಡೆದಿದ್ದೇನೆ ಎಂದು ಬೇ ಯುನ್ ಸೂ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾನೆ.
12 ಗಂಟೆಕ್ಕಿಂತಲೂ ಹೆಚ್ಚು ಹೊತ್ತು ಬ್ರಾ ಧರಿಸಿದರೆ ಆರೋಗ್ಯಕ್ಕೆ ಕುತ್ತು!
ಬೇ ಯುನ್ ಸೂ ವಿಡಿಯೋವನ್ನು ಈವರೆಗೆ 1.9 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬೇ ಯುನ್ ಸೂ ಧೋತಿ ಧರಿಸಿದ್ದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ನಿಮ್ಮನ್ನು ಆಧಾರ್ ಕೇಂದ್ರಕ್ಕೆ ಕರೆದುಕೊಂಡು ಹೋಗ್ತೇನೆ, ನೀವಿನ್ನು ಭಾರತೀಯರು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದ ಹುಡುಗರಿಗೇ ಧೋತಿ ಧರಿಸಲು ಬರೋದಿಲ್ಲ. ಅಂಥವರು ಇವರನ್ನು ನೋಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಾನು ತೆಲುಗು ಮತ್ತು ದಕ್ಷಿಣ ಭಾರತೀಯ. ನನ್ನ ಸಂಸ್ಕೃತಿಯು ನಿಮ್ಮ ದೇಶವನ್ನು ತಲುಪಿದೆ. ಇದು ಖುಷಿ ನೀಡುತ್ತದೆ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾನೆ.